ತೆಂಗಿನ ಸಸಿ ನೆಡುವ ಗುಂಡಿ ತೆಗೆಯುವ ಕೂಲಿ ಮಾಡಿ ನಾಲ್ಕು ಸಾವಿರ ಸಂಪಾದಿಸಿ ಗುರಿ ಸಾಧಿಸಿದ್ದು ಅಂದು ತಾಯಿ ತೋರಿದ ಅಭಿಮಾನ ಬಡತನದ ನೋವು ನನ್ನನ್ನು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ ಆಗುವಂತೆ ಪ್ರೇರೇಪಣೆ ಮಾಡಿದೆ ಎಂದು ಡಾ. ಎಚ್ ಎಲ್ ನಾಗರಾಜು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ,
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ,,ಕ್ರೀಡೆ, ಎನ್ಎಸ್ಎಸ್, ರೋವರ್ ಮತ್ತು ರೆಂಜರ್ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಚಟುವಟಿಕೆ ಸಮಾರಂಭ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,
ತಾಲೂಕಿನ ಕೊತ್ತಕೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಜನಿಸಿ ಪ್ರತಿ ದಿನ ಹೊಲಗದ್ದೆಯಲ್ಲಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಪಡೆಯಲು ಬೇರೆಯವರ ಮನೆಯ ತೆಂಗಿನ ತೋಟದಲ್ಲಿ ಗುಂಡಿ ತೆಗೆಯುವ ಕೆಲಸ ಮಾಡಿ ಮೂರು ರೂಪಾಯಿ ಸಂಬಳ ಸಂಪಾದಿಸುತ್ತಿದ್ದೆ ಶಿಕ್ಷಣಕ್ಕೆ ಬೇಕಾದ ಅಗತ್ಯತೆಗಳನ್ನು ಈ ಕೂಲಿಯಿಂದಲೇ ಪೂರೈಸಿಕೊಂಡು ನಾನು ಬದುಕುತ್ತಿದ್ದೆ ಇಂತಹ ಸಂದರ್ಭದಲ್ಲಿ ಆಯಾಸದಿಂದ ಪ್ರಜ್ಞಹೀನನಾಗಿದ್ದಾಗ ತಾಯಿ ಮಗ ಸತ್ತನೆಂದು ಕಣ್ಣೀರು ಹಾಕಿದ ಘಟನೆಯನ್ನು ನೆನಪಿಸಿಕೊಂಡು ವೇದಿಕೆ ಮೇಲೆ ಕಣ್ಣೀರಿಟ್ಟರು,
ಈ ಘಟನೆಯಿಂದ ವೇದಿಕೆಯ ಮೇಲಿದ್ದ ಗಣ್ಯರು ಸೇರಿದಂತೆ ವಿದ್ಯಾರ್ಥಿಗಳ ಕಣ್ಣಲ್ಲಿ ನೀರುಜಿನುಗಲು ಆರಂಭಿಸಿತ್ತು,ತಾವು ಅನುಭವಿಸಿದ್ದ ಬಡತನ ಹಾಗೂ ಛಲದಿಂದ ಶಿಕ್ಷಣ ಕಲಿತ ಹಲವಾರು ಘಟನೆಗಳನ್ನು ವಿವರವಾಗಿ ವಿದ್ಯಾರ್ಥಿಗಳಿಗೆ ಹೇಳುವ ಮುಖಾಂತರ ಅವರ ಮನಸ್ಸಿನಲ್ಲಿ ಹಲವಾರು ಚೈತನ್ಯದ ಶಕ್ತಿ ತುಂಬುವ ಪ್ರಯತ್ನ ಮಾಡಿದರು,ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ ಜೀವನದಲ್ಲಿ ಕಾಲೇಜು ಜೀವನ ಉತ್ತಮ ಸುಖಕರ ಆಗಬಾರದು ಶ್ರಮ ಶ್ರದ್ಧೆ ನಿಷ್ಠೆ ಸಾಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮುಂದಿನ ನಿಮ್ಮ ಬದುಕು ಸುಖಕರ ಆಗುತ್ತದೆ ಎಂದರು,
ಕಾಲೇಜು ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾಕ್ಟರ್ ಗೋವಿಂದರಾಯ ಮಾತನಾಡಿ ಕಾಲೇಜಿನಲ್ಲಿ ಕಲಿಯುವ ವಿದ್ಯಾಭ್ಯಾಸ ನಿಮ್ಮ ಶಿಕ್ಷಣದ ಗುಣಮಟ್ಟ ಮತ್ತು ಅಂಕವನ್ನು ಬದಲಿಸುತ್ತದೆ ಜೊತೆ ಜೊತೆಯಲ್ಲಿ ತಂದೆ ತಾಯಿ ಗುರು ಹಿರಿಯರು ಸಮಾಜ ಸ್ನೇಹಿತರು ಇವರುಗಳಿಂದ ಕಳೆಯುವ ಶಿಕ್ಷಣ ನಿಮ್ಮ ಸಂಸ್ಕಾರದ ಜೊತೆಗೆ ಉತ್ತಮ ಬಾಂಧವ್ಯವನ್ನು ಸಮಾಜದಲ್ಲಿ ಬೆಳೆಸುತ್ತದೆ ಎಂದರು,ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಯಬೇಕೆಂದು ಸಲಹೆ ನೀಡಿದರು ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಅಭಿನಂದಿಸಲಾಯಿತು,ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಪ್ರೊ ಮಾಯಾ ಸಾರಂಗಪಾಣಿ,ಪ್ರೊ ರಾಮಾ ನಂಜಪ್ಪ, ಡಾ. ಶಿವಕುಮಾರ್, ಡಾ. ರವೀಶ್ ಜಿಎಸ್, ಪ್ರೊ ಹನುಮಂತಪ್ಪ ಪ್ರೊ ನಾರಾಯಣದಾಸ್ ಪ್ರೊ ಶ್ರೀನಿವಾಸ ಪ್ರಭು ಪ್ರೊ ನಾಗಮ್ಮ ಪ್ರೋ ಸುರೇಶ್ ಪ್ರೊ ರುಕ್ಮಿಣಿ ಸೇರಿದಂತೆ ಹಲವಾರು ಕಾಲೇಜು ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರೂ