ಶೆಡ್ ಗೆ ಹೋಗೋಣ ಬಾ ಎಂದು ಗೆಳೆಯನನ್ನು ಕರೆದು ಕೊಲೆ ಮಾಡಿ ಆಸಾಮಿ ನಾಪತ್ತೆ ಆಗಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ
ಕೊಲೆಯಾದ ವ್ಯಕ್ತಿ ರವಿ (40) ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗರಹಳ್ಳಿ ಗ್ರಾಮದ ವಾಸಿಯಾಗಿದ್ದು ಕೆಲವು ದಿನಗಳಿಂದ ತನ್ನ ನಿತ್ಯದ ಗಾರೆ ಕೆಲಸ ಮುಗಿಸಿ ಸ್ನೇಹಿತನ ಜೊತೆ ಶೆಡ್ನಲ್ಲಿ ಮಲಗುತ್ತಿದ್ದ
ಸೋಮವಾರ ಶೆಡ್ ನಲ್ಲಿ ಕೊಲೆ ಆಗಿರುವುದಕ್ಕೆ ಪೊಲೀಸರಿಗೆ ಮಾಹಿತಿ ಬಂದಿದೆ ಮೃತಪಟ್ಟ ವ್ಯಕ್ತಿ ಪತ್ನಿ ಭಾಗ್ಯ ಹಾಗೂ ಮಗಳು ಸಂಧ್ಯಾ ಮತ್ತು ಮಗ ಹರ್ಷನನ್ನು ಅಗಲಿದ್ದಾರೆ,
ಜೊತೆಯಲ್ಲಿದ್ದ ಸ್ನೇಹಿತ ಶಿವಕುಮಾರ ಈತನನ್ನ ಕೊಲೆ ಮಾಡಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು ಆತನ ಫೋನ್ ಸ್ವಿಚ್ ಆಫ್ ಆಗಿದೆ 😂ತಲೆಮರಿಸಿಕೊಂಡಿರುವ ವ್ಯಕ್ತಿಯ ಶೋಧ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ,
ಗಾರೆ ಕೆಲಸಗಾರನಾಗಿದ್ದ ರವಿ ತನ್ನ ಸ್ನೇಹಿತ ಶೆಡ್ಡಿಗೆ ಹೋಗಿದ್ದಾಗ ಕೊಲೆಯಾಗಿದ್ದಾನೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಿವಕುಮಾರ್ ಹಾಗೂ ರವಿ ಸ್ನೇಹಿತರಾಗಿದ್ದರು. ಸ್ನೇಹಿತ ಶಿವಕುಮಾರ್ ಕರೆದ ಎಂದು ರವಿ ಭಾನುವಾರ ಶೆಡ್ಡಿಗೆ ತೆರಳಿದ್ದ.
ಶಿವಕುಮಾರ್ ಹಾಗೂ ರವಿ ನಡುವೆ ಶೆಡ್‌ನಲ್ಲಿ ಗಲಾಟೆ ನಡೆದಿರುವ ಶಂಕೆ ಇದೆ. ಇಬ್ಬರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿ ರವಿಯ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ತಲೆಯ ಮೇಲೆ ಹಾಲೋಬ್ರಿಕ್ಸ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಲಾಗಿದೆ.
ಸ್ಥಳಕ್ಕೆ ತುಮಕೂರು ಎಎಸ್ಪಿ ಮರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕ ಯಾರೆಂದು ತಿಳಿಯಲು ತನಿಖೆಯನ್ನು ಮುಂದುವರಿಸಿದ್ದಾರೆ.