ತಾಲೂಕಿನ ಎಡೆಯೂರು ಶ್ರೀಕ್ಷೇತ್ರದ ಆವರಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯನ್ನು ವರನ ಮೊದಲ ಪತ್ನಿ ಸೇರಿದಂತೆ ಪೊಲೀಸರು ತಡೆದು ಆರೋಪಿ ವರನನ್ನು ಅಮೃತೂರು ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ .

ಬೆಂಗಳೂರಿನ ಆರ್ ಆರ್ ನಗರ ಮೂಲದ ಹರಿಪ್ರಸಾದ್ ತನ್ನ ಮೊದಲ ಹೆಂಡತಿ ಲೇಪಾಕ್ಷಿಗೆ ವಿಚ್ಛೇದನ ನೀಡದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪುಣ್ಯ ಎಂಬಾಕೆಯನ್ನು ಎರಡನೇ ಮದುವೆ ಮಾಡಿಕೊಳ್ಳುವಾಗ ಎಡೆಯೂರಿನ ಕಲ್ಯಾಣ ಮಂಟಪದಲ್ಲಿ ಪೊಲೀಸರ ಜೊತೆ ಮದುವೆ ಮಂಟಪಕ್ಕೆ ಎಂಟ್ರಿಕೊಟ್ಟ ಲೇಪಾಕ್ಷಿ ಸಿನಿಮಾ ಮಾದರಿಯಲ್ಲಿ ಮದುವೆ ತಡೆದಿದ್ದಾರೆ.ಮದುಮಗ ಹರಿಪ್ರಸಾದ್ ತನ್ನ ಬಾಲ್ಯ ಸ್ನೇಹಿತೆ ಲೇಪಾಕ್ಷಿಯನ್ನು ಮದುವೆಯಾಗಿದ್ದ ಸಂದರ್ಭದಲ್ಲಿ ಆಕೆ ಅಪ್ರಾಪ್ತೆ ಎಂದು ತಿಳಿದ ನಂತರ ಮದುವೆಯನ್ನು ಗುಟ್ಟಾಗಿ ಇಟ್ಟು ನಂತರ ಪುನಹ ಆಕೆಗೆ 18 ವರ್ಷ ತುಂಬಿದ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾಗಿ 10 ವರ್ಷ ಸಂಸಾರ ನಡೆಸಲಾಗಿತ್ತು .
ದಿನ ಕಳೆದಂತೆ ಲೇಪಾಕ್ಷಿಗೆ ತನ್ನ ಅತ್ತೆ ನಾದಿನಿ ಸೇರಿದಂತೆ ಗಂಡ ಹೆಚ್ಚು ತೊಂದರೆ ನೀಡುತ್ತಿದ್ದರು ಹಾಗೂ ಆಕೆಯ ಸಂಬಳವನ್ನು ಕಸಿದುಕೊಂಡು ಮಾನಸಿಕ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆಕೆ ದೂರಿದ್ದು ಆತನ ಕೆಲ ಅಕ್ರಮ ಸಂಬಂಧಗಳ ವಿಚಾರವಾಗಿ ಕೌಟುಂಬಿಕ ಕಲಹ ನಡೆಯುತ್ತಿತ್ತು ಎಂದು ಲೇಪಾಕ್ಷಿ ತಿಳಿಸಿದ್ದಾರೆ .ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮನನೊಂದ ಲೇಪಾಕ್ಷಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹಾಕಿದ್ದರು
ಈ ಸಂಬಂಧ ಮಧ್ಯಸ್ಥಿಕೆ ನ್ಯಾಯದಲ್ಲಿ ಪುನಹ ಲೇಪಾಕ್ಷಿ ಜೊತೆಗೆ ಬಂದು ಬಾಳುವುದಾಗಿ ವಾಟ್ಸಾಪ್ತಿ ಮುಖಾಂತರ ತಿಳಿಸಿದ ಹರಿಪ್ರಸಾದ್ ಇತ್ತ ಮತ್ತೊಂದು ಮದುವೆಯಾಗಲು ಮೊದಲ ಪತ್ನಿಗೆ ತಿಳಿಯದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಪುಣ್ಯಶ್ರೀ ಎಂಬುವರ ಜೊತೆ ಮದುವೆ ನಿಗದಿ ಮಾಡಿಕೊಂಡು ಯಡಿಯೂರಿನ ಕಲ್ಯಾಣಮಂಟಪದಲ್ಲಿ ಈ ದಿನ ಹಸೆಮಣೆ ಏರಿದ್ದ ವಿಚಾರ ತಿಳಿಯುತ್ತಿದ್ದಂತ ಮೊದಲ ಪತ್ನಿ ವಕೀಲರು ಹಾಗೂ ಪೊಲೀಸರ ಜೊತೆಗೂಡಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಂಡನ ಮದುವೆಯನ್ನು ತಡೆದಿದ್ದಾರೆ .

ಎರಡು ಹೆಣ್ಣುಗಳಿಗೆ ಅನ್ಯಾಯಮೊದಲ ಪತ್ನಿ ಲೇಪಾಕ್ಷಿಗೆ ತಿಳಿಯದಂತೆ ಮತ್ತೊಬ್ಬಳನ್ನು ಮದುವೆಯಾಗಲು ತಯಾರಿ ನಡೆಸಿದ ಹರಿಪ್ರಸಾದ್ ತನ್ನ ಜಾತಿಯನ್ನು ಮುಚ್ಚಿಟ್ಟು ತಾನು ಕೂಡ ಒಕ್ಕಲಿಗ ಎಂದು ಸುಳ್ಳು ಹೇಳಿ ಆಕೆಯ ತಾಯಿ ಮತ್ತು ಯುವತಿಗೆ ಮನವೊಲಿಸಿ ಮೋಸ ಮಾಡಿದ್ದಾನೆ ಎಂದು ಆಕೆ ಸಂಬಂಧಿಗಳು ದೂರಿದ್ದಾರೆ.

ದಾಖಲಾಗದ ಎರಡು ಪ್ರಕರಣಹರಿಪ್ರಸಾದ್ ವಿಚ್ಛೇದನೆ ಪಡೆಯದೆ ಮತ್ತೊಂದು ಮದುವೆಗೆ ಸಿದ್ಧತೆ ಬಗ್ಗೆ ಅಮೃತೂರ್ ಪೊಲೀಸ್ ಠಾಣೆಗೆ ಮೊದಲ ಪತ್ನಿ ದೂರು ನೀಡಿದ್ದು ಅದೇ ರೀತಿ ಹಣಕಾಸು ಒಡವೆ ಹಾಗೂ ಸುಳ್ಳು ಹೇಳಿ ಮದುವೆಗೆ ಒಪ್ಪಿಸಿದ್ದಾನೆ ಎಂದು ಪುಣ್ಯಶ್ರೀ ದೂರು ನೀಡಿದ್ದು ಎರಡು ಪ್ರಕರಣಗಳನ್ನು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸುತ್ತೇವೆ ಎಂದು ಪೊಲೀಸರು ಕೈಚಲಿದ್ದಾರೆ.

