ಕುಣಿಗಲ್ :-
ಪಟ್ಟಣದ ಮಹಾವೀರ ನಗರದ ವಾಸಿ ಅವಿನಾಶ್ (26) ಮೃತಪಟ್ಟವ ದಾಮಿನಿ ಎಂಬ ಯುವತಿಯನ್ನು ಕಳೆದ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆ ಆಗಿ ಕುಣಿಗಲ್ ಪಟ್ಟಣದಲ್ಲಿ ತನ್ನ ಸ್ವಂತ ಮನೆಯಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದ

ಆಷಾಢ ಮಾಸ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ದಾಮಿನಿ ತನ್ನ ತಂದೆ ಮನೆಗೆ ಹೋಗಿದ್ದರು ಮರಳಿ ಬರುವಂತೆ ಆತ ಪತ್ನಿಗೆ ಕರೆ ಮಾಡಿ ಮಾತನಾಡಿದ ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮುಕಿ ಫೋನ್ ಮುಖಾಂತರ ನಡೆದಿದೆ ಎನ್ನಲಾಗಿದೆ
ಗುರುವಾರ ರಾತ್ರಿ ತನ್ನ ತಮ್ಮನಿಗೆ ವಾಟ್ಸಪ್ ಮುಖಾಂತರ ಅವಳಿಗೆ ಶಿಕ್ಷೆ ಆಗಬೇಕು ಎಂದು ಮತ್ತು ತನ್ನ ಸಾವಿಗೆ ಆಕೆ ಕಾರಣ ಎಂದು ತಿಳಿಸಿದ್ದು ಅಂತಿಮ ಮರಣ ಪತ್ರವನ್ನು ಬರೆದಿದ್ದಾನೆ.
ಬೆಳಿಗ್ಗೆ ಅವಿನಾಶ್ ಇನ್ನು ಎದ್ದಿಲ್ಲ ಎಂದು ಮನೆಯವರು ಬಾಗಿಲು ಒಡೆದು ಒಳ ನೋಡಿದಾಗ ಆತ ನೇಣಿಗೆ ಶರಣಾಗಿರುವ ದೃಶ್ಯ ಕಂಡು ನಂತರ ಸಾರ್ವಜನಿಕರ ಸಹಕಾರದಿಂದ ಪೊಲೀಸರ ಮಾರ್ಗದರ್ಶನದಲ್ಲಿ ಶವವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ .
ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

