ನಿರ್ಮಾಣ ಹಂತದ ಹೊಸ ಮನೆಯ ಮುಂದಿನ ದಾರಿಯ ಮುಂದೆ ಮಣ್ಣು ಸುರಿದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದು ಕೊನೆಗೆ ಪ್ರಖರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ .
ತಾಲೂಕಿನ ಯಲಿಯೂರು ಗ್ರಾಮದ ಕೋಗಟ್ಟ ರಸ್ತೆಯಲ್ಲಿ. ಸರ್ವೆ ನಂ 10/6 ರಿಂದ ಖರೀದಿಸಿದ್ದ ಬದಲಾದ ಸರ್ವೆ ನಂ 10/15/7 ಕ್ಕೆ ಬದಲಾಗಿ ಗಂಗಮ್ಮ ಹೊನ್ನೇಗೌಡ ಎಂಬುವರು ಮನೆ ನಿರ್ಮಿಸುತ್ತಿದ್ದು ಪಕ್ಕದ ಭೂಮಾಲೀಕ ಸುರೇಶನು ಖರೀದಿಸಿದ್ದಕ್ಕಿಂತ ಮೊದಲು ಖರೀದಿಸಿದ ಮನೆ ಮಾಲೀಕ ಹೊನ್ನೇಗೌಡ ತನ್ನ ಖರೀದಿ ಪತ್ರದಲ್ಲಿ ಓಡಾಡಲು ರಸ್ತೆ ಎಂದು ಬರೆಸಿ ನೊಂದಣಿ ಮಾಡಿಸಿಕೊಂಡಿದ್ದ.
ನಂತರ ರಸ್ತೆಯ ಮೂಲ ಮಾಲೀಕನಿಂದ ಸುರೇಶ ಎಂಬಾತ ಖರೀದಿಸಿದ್ದಾನೆ ನಂತರ ಇಬ್ಬರು ಖರೀದಿದಾರರ ನಡುವೆ ಇದ್ದ ರಸ್ತೆ ವಿವಾದದ ಪ್ರಕರಣದ ನ್ಯಾಯಾಲಯದಲ್ಲಿ ದಾಖಲಾಗಿ ದಾರಿ ಯಾವುದು ಇಲ್ಲ ಎಂಬ ವಾದ ನಡೆಯುತ್ತಿದೆ .
ಈ ಸಂಬಂಧ ಕಳೆದ ಕೆಲ ದಿನಗಳ ಹಿಂದೆ ಎರಡು ಕುಟುಂಬಗಳ ನಡುವೆ ಗಲಾಟೆ ಸಂಭವಿಸಿ ಸುರೇಶ ಹಾಗೂ ಆತನ ಕುಟುಂಬದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿ ಆತ ನ್ಯಾಯಾಲಯದಿಂದ ಬೇಲ್ಪಡೆದು ವಾಪಸ್ ಬಂದಿದ್ದಾನೆ.
ಹೊನ್ನೇಗೌಡ ಎಂಬುವರು ಹೊಸಮನೆ ನಿರ್ಮಿಸಿ ಮಕ್ಕಳ ಮದುವೆ ಮಾಡಬೇಕು ರಸ್ತೆ ದುರಸ್ತಿ ಮಾಡಲು ಹೋದಾಗ ಎರಡು ಕುಟುಂಬಗಳ ನಡುವೆ ಸಾರ್ವಜನಿಕವಾಗಿ ಪೊಲೀಸ್ ಠಾಣೆ ಹಾಗೂ ಅವಾಚ್ಯ ಶಬ್ದಗಳ ನಿಂದನೆ ಆಯಿತು ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶ ನೀಡಿ ಎರಡು ತಂಡದವರನ್ನು ಕುಣಿಗಲ್ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಖರಣ ದಾಖಲಿಸಿದ್ದಾರೆ.

