Tuesday, February 24, 2026

ಮಂಗಳ ಜಲಾಶಯದಿಂದ ನೀರು ಸೋರಿಕೆ

ತಾಲೂಕಿನ ಮಂಗಳ ಜಲಾಶಯದಲ್ಲಿ ಮಂಗಳವಾರ ತಡರಾತ್ರಿ ಏರಿಯಲ್ಲಿ ನೀರಿನ ಸೋರಿಕೆ ಉಂಟಾಗಿ 1 ಕ್ಯೂಸೆಕ್ಸ್ ನೀರು ಪೋಲಾಗಿದ್ದು ಅಧಿಕಾರಿಗಳು ಜಾಗರೂಕತೆಯಿಂದ ಡ್ಯಾಂ ಸುರಕ್ಷತೆಯಾಗಿದ್ದು ಸ್ಥಳಕ್ಕೆ ಶಾಸಕ ಡಾ.ರಂಗನಾಥ್ ಸೇರಿದಂತೆ ಹಲವಾರು ಅದಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು.

ನಾಗಿನಿ ನದಿಗೆ ಅಡ್ಡಲಾಗಿ 1961 ರಲ್ಲಿ ಜಲಾಶಯ ನಿರ್ಮಾಣ ಮಾಡಲು ಅಂದಾಜು 60 ಲಕ್ಷದಲ್ಲಿ 14.44 ಮೀಟರ್ ಎತ್ತರ ಮಣ್ಣಿನ ಏರಿ ನಿರ್ಮಾಣ ಮಾಡಿ

ಕಾವೇರಿ ಬೇಸಿನ್ ನಲ್ಲಿ ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿಯ ತಿಗಳರಪಾಳ್ಯದ ಬಳಿ ನಿರ್ಮಿಸಿದ ಡ್ಯಾಂ ನೀರಿನ ಶೇಖರಣಾ ಸಾಮರ್ಥ್ಯ 540 ಎಂಸಿಎಫ್ ಟಿ ಆಗಿದ್ದು 940ಎಕ್ಟೇರ್ ಪ್ರದೇಶದ ಅಚ್ಚುಕಟ್ಟು ಪ್ರದೇಶದಲ್ಲಿ 19 ಹಳ್ಳಿಗಳ ರೈತರ ವ್ಯವಸಾಯಕ್ಕೆ ನೀರು ಒದಗಿಸುವ ಯೋಜನೆ 1969 ರಲ್ಲಿ ಮುಕ್ತಾಯವಾಗಿತ್ತು .

ಕಳೆದ 56 ವರ್ಷದಲ್ಲಿ ಮಂಗಳ ಡ್ಯಾಂ 24 ಸಲ ಮಾತ್ರ ತುಂಬಿದೆ ಕಳೆದ 20 ವರ್ಷದಲ್ಲಿ 4 ಬಾರಿ ಮಾತ್ರ ತುಂಬಿದೆ

ಜಲಾಶಯದ ವಿವರ

ಜಲಾಶಯದಲ್ಲಿನ ತೂಬಿನ ಪಕ್ಕದಲ್ಲಿನ ಕಲ್ಲು ತುಂಡಾದ ಹಿನ್ನೆಲೆಯಲ್ಲಿ ನೀರಿನ ರಭಸಕ್ಕೆ ತೂಬಿನ ಬೇರೆ ಭಾಗದಿಂದ ಹರಿ್ದು ಕಾಲುವೆಗೆ ಸಂಪರ್ಕಗೊಂಡು ಹರಿಯುತ್ತಿ್ತ್ತು ರಾತ್ರಿ ತೋಟದಲ್ಲಿ ಪಂಪ್ ಸೆಟ್ ನಿರ್ವಹಣೆಗೆಂದು ಹೋಗುತ್ತಿದ್ದ ರೈತರು ಅಂದಾಜು 1 ಗಂಟೆಯ ಸಮಯದಲ್ಲಿ ನೀರಿನ ಅರಿವು ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ತಕ್ಷಣ 2 ಗಂಟೆ ವೇಳೇಗೆ ಅದಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ .3 ಗಂಟೆ ಸಮಯಕ್ಕೆ ಹಲವಾರು ಅಧಿಕಾರಿಗಳು ಮತ್ತು ಜೆಸಿಬಿ ಯಂತ್ರದಿಂದ ಕಾರ್ಯಾಚರಣೆ ಆರಂಭಿಸಿದರು .

ನೀರಿನ ಒತ್ತಡವನ್ನು ತಡೆಯಲು ಮಂಗಳ ಡ್ಯಾಂಗೆ ಅಳವಡಿಸಲಾಗಿರುವ ಕೋಡಿಯ ಕ್ರಷರ್ ಗೇಟ್ ಗಳನ್ನು ಎತ್ತುವುದು ಸುಲಭದ ಮಾತಾಗಿರಲಿಲ್ಲ , ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೇ ಇದ್ದ ಕಾರಣದಿಂದ ಹಾಗೂ ವಿದ್ಯುತ್ ಸಂಪರ್ಕ ಹಾಳಾಗಿದ್ದ ಯಂತ್ರಗಳ ದುರಸ್ಥಿ ಸಮಸ್ಯೆಯಿಂದ ನೀರಾವರಿ ಇಲಾಖಾ ಸಿಬ್ಬಂದಿಗಳು ರಾತ್ರಿಯಿಡೀ ಕ್ರಷರ್ ಗೇಟ್ ತೆರೆಯಲು ಹರಸಾಹಸ ಪಡಬೇಕಾಯಿತು .

ಕೋಡಿಯಲ್ಲಿ ಉಂಟಾದ ನೀರಿನ ಸೋರಿಕೆಯ ಸುಳಿವನ್ನು ಪತ್ತೆ ಹಚ್ಚಿದ ಅಧಿಕಾರಿಗಳು ನೂರಾರು ಟ್ರ್ಯಾಕ್ಟರ್ ಗಳನ್ನು ಮಣ್ನು ತಂದು ಸುರಿದು ನೀರನ್ನು ನಿಯಂತ್ರಿಸುವಲ್ಲಿ ಹರ ಸಾಹಸಪಟ್ಟರು ,

ಮದ್ಯಾಹ್ನ 2 ಗಂಟೆ ವೇಳೆದ ಮೈಸೂರಿನ ಕೆಆರ್ ಎಸ್ ಡ್ಯಾಂನಿಂದ ಬಂದ ಹಲವಾರು ನುರಿತ ನೀರಾವರಿ ತಜ್ಞರಾದ ಮಹೇಶ ತಂಡ ಜೇಡಿ ಮಣ್ಣು ಟಾರ್ಪಲ್ ಮರಳು ಮೂಟೆ ಗಳ ಸಹಾಯದಿಂದ ನೀರನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರೂ ಕೂಡ ಡ್ಯಾಂನಿಂದ 1ಕ್ಯೂಸೆಕ್ಸ್ ನೀರು ಹರಿದು ಹೋಗಿತ್ತು ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಬೆಳೆ ನಷ್ಟ ಆಗಿಲ್ಲ ಎಂದು ತಿಳಿದುಬಂದಿದೆ .

ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಡಿ ನಾಗರಾಜಯ್ಯ ಮಾತಾಡಿ ಜಲಾಶಯದ ಕೋಡಿಯನ್ನು ಮೇಲ್ದರ್ಜೆಗೆಏರಿಸಿದಸಂದರ್ಭದಲ್ಲಿ ಏರಿಯ ಅಗಲೀಕರಣ ಮತ್ತು ತೂಬಿನ ದುರಸ್ಥಿ ಮಾಡಬೇಕೆಂಬ ಪ್ರಸ್ಥಾವನೆ ಇತ್ತು ಅಧಿಖಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಆಗಲಿಲ್ಲ , ಇತ್ತೀಚೆಗೆ ಹೇಮಾವತಿ ಇಲಾಖೆಯಲ್ಲಿ ಸಾವಿರಾರು ಕೋಟಿ ಅನುದಾನ ಬರುತ್ತಿದೆ ಆ ಹಣವನ್ನು ನಾಲೆ , ತೂಬು , ಸೇರಿದಂತೆ ಡ್ಯಾಂಗಾಗಿ ಬಳಸದೇ ಹಳ್ಳಿಗಳಲ್ಲಿ ರಸ್ತೆಗಳ ನಿರ್ಮಾಣ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸರಿಯಾದ ರೀತಿ ಸದ್ಬಳಕೆ ಮಾಡದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಕಿಡಿಕಾರಿ್ದರು..

ನೀರಿನ ಸುರಕ್ಷತೆ ಹಾಗು ರೈತರ ಬೆಳೆಗಳನ್ನು ಗಮನದಲ್ಲಿಟ್ಟು ತಾಂತ್ರಿಕ ಅಧಿಕಾರಿಗಳ ಸಲಹೆ ಪಡೆದು ಹಾಳಾಗಿರುವ ತೂಬುಗಳ ಉನ್ನತೀಕರಣ ಮಾಡುವಂತೆ ಸೂಚಿಸಿದರು .

ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಮಾತನಾಡಿ ಈ ಹಿಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು ಕೂಡ ರೈತರ ಪಾಲಿನ ನೀರು ಬೀದಿ ಪಾಲಾಗಿದೆ ಅಧಿಕಾರಿಗಳು ತಕ್ಷಣ ಕಾಗಾರಿಯನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ದಿ ಪಡಿಸಬೇಕೆಂದರು .

ಈ ಸಂದರ್ಭದಲ್ಲಿ ಹೇಮಾವತಿ ಚೀಪ್ ಇಂಜಿನಿಯರ್ ಫಣಿರಾಜ್ , ಸೂಪರ್ ಡೆಂಟ್ ಕೆ ಎಂ ಬಿಂದಿ , ಎಇಇ ರುದ್ರೇಶ್ ವೀಣಾ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು .

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles