ವಸಂತ ವಾಣಿ ವಾರ್ತೆ
ಕುಣಿಗಲ್ ತಾಲೂಕಿನ ಚೌಡನಕುಪ್ಪೆಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಠವನ್ನು ಬೆಟ್ಟಹಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪುನಃ ಹೊಸ ಸ್ವಾಮೀಜಿಯನ್ನು ನೇಮಿಸಿ ಆರಂಭಿಸಿದ್ದಾರೆ
ಕುಣಿಗಲ್ ತಾಲೂಕಿನಲ್ಲಿ ಪ್ರಖ್ಯಾತ ಹಾಗೂ ಧಾರ್ಮಿಕ ಆಧ್ಯಾತ್ಮ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುವ ಕೆಂಪೇಗೌಡರು ನಿರ್ಮಿಸಿದರು ಎನ್ನಲಾದ
ಶ್ರೀ ಬೆಟ್ಟಹಳ್ಳಿ ಮಠ ತನ್ನ ಭಾಗದಲ್ಲಿ 108 ಶಾಖ ಮಠಗಳನ್ನು ಹಲವಾರು ವರ್ಷಗಳ ಹಿಂದೆ ಒಂದಿತ್ತು ಕೆಲವು ಮಠಗಳು ಸ್ವಾಮೀಜಿಗಳ ಕಾಲದ ನಂತರ ಮುಚ್ಚಿ ಹೋಗಿದ್ದವು,

ಮುಂದೆ ಪೀಠದ ಜವಾಬ್ದಾರಿ ಹೊತ್ತಂತಹ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಅವುಗಳನ್ನು ಜೀರ್ಣೋದ್ಧಾರ ಮಾಡುವ ಪುನರ್ ಪ್ರಾರಂಭಿಸುವ ಕನಸು ಕಂಡಿದ್ದರು ಅದರಂತೆ ಚೌಡನ ಕುಪ್ಪೆಯಲ್ಲಿ ಮಠವನ್ನು ಪ್ರಾರಂಭಿಸಿದ್ದರು ತಮ್ಮ ಮಠದಲ್ಲಿದ್ದಂತಹ ವಟುವನ್ನು ಇಲ್ಲಿಗೆ ಸ್ವಾಮೀಜಿಯಾಗಿ ಚನ್ನವೀರ ಶಿವಾಚಾರ್ಯ ಸ್ವಾಮಿಗಳು ನೇಮಕ ಮಾಡಿ ದ್ದಾರೆ

