Tuesday, February 24, 2026

ನಾಪತ್ತೆಯಾಗಿದ್ದ ವೃದ್ಧ ಕೆರೆಯಲ್ಲಿ ಶವವಾಗಿ

ತಾಲೂಕಿನ ಗಿರಿ ಗೌಡನ ಪಾಳ್ಯದ ಉಮೇಶ್ (60) ಹಲವಾರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೇಗೂರು ಕೆರೆಯ ಬಳಿ ಆತನ ಕೆರೆಯ ಬಳಿ ಕೆಲವು ಬಟ್ಟೆ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು ಕೊಳೆತ ವೃತ್ತ ದೇಹವನ್ನು ಕೆರೆಯಿಂದ ತೆಗೆದಿದ್ದಾರೆ

ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೆ ಪೊಲೀಸರು ಜೊತೆಗೂಡಿ ಆರಂಭಿಸಿದ ಕಾರ್ಯಾಚರಣೆ ಮಧ್ಯಾಹ್ನ 3:00 ವರೆಗೆ ಸತತವಾಗಿ ನಡೆಯಿತು ಕೊಳೆತ ದೇಹವನ್ನು ಪೊಲೀಸರು ಪತ್ತೆ ಹಚ್ಚಿ ಸಂಬಂಧಿಕರಿಗೆ ತಲುಪಿಸುವ ಉದ್ದೇಶದಿಂದ ಕುಣಿಗಲ್ ಸಾರ್ವಜನಿಕ ವೈದ್ಯರ ಸಲಹೆ ಮೇರೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಡಿಎನ್ಎ ಪರೀಕ್ಷೆಗಾಗಿ ಕಳುಹಿಸಿದ್ದಾರೆ

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles