Saturday, May 30, 2026

ಮದುವೆ ದಿನವೇ ಮಸಣ ಸೇರಿದ ಕುಟುಂಬ

ತಾಲೂಕಿನ ಕೊತ್ತಗೆರೆ ಹೋಬಳಿಯ ಚಿಗನಿ ಪಾಳ್ಯದ ಬಳಿ ಕುಣಿಗಲ್ ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮಂಡ್ಯ ಮೂಲದ ನಾಲ್ಕು ವ್ಯಕ್ತಿಗಳು ಕಾರು ಮತ್ತು ಲಾರಿ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ .

ಮೃತಪಟ್ಟವರು ಮಂಡ್ಯ ಮೂಲದ ಸ್ವರ್ಣನಗರ ನಿವಾಸಿ ಗಳೆಂದು ತಿಳಿದು ಬಂದಿದೆ

ಮೃತ ದಂಪತಿಗಳು ಕುಮಾರ ನರಸಿಂಹಮೂರ್ತಿ(65) ಹಾಗೂ ಆತನ ಪತ್ನಿ ಗಾಯತ್ರಿ(61) , ತಂಗಿ ಕೆಆರ್ ಗಾಯಿತ್ರಿ (60) ಡ್ಯ್ರೆವರ್ ರಘುಕುಮಾರ್ (55)

ಮೃತಪಟ್ಟವರು ,.ಮೃತ ದಂಪತಿಗಳು ತಮ್ಮ 25 ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ತುಮಕೂರಿನ ಬಳಿ ಇರುವ ದೇವರಾಯನ ದುರ್ಗದ ಯೋಗ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಸ್ ಬರುವಾಗ ಈ ಘಟನೆ ನಡೆದಿದೆ.ಮಂಡ್ಯ ನಗರದಲ್ಲಿ ನಡೆಯಬೇಕಾಗಿದ್ದ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧ ವಾಪಸ್ ಹೋಗುವಾಗ ಎದುರಿಗೆ ಬಂದ ಗೊಬ್ಬರ ತುಂಬಿದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಹಾಗೂ ಪ್ರಯಾಣಿಕರ ದೇಹದ ಬಿಡಿ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಚೆಲ್ಲಿದ್ದವುಅಪಘಾತ ನಡೆದ ನಂತರ ಕಾರಿನಲ್ಲಿದ್ದ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹಾಗೂ ಸಾರ್ವಜನಿಕರು ಗಂಟೆಗಟ್ಟಲೆ ಹರಸಾಹಸ ಪಡಬೇಕಾಯಿತು

ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಸುಮಾರು ಮೂರು ಕಿಲೋಮೀಟರ್ ವರೆಗೂ ಎಡ ಮತ್ತು ಬಲ ಭಾಗದಲ್ಲಿ ಕಿರಿದಾದ ರಸ್ತೆ ಆದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗಿತ್ತು .ಪೊಲೀಸರು ಸಂಚಾರಿ ಸುಗಮಗೊಳಿಸುವಲ್ಲಿ ಗಂಟೆಗಟ್ಟಲೇ ಸಾಹಸ ಪಟ್ಟು ನಂತರ ರಸ್ತೆ ಸುಲಭ ಸಂಚಾರಕ್ಕೆ ಅನುವು ಮಾಡಿದ್ದರು .

ದಿನನಿತ್ಯ ಸಾವು :-

ಕಳೆದ ಹಲವಾರು ದಿನಗಳಿಂದ ತುಮಕೂರು ಮದ್ದೂರು ಕೆ ಶಿಪ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ ವಾರಾಂತ್ಯದಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಿದೆ ಕಳೆದ ಮೂರು ದಿನಗಳಲ್ಲಿ ಕೊತ್ತಗೆರೆ ಬಳಿ ನಡೆದಂತಹ ಅಪಘಾತದಲ್ಲಿ ಎರಡು , ಗವಿಮಠದ ಬಳಿ ಒಂದು ಸೇರಿದಂತೆ ಈ ಘಟನೆಯಲ್ಲಿ ನಾಲ್ಕು ಮಂದಿ ಸೇರಿ ಒಟ್ಟಾರೆ ಏಳು ಮಂದಿ ಮೃತಪಟ್ಟಿದ್ದಾರೆ

ರಸ್ತೆ ಅಗಲೀಕರಣಕ್ಕೆ ಒತ್ತಾಯ :-

ಕೇಶೀಪ್ರ ರಸ್ತೆ ಅಭಿವೃದ್ಧಿಪಡಿಸುವ ನೆಪದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಭೂಮಿಯನ್ನು ವಶಕ್ಕೆ ಪಡೆದು ಸರ್ಕಾರ ಪರಿಹಾರ ನೀಡಿದೆ ಆದರೆ ಕೆಲವೆಡೆ ಆ ಭೂಮಿಯನ್ನು ಕೂಡ ರಸ್ತೆಗೆ ಬಳಸಿಕೊಳ್ಳದೆ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿಪಡಿಸಿದರೆ ಅಪಘಾತಗಳನ್ನು ತಡೆಯಲು ಸಂಪೂರ್ಣ ಸಾಧ್ಯವಾಗುತ್ತದೆ ಏಕಪದ ರಸ್ತೆಯಿಂದ ದ್ವಿಪದಾರಸ್ತೆಗೆ ಮೇಲ್ದರ್ಜೆಗೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles