
ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹೇಮಗಿರಿತಪ್ಪಲಿನಲ್ಲಿ ಇರುವ ಓಡೇಬೈರುವ ಸನ್ನಿಧಿಯಲ್ಲಿ ಸಾಂಪ್ರದಾಯಕವಾಗಿ ಬಾಯಿ ಕವಳ ಅಥವಾ ಭಂಗಿ ಸೇವೆ ನಡೆಯಿತು ಮಂಡ್ಯ ತುಮಕೂರು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ಕುಳಿತು ಮಧ್ಯ ಸೇವನೆ ಮಾಡಿ ತಮ್ಮ ಇಷ್ಟಾರ್ಥವನ್ನು ಈಡೇರಿಸು ಭಗವಂತ ಎಂದು ಬೇಡಿಕೊಂಡರು, ವಡೆಭೈರವನ ಸನ್ನಿಧಿಯಲ್ಲಿ ಮಧ್ಯ ಸೇವನೆ ಮಾಡುವುದು

ವಿಶೇಷ ಕಾರ್ಯಕ್ರಮವಾಗಿದೆ ಈ ನೆಲೆಯಲ್ಲಿ ಬೆಳಿಗ್ಗೆ ದೇವಾಲಯಕ್ಕೆ ವಿಶೇಷವಾದ ಪೂಜೆ ಹಾಗೂ ದೇವರ ವಿಗ್ರಹಕ್ಕೆ ವಿಶೇಷವಾದ ಅಭಿಷೇಕ ಅಲಂಕಾರ ನಡೆದವು, ನಂತರ ದೇವಾಲಯದ ಕೆಳಭಾಗದಲ್ಲಿ ಇಡಲಾಗಿದ್ದ ಬೃಹತ್ ಡ್ರಂಗಳಲ್ಲಿ ಭಕ್ತರು ತಂದಿದ್ದ ವಿಸ್ಕಿ ಬ್ರಾಂದಿ ಜಿನ್ ಸೇರಿದಂತೆ ಹಲವಾರು ವಿವಿಧ ಸಾವಿರಾರು ಮಧ್ಯದ ಬಾಟಲುಗಳನ್ನು ಸುರಿದು ಎಲ್ಲವನ್ನೂ ಕೂಡ ಮಿಶ್ರಗೊಳಿಸಿ ಭಕ್ತರಿಗೆ ಸರತಿ ಸಾಲಿನಲ್ಲಿ ಕೂರಿಸಿ ಬಿರಿಯಾನಿ ಚಿಕನ್ನು ಮಟನ್ ಜೊತೆ ಕಡ್ಲೆಪುರಿ ಹಾಗೂ ಎಣ್ಣೆಯನ್ನು ನೀಡಲಾಯಿತು,

ಅಣ್ಣ ತಮ್ಮ ಅಕ್ಕ ತಂಗಿ ಅಪ್ಪ ಮಗ ಪುರುಷ ಮಹಿಳೆ ಎಂಬ ಭೇದ ಭಾವ ಇಲ್ಲದೆ ಎಲ್ಲರೂ ಕೂಡ ಒಟ್ಟಾಗಿ ಸರತಿ ಸಾಲಿನಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಒಡೆಭೈರವನಾ ಕೃಪೆಗೆ ಪಾತ್ರರಾದರು, ಸ್ಥಳೀಯರು ಹೇಳುವಂತೆ ಹಲವಾರು ದಶಕಗಳ ಹಿಂದೆ ಈ ರೀತಿ ಕಾರ್ಯಕ್ರಮವನ್ನು ಆರಂಭಿಸಿದ್ದು ಈಗಲೂ ಕೂಡ ನಡೆಯುತ್ತಾ ಬಂದಿದೆ ಇದಕ್ಕೆ ಬಾಯಿ ಕವಳ ಅಥವಾ ಭಂಗಿ ಸೇವೆ ಎಂದು ಕರೆಯುತ್ತಾರೆ,+
ಹೇಮಗಿರಿ ಬೆಟ್ಟದ ತಪ್ಪಲಿನ ಸುತ್ತಲೂ 7 ಕಿ.ಮೀ ಸಿದ್ದರ ವಾಸ ಸ್ಥಳವಾಗಿದೆ ಇಲ್ಲಿನ ಹಲವಾರು ಗುಡ್ಡ ಪ್ರದೇಶಗಳಲ್ಲಿ ಸಿದ್ದರು ಇಂದಿಗೂ ಕೂಡ ಜೀವಂತವಾಗಿ ವಾಸಿಸುತ್ತಿದ್ದಾರೆ ಎಂಬ ನಂಬಿಕೆಗಳಿವೆ, ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ಸತ್ತ ದೇಹಗಳನ್ನು ಸುಟ್ಟರೆ ತಲೆ ಸಿಡಿಯುವುದಿಲ್ಲ ಎಂದು ಇಲ್ಲಿನ ವಾಸಿಗಳು ಹೇಳುತ್ತಾರೆ, ಈ ಭಾಗದ ಹಲವಾರು ಬೆಟ್ಟ ಗುಡ್ಡಗಳಲ್ಲಿ ಸಿದ್ದರು ವಾಸಿಸುತ್ತಿದ್ದು ಸಂಕ್ರಾಂತಿ ನಂತರ ಹೇಮಗಿರಿ ಜಾತ್ರೆ ಮುಗಿದ ಬಳಿಕ ಒಡೆಬೈರುವನಿಗೆ ನಡೆಯುವ ಭಂಗಿ ಸೇವೆಯ ನಂತರ ರಾತ್ರಿ ಎಲ್ಲರೂ ಕೂಡ ಒಟ್ಟಾಗಿ ಸೇರಿತ್ತಿದ್ದರು ಇಲ್ಲಿ ತಮ್ಮದೇ ಆದ ಔತಣ ಮಾಡುತ್ತಾರೆ ಅದಕ್ಕಾಗಿ ರಾತ್ರಿ ವೇಳೆ ಸಾರ್ವಜನಿಕರ ಪ್ರವೇಶ ನಿಷಿದ್ದ ಎಂದು ಸ್ಥಳೀಯರು ಹೇಳುತ್ತಾರೆ, ಇಂತಹ ನಂಬಿಕೆಯಿಂದನೂ ಕೂಡ ಹಲವಾರು ದಶಕಗಳಿಂದ ಓಡೆಬೈರವನಿಗೆ ಮಧ್ಯದ ಆರಾಧನೆಯನ್ನು ಮಾಡುತ್ತಾ ಬಂದಿರುವುದು ಇಂದಿಗೂ ಕೂಡ ಜೀವಂತವಾಗಿದೆ

