Saturday, July 5, 2025

ಸಮಾಜದಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯ

ಕುಣಿಗಲ್ :-ಸಮಾಜದ ಎಲ್ಲಾ ಸಮಸ್ಯೆಗಳಿಗೆ ಬಡವ, ಶ್ರೀಮಂತ, ಅಧಿಕಾರಿಗಳು ಎಂಬ ಭೇದಭಾವ ಇಲ್ಲದೆ ಸ್ಪಂದಿಸುವ ಪತ್ರಕರ್ತರ ಬಗ್ಗೆ ಸಮಾಜದ ಕಾಳಜಿ ಮತ್ತು ಸಹಕಾರ ಅವಶ್ಯಕತೆ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್ ತಿಳಿಸಿದ್ದಾರೆ

ಪತ್ರಕರ್ತರ ರಾಜ್ಯ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಕುಣಿಗಲ್ ಪಟ್ಟಣಕ್ಕೆ ಆಗಮಿಸಿದ ಕ್ರೀಡಾ ಜ್ಯೋತಿಯ ನೇತೃತ್ವ ವಹಿಸಿ ಮಾತನಾಡಿದರುಕಳೆದ ಬಾರಿ ರಾಜ್ಯ ಪತ್ರಕರ್ತರ ರಾಜ್ಯ ಕ್ರೀಡಾಕೂಟವನ್ನು ಮಂಗಳೂರಿನಲ್ಲಿ ಏರ್ಪಡಿಸಿದ್ದು ಉತ್ತಮ ರೀತಿ ಕ್ರೀಡೆ ನಡೆಯಿತು ಹಲವಾರು ಸಚಿವರು ಪತ್ರಕರ್ತರ ಜೊತೆಯಲ್ಲಿ ಕ್ರೀಡೆ ಆಡುವ ಮುಖಾಂತರ ಸಂತಸ ಪಟ್ಟರು,ಅದರಂತೆ ಈ ವರ್ಷ ಕಲ್ಪತರು ನಾಡು ತುಮಕೂರಿನಲ್ಲಿ ಏರ್ಪಡಿಸಲು ಸಂಘದ ತೀರ್ಮಾನ ಉತ್ತಮ ಬೆಳವಣಿಗೆ ಆಗಿದೆ ತುಮಕೂರು ಜಿಲ್ಲಾ ಕೇಂದ್ರದಿಂದ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಜ್ಯೋತಿ ಯಾತ್ರೆಯ ರಥವನ್ನು ಸ್ವತಹಚಲಿಸುವ ಮುಖಾಂತರ ಚಾಲನೆ ನೀಡಿದ್ದು, ಉತ್ತಮ ಬೆಳವಣಿಗೆ ಆಗಿದೆ ಎಂದರು,

ಕುಣಿಗಲ್ ನಲ್ಲೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿ ವರ್ಗದವರು ಶಾಲಾ ವಿದ್ಯಾರ್ಥಿಗಳು, ಸೇರಿದಂತೆ ತಾಲೂಕು ಆಡಳಿತ ಉತ್ತಮ ರೀತಿಯಲ್ಲಿ ಸ್ವಾಗತಿಸಿದೆ ಎಂದರು.ಬಿಡುವಿಲ್ಲದೆ ಹಗಲು ಇರುಳು ಸಮಾಜದ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಪತ್ರಕರ್ತರ ಮನಸ್ಸು ಮತ್ತು ದೇಹದ ಆರೋಗ್ಯದ ದೃಷ್ಟಿ ಹಿನ್ನೆಲೆಯಲ್ಲಿ ಈ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ ಜಿಲ್ಲಾಧ್ಯಕ್ಷರ ಉತ್ತಮ ಸ್ಪಂದನೆ ಸಿಕ್ಕಿರುವುದು ಅಭಿನಂದನಾ ವಿಚಾರ ಎಂದರು

ಪಟ್ಟಣದ ತುಮಕೂರು ರಸ್ತೆಯಿಂದ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿ ಮುಖ್ಯ ಬೀದಿಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತರು ಶಾಲಾ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಮೆರವಣಿಗೆ ನಡೆಸಿ ತಹಸಿಲ್ದಾರ್ ಕಚೇರಿಯ ಮುಂಭಾಗದಲ್ಲಿ ಸಂಘಟನೆಗೊಂಡರು,

ವೇದಿಕೆ ಕಾರ್ಯಕ್ರಮದ ನಂತರ ಕ್ರೀಡಾ ಜ್ಯೋತಿಯನ್ನು ತುರುವೇಕೆರೆಗೆ ಬೀಳ್ಕೊಡಲಾಯಿತು,ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ತಹಸಿಲ್ದಾರ್ ರಶ್ಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ, ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಸಿದ್ಧಲಿಂಗ ಸ್ವಾಮಿ, ಪುರಸಭಾ ಮುಖ್ಯ ಅಧಿಕಾರಿ ಮಂಜುಳಾ, ಪತ್ರಕರ್ತರ ಜಿಲ್ಲಾ ಕಾರ್ಯದರ್ಶಿ ರಘುರಾಮ್, ಕ್ರೀಡಾ ಸಂಚಾಲಕ ಸತೀಶ್, ಪದ್ಮನಾಭ. ರಾಷ್ಟ್ರೀಯ ಮಂಡಳಿಯ ಸದಸ್ಯ ಮಧುಕರ್, ಶಾಂತಕುಮಾರ್, ರವಿಕುಮಾರ್, ಸಿದ್ದೇಶ್, ಸುರೇಶ್, ಕುಣಿಗಲ್ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಂಗನಾಥ ಸೇರಿದಂತೆ ಹಲವರು ಪತ್ರಕರ್ತರು ಇದ್ದರು

About The Author

Related Articles

Stay Connected

0FansLike
0FollowersFollow
22,400SubscribersSubscribe
- Advertisement -spot_img

Latest Articles