Tuesday, February 24, 2026

ಭಾನುವಾರ ಬೆಟ್ಟ ಹಳ್ಳಿ ಮಠದಲ್ಲಿ ಹಿತೈಷಿಗಳ ಸಮಾವೇಶ

ಬೆಟ್ಟಹಳ್ಳಿ ಮಠದಲ್ಲಿ ಜನವರಿ 4ರ ಭಾನುವಾರ ಸಾಧಕರಿಗೆ ಉರಿಲಿಂಗಶ್ರೀ ಮತ್ತು ನೀಲಕಂಠಶ್ರೀ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಬೆಟ್ಟಹಳ್ಳಿ ಮಠವು ಧಾರ್ಮಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು ಪ್ರತಿವರ್ಷದಂತೆ ಈ ಮಠದಲ್ಲಿ ನಡೆಯುವ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಮಾವೇಶ ಜನವರಿ 4ರ ಭಾನುವಾರ ಏರ್ಪಡಿಸಲಾಗಿದ್ದು

.ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹಳೆಯ ವಿದ್ಯಾರ್ಥಿಗಳು ಹಾಗೂ ಭಕ್ತರು ಆಗಮಿಸಿದ್ದಲ್ಲಿದ್ದಾರೆ ಈ ಬಾರಿ ಉರಿಲಿಂಗ ಪ್ರಶಸ್ತಿಯನ್ನು ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ಎಮ್ ಸುರೇಶ್ ಅವರಿಗೆ ನೀಲಕಂಠ ಪ್ರಶಸ್ತಿಯನ್ನು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಡಿ ಪಿ ದಾಸ ರವರಿಗೆ ಸೇರಿದಂತೆ ಗುರು ರಕ್ಷೆಯನ್ನು ಯಲಿಯೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗಂಗಾಶಾನಯ್ಯ , ಎಸ್ ಎಲ್ ವಿ ವ್ಯವಸ್ಥಾಪಕರಾದ ಕೋಗಟ್ಟ ರಾಜಣ್ಣ ಕುಣಿಗಲ್ ಪುರಸಭಾ ಮಾಜಿ ಅಧ್ಯಕ್ಷರಾದ ರಂಗಸ್ವಾಮಿ ಬೆಂಗಳೂರಿನ ಉದ್ಯಮಿ ಆರ್ ಕುಮಾರ್ ಹಾಗೂ ಮೂಗನಪುರದ ಬಸವರಾಜು ಸೇರಿದಂತೆ ಹಲವಾರು ಸಾಧಕರಿಗೆ ಗುರು ರಕ್ಷೆ ನೀಡಲಿದ್ದೇವೆ

.ಸಂಜೆ 7:00ಗೆ ನಡೆಯುವ ವೇದಿಕೆ ಕಾರ್ಯ ಕ್ರಮಕ್ಕೆ ಹಲವಾರು ಗಣ್ಯರು ರಾಜಕೀಯ ಪ್ರಮುಖ ವ್ಯಕ್ತಿಗಳು ಸೇರಿದಂತೆ ವಿವಿಧ ಭಾಗದಿಂದ ಭಕ್ತರು ಆಗಮಿಸಲಿದ್ದು ಮಠದಲ್ಲಿ ವಾಹನ ವ್ಯವಸ್ಥೆ ಕುಡಿಯುವ ನೀರು ಪ್ರಸಾದ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನ ಮಠ ನಿರ್ವಹಿಸಲಿದೆ

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles