Tuesday, February 24, 2026

ಕಾಡು ಗೊಲ್ಲರ ಯುವತಿ ಅಪಹರಣಕ್ಕೆ ಯತ್ನ ಯೂಟೂಬರ್ ಸೇರಿದಂತೆ ಹಲವರ ರ ಬಂಧನ!


ಮಾಗಡಿ ಪಕ್ಕದಲ್ಲಿ ದೂರದಲ್ಲಿರುವ ತಟವಾಳು ಗೊಲ್ಲರಹಟ್ಟಿ ಗ್ರಾಮ ಅಪ್ರಾಪ್ತ ಯುವತಿಯನ್ನು ಅಪಹರಣ ಕಾರಿನಲ್ಲಿ ಅಪಹರಣ ಮಾಡಿದರೂ ಎನ್ನು ಆರೋಪ ಇದೆ

ರವಿ ಕೆಂಪ ಸೇರಿದಂತೆ ಇತರರನ್ನು ಗ್ರಾಮಸ್ಥರೆ ಹಿಡಿದು ಮಾಗಡಿಯ ಠಾಣೆಗೆ ಒಪ್ಪಸಿ ದೂರು ನೀಡಿದ್ದಾರೆ

ಘಟನೆ ಹಿನ್ನೆಲೆ :-
ಹೊಸ ವರ್ಷ ಆಚರಿಸಲೆಂದು ವೆಂಕಟೇಶ್ ಅವರು ತಮ್ಮ ತೋಟದಲ್ಲಿ ಯೂಟೂಬರ್ ಮತ್ತು INSTAGRAM ರೀಲ್ಸ್ ಮೇಕರ್ ಗಳನ್ನು ಕರೆದು, ಮಧ್ಯ ಹಾಗೂ ಬಾಡೂಟ ಏರ್ಪಡಿಸಲಾಗಿತ್ತು ಇನ್ನಲಾಗಿದೆ

ಕಂಠ ಪೂರ್ತಿ ಮದ್ಯ ಹಾಗೂ ಬಾಡೂಟ ಸೇವನೆ ಮಾಡಿದ್ದ ಯೂಟೂಬರ್ ರವಿ ತೋಟದಿಂದ ತಡರಾತ್ರಿ ಗೊಲ್ಲರಹಟ್ಟಿ ಗ್ರಾಮದ ಒಳಗೆ ಪ್ರವೇಶಿಸಿ ಕುಡಿದ ಮತ್ತಿನಲ್ಲಿ ಅಪ್ರಾಪ್ತ ಯುವತಿಯನ್ನು ಸಲುಗೆಯಿಂದ ಮಾತನಾಡಿ ಪುಸಲಾಯಿಸಿ ಯುವತಿ ಬಾಯಿ ಮುಚ್ಚಿ ತನ್ನ ಕಾರಿನ ಒಳಕ್ಕೆ ಎಳೆದುಕೊಂಡು ನಿರ್ಜನ ಪ್ರದೇಶಕ್ಕೆ ಅಪಹರಿಸಿದ್ದು ಕುಡಿದ ಅಮಲಿನಲ್ಲಿದ್ದ ಆರೋಪಿ ದಾರಿ ತಿಳಿಯದೆ ಗ್ರಾಮದ ಸುತ್ತಮುಲ ಪ್ರದೇಶದಲ್ಲಿಯೇ ಸುತ್ತಾಡಿ ಕೊನೆಗೆ ಮೂತ್ರ ವಿಸರ್ಜನೆಗೆ ಕಾರಿನಿಂದಿಳಿದಾಗ ಯುವತಿ ತನ್ನ ಮನೆಯ ಮೊಬೈಲ್ ಅಲ್ಲೇ ಇದ್ದ ಫೋನಿಂದ ಕರೆಮಾಡಿ ತನ್ನನ್ನು ರಕ್ಷಣೆ ಮಾಡುವಂತೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ

ಗ್ರಾಮಸ್ಥರು,ಗ್ರಾಮದ ಸುತ್ತಾಮುತ್ತಾ ಪ್ರದೇಶಗಳಿಗೆ ತಮ್ಮ ವಾಹನಗಳಲ್ಲಿ ತೆರಳಿದ್ದ ಸಮಯದಲ್ಲಿ,ಹುಲಿಯೂರುದುರ್ಗ, ಮಾಗಡಿ ಮುಖ್ಯರಸ್ತೆಯಲ್ಲಿ ಅನುಮಾನಗೊಂಡು ರವಿಯ ಕಾರನ್ನು

ಅಡ್ಡಗಟ್ಟಿದ ಗ್ರಾಮಸ್ಥರಿಗೆ ರವಿ ತನ್ನ ಕೃತ್ಯ ಬಯಲಾಗುತ್ತದೆ ಎಂದು ಎಚ್ಚರಗೊಂಡು ಕಾರನ್ನು ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಮಾಗಡಿ ಕಡೆಗೆ ಹೊರಟಿದ್ದು ಯುವತಿಯ ಸಂಬಂದಿಕರು ರವಿಯ ಕಾರನ್ನು ಸಿನಿಮೀಯ ರೀತಿಯಲ್ಲಿ ತಡೆದು ಸೋಮೇಶ್ವರ ಕಾಲೋನಿಯ ಬಳಿ ಅಡಗಟ್ಟಿದ್ದರ ಪರಿಣಾಮ ರವಿ ತನ್ನ ಕಾರಿನಿಂದ ತಪ್ಪಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿ ಗ್ರಾಮಸ್ಥರ ಕೈಗೆ ಯುವತಿಯ ಸಹಿತ ಸಿಕ್ಕಿಬಿದ್ದಿದ್ದಾನೆ,


ನಂತರ ಯುವತಿಯನ್ನು ರಕ್ಷಿಸಿ ಅಪಹರಣ ಮಾಡಲೆತ್ನಿಸಿದ ಯೂಟಬ್ ರವಿಯನ್ನು ಪೋಲೀಸರ ವಶಕ್ಕೆ ಒಪ್ಪಿಸಿದ ಘಟನೆ ಸಂಭವಿಸಿದ್ದು, ಈ ಸಂಬಂದ ಮಾಗಡಿ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ,

ಆರೋಪಿ ರವಿ ಜೋತೆಯಲ್ಲಿ ತಡರಾತ್ರಿ ಎಣ್ಣೆ ಪಾರ್ಟಿಯಲ್ಲಿ ತೋಡಗಿದ್ದ ಮಂಡ್ಯ ಮೂಲದ ಸಕ್ಕರೆ ನಾಡು ಕೆಂಪ ಎಂಬಾತನಿಗೆ ಮಾಗಡಿ ಪೊಲೀಸ್ ಠಾಣೆಯ ಬಳಿ ಬರುತ್ತಿದ್ದ ಹಾಗೆ ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿದರು

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles