Friday, July 4, 2025

ದೇಗುಲ’ ಎಂದು ತಾಜ್‌ಮಹಲ್‌ನಲ್ಲಿ ಗಂಗಾಜಲ ಅರ್ಪಿಸಿದ ಇಬ್ಬರ ಬಂಧನ

ಆಗ್ರಾದ ಪ್ರಸಿದ್ಧ ಪ್ರವಾಸಿ ಸ್ಥಳ ತಾಜ್‌ಮಹಲ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿಯಲ್ಲಿ ತಂದಿದ್ದ ‘ಗಂಗಾಜಲ’ ಅರ್ಪಿಸಿದ ಬಲಪಂಥೀಯ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಇಬ್ಬರು ವ್ಯಕ್ತಿಗಳನ್ನುಪೊಲೀಸರು ಬಂಧಿಸಿದ್ದಾರೆ.

ಆಗ್ರಾದ ಪ್ರಸಿದ್ಧ ಪ್ರವಾಸಿ ಸ್ಥಳ ತಾಜ್‌ಮಹಲ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿಯಲ್ಲಿ ತಂದಿದ್ದ ‘ಗಂಗಾಜಲ’ ಅರ್ಪಿಸಿದ ಬಲಪಂಥೀಯ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಇಬ್ಬರು ವ್ಯಕ್ತಿಗಳನ್ನುಪೊಲೀಸರು ಬಂಧಿಸಿದ್ದಾರೆ.  ಬಲಪಂಥೀಯ ಸಂಘಟನೆಯಾದ ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರೆಂದು ಹೇಳಿಕೊಂಡ ಇಬ್ಬರು ಶ್ರಾವಣ ಶನಿವಾರ ಸಂದರ್ಭದಲ್ಲಿ ತಾಜ್‌ಮಹಲ್‌ ಒಳಗೆ ಟಿಕೆಟ್‌ ಪಡೆದು ಪ್ರವೇಶಿಸಿದ್ದಾರೆ. ಈ ವೇಳೆ ಸಮಾಧಿಯ ನೆಲಮಾಳಿಗೆಗೆ ಹೋಗುವ ಸಂದರ್ಭದಲ್ಲಿ ಮುಚ್ಚಿದ ಮೆಟ್ಟಿಲಿನ ಮೇಲೆ ನೀರಿನ ಬಾಟಲಿಯಲ್ಲಿದ್ದ ಗಂಗಾ ಜಲವನ್ನು ಅರ್ಪಿಸಿದ್ದಾರೆ. ಇವರು ನೀರು ಸುರಿಯುತ್ತಿದ್ದಂತೆ, ಭದ್ರತಾ ಸಿಬ್ಬಂದಿಯು ಇಬ್ಬರನ್ನೂ ಬಂಧಿಸಿದ್ದಾರೆ.

ತಾಜ್‌ಮಹಲ್‌ ಶಿವಮಂದಿರವಾಗಿದೆ. ಅದರ ಮೂಲ ಹೆಸರು ‘ತೇಜೋಮಹಲ್‌’ ಹೀಗಾಗಿ ಪವಿತ್ರ ಗಂಗಾಜಲ ಅರ್ಪಿಸಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ. ತಾಜ್‌ಮಹಲ್‌ ತೇಜೋಮಹಲ್‌ ಎಂದು ಬದಲಾಯಿಸಬೇಕು ಎಂಬ ವಿವಾದದ ನಡುವೆಯೇ ಈ ಘಟನೆ ನಡೆದಿದೆ. ಇಬ್ಬರು ಗಂಗಾಜಲ ಸುರಿಯುತ್ತಿರುವ ವಿಡಿಯೋ ವೈರಲ್‌ ಆಗಿದೆ. ಕೆಲ ದಿನಗಳ ಹಿಂದಷ್ಟೇ ಅಖಿಲ ಬಾರತ ಹಿಂದೂ ಮಹಾಸಭಾದ ಸದಸ್ಯೆಯೊಬ್ಬರು ಗಂಗಾಜಲ ಅರ್ಪಿಸುವುದಕ್ಕೆ ಯತ್ನಿಸಿದ್ದರು,

About The Author

Related Articles

Stay Connected

0FansLike
0FollowersFollow
22,400SubscribersSubscribe
- Advertisement -spot_img

Latest Articles