Tuesday, February 24, 2026

ರಾಜಕೀಯ ಹತಾಶಗೊಂಡ ಕುಣಿಗಲ್ ಶಾಸಕ – ಶಿವಣ್ಣ ಆರೋಪ

ಕುಣಿಗಲ್ :-ಸಹಕಾರಿ ಕ್ಷೇತ್ರಕ್ಕೆ ಅಧಿಕಾರ ಹಿಡಿಯಬೇಕೆಂಬ ಆಸೆ ವಿಫಲದ ಹಿನ್ನೆಲೆಯಲ್ಲಿ ಶಾಸಕರು ಹತಾಶರಾಗಿದ್ದಾರೆ ಎಂದು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ ಆರೋಪಿಸಿದ್ದಾರೆ

ವಿಧಾನಸಭೆಯಲ್ಲಿ ಕುಣಿಗಲ್ ನ ಪಿ ಎಲ್ ಡಿ ಬ್ಯಾಂಕ್ ಬಗ್ಗೆ ಮಾತನಾಡಿದ ಕುಣಿಗಲ್ ಶಾಸಕರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ ಮಾತನಾಡಿದರು

ತಾಲೂಕಿನಲ್ಲಿ 4 ಲಕ್ಷ ಪಾಣಿ ಇದೆ ಎಂದು ಹಾಗೂ 1 ಲಕ್ಷ ರೈತರಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳಿರುತ್ತಾರೆ ಅದರಲಿ. ಒಬ್ಬರ ಹೆಸರಲ್ಲಿ ಮೂರು ಅಥವಾ ನಾಲ್ಕು ಪಾಣಿ ಇರುತ್ತದೆ ಉದಾಹರಣೆಗೆ 10 ಕುಂಟೆ 20 ಕುಂಟೆ 5 ಗುಂಟೆ 3 ಕುಂಟೆ ಹೀಗೆಲ್ಲ ಇರುತ್ತದೆ

ಬೆಳೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕು, ಗ್ರಾಮೀಣ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕುಗಳು ಉದಾಹರಣೆಗೆ ಕೆನರಾ ಬ್ಯಾಂಕು ಐಡಿಬಿಐ ಬ್ಯಾಂಕು ಕರ್ನಾಟಕ ಬ್ಯಾಂಕ್ ಕಾವೇರಿ ಗ್ರಾಮೀಣ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಹೀಗೆ ಹಲವಾರು ಬ್ಯಾಂಕ್ ಗಳು ಸಾಲ ರೈತರಿಗೆ ನೀಡುತ್ತಿದ್ದು ಎರಡು ಮೂರು ಬ್ಯಾಂಕ್ ಗಳಲ್ಲಿ ನೀಡಲು ಸಾಧ್ಯವಿಲ್ಲ ಎಂಬುದು ಶಾಸಕರಿಗೆ ತಿಳಿದಿಲ್ಲವೇ ಎಂದರು,

ಯಾವುದಾದರೂ ಒಂದು ಬ್ಯಾಂಕಲ್ಲಿ ರೈತ ಸಾಲ ತೆಗೆದುಕೊಂಡರೆ ಮತ್ತೊಂದು ಬ್ಯಾಂಕಿನಲಿ.. ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಇದಲ್ಲದೆ ತಂದೆ ತಾಯಿ ತಾತಂದಿರ ಹೆಸರಲ್ಲಿ ಪಾಣಿ ಇದ್ದು ಮರಣ ಹೊಂದಿದ್ದರು ಪಾಣಿಗಳು ಬದಲಾಯಿಸಿಕೊಂಡಿರಲ್ಲ ಇದರಿಂದ ಪಾಣಿದಾರರ ಸಂಖ್ಯೆ ಒಂದು ಮನೆಯಲ್ಲಿ ಹೆಚ್ಚು ಕಾಣುತ್ತವೆ

ನಮ್ಮ ತಾಲೂಕಿನಲ್ಲಿ ಬ್ಯಾಂಕಿನಿಂದ ಪ್ಯಾಕ್ಸ್ ಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ 10843 ರೈತರಿಗೆ 37.98 ಕೋಟಿಗಳ ಸಾಲ ನೀಡಲಾಗಿದೆ,

ನಮ್ಮ ತಾಲೂಕಿನಿಂದ 79 ರೈತರಿಗೆ ಕೃಷಿ ಅಭಿವೃದ್ಧಿಗಾಗಿ ವಾರ್ಷಿಕ 3% ಬಡ್ಡಿ ದರದಲ್ಲಿ, 4.91 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ.

ಬ್ಯಾಂಕಿಂಗ್ ನಲ್ಲಿ, ಆರ್ಥಿಕ ವರ್ಷ ಏಪ್ರಿಲ್ ನಿಂದ ಮಾರ್ಚ್ ವರೆಗೂ ಇರುತ್ತದೆ 9 ತಿಂಗಳಲ್ಲಿ. ಇಷ್ಟು ರೈತರಿಗೆ ಸಾಲ ನೀಡುತ್ತೇವೆ ಮುಂದಿನ 3 ತಿಂಗಳಲ್ಲಿ ಇನ್ನಷ್ಟು ರೈತರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂಬುದುನಮ್ಮ ತಾಲೂಕಿನಿಂದ 729 ರೈತರಿಗೆ ಪಹಣಿ ಪಡೆದು ಕಡಿಮೆ ಬಡ್ಡಿ ದರದಲ್ಲಿ.. 16 ಕೋಟಿ 59 ಲಕ್ಷ ಚಿನ್ನಾಭರಣ ಸಾಲ ನೀಡಲಾಗಿರುತ್ತದೆ.

ನಮ್ಮ ಬ್ಯಾಂಕಿನಿಂದ ಒಟ್ಟು 12,000 ರೈತರಿಗೆ ಅನುಕೂಲವಾಗಿದೆ 107 ಕೋಟಿ 17 ಲಕ್ಷ ಸಾಲ ರೈತರಲ್ಲದೆ ಬೇರೆ ಗ್ರಾಹಕರಿಗೆ ಗೃಹ ನಿರ್ಮಾಣ ವಾಹನ ಸಾಲ ಹಾಗೂ ಇನ್ನಿತರೆ ಸಾಲಗಳು ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುತ್ತೇವೆ.

ಡಿಸಿಸಿ ಬ್ಯಾಂಕ್ ನಿಂದ ಕೆಸಿಸಿ ಸಾಲ ನೀಡುವಾಗ ನಬಾರ್ಡ್ ಹಾಗೂ ಅಪೇಕ್ಸ್ ಬ್ಯಾಂಕ್ ಹೊರತುಪಡಿಸಿ ಯಾವುದೇ ಅನುದಾನ ಸರ್ಕಾರದಿಂದ ಇರುವುದಿಲ್ಲ.. ನಾವು ಡಿಪೋಸಿಟ‌ರ್ ಹಣದಿಂದಲೇ ಸಾಲ ನೀಡಬೇಕು

ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್ ಬೇಕು ಬೇರೆ ವ್ಯವಹಾರ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌, ತೆರಳುತ್ತಾರೆ ಆದ್ದರಿಂದ ಎಲ್ಲರೂ ಡಿಸಿಸಿ ಬ್ಯಾಂಕ್ ನಲ್ಲಿ.. ವ್ಯವಹಾರ ನಡೆಸಿ ಮುಂದಿನ ದಿನಗಳಲ್ಲಿ.. ಇನ್ನೂ ಹೆಚ್ಚು ರೈತರಿಗೆ ಸಾಲ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ

ಸಹಕಾರ ಸಂಘಗಳಲ್ಲಿ ಮರಣ ಹೊಂದಿ ಸುಸ್ತಿಯಾಗಿರುವ ರೈತರ ಪರವಾಗಿ ಮೃತ ರೈತರ ಸಾಲ ಮನ್ನಾವನ್ನು ನಮ್ಮ ಬ್ಯಾಂಕಿನ ಸ್ವಂತ ಬಂಡವಾಳದಿಂದ ಮನ್ನಾ ಮಾಡಲಾಗುತ್ತಿದೆ ಈ ಯೋಜನೆಗಳು ತುಮಕೂರು ಡಿಸಿಸಿ ಬ್ಯಾಂಕ್ನಿಂದ ಮಾತ್ರ ಮಾಡುತ್ತಿರುತ್ತೇವೆ ಎಂದರು.ಸಂಘ ಸೂಕ್ತ ಸಮಯದಲ್ಲಿ ಚುನಾವಣಾ ನಡೆಸದೇ ಇರುವ ಕಾರಣ ಆ ಸಂಘಕ್ಕೆ ಆಡಳಿತ ಅಧಿಕಾರಿ ಹಾಕಿರುತ್ತಾರೆ.ನಮ್ಮ ಜನರು ಹಾಗೂ ರೈತರುಗಳು ಸಹಕಾರ ಸಂಘಗಳ ಮುಂದೆ ಬಿಸಿಲಿನಲ್ಲಿ ಮಳೆಯಲ್ಲಿ ಪರದಾಡಿಕೊಂಡು ರೇಷನ್‌ ತೆಗೆದುಕೊಳ್ಳುವುದನ್ನು ಗಮನಿಸಿ ನಿರ್ದೇಶಕರ ಮೂಲಕ ಇವರಿಗೆ ತೊಂದರೆಯಾಗದಂತೆ ಶೀಟ್ ಗಳನ್ನು ಈಗಾಗಲೇ 12 ಸಹಕಾರ ಸಂಘಗಳಿಗೆ ಅಳವಡಿಸಿ ಜನರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತಿದ್ದೇವೆ ಸಹಕಾರ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಬೇಕೆಂದು ಆಸೆಯಿಂದ ಬಂದಂತ ಶಾಸಕರು ಸೋಲು ಅನುಭವಿಸಿದರು ಇದರಿಂದ ಆತಾಶಗೊಂಡು ವಿಧಾನಸಭೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಿವೆ, ಯಾವ ರೀತಿ ಕಾರ್ಯನಿರ್ವಹಿಸುತ್ತೇವೆ ಆ ಸಮಸ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ ವ್ಯಾಪ್ತಿ ಮತ್ತು ಚಟುವಟಿಕೆ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯಲಿ ಎಂದು ಸಲಹೆ ನೀಡಿದರುಈ ಸಂದರ್ಭದಲ್ಲಿಟಿಎಪಿಎಂಎಸ್ ಉಪಾಧ್ಯಕ್ಷರಾದ ಕೆಜಿ ಶ್ರೀನಿವಾಸ್ ಹಾಗೂ ನಿರ್ದೇಶಕರಾದ ರಂಗಸ್ವಾಮಿ ಕೃಷ್ಣೇಗೌಡ , ಜೆಡಿಎಸ್ ವಕ್ತಾರ ಪ್ರಕಾಶ್ , ಗ್ರಾ.ಪಂ ಮಾಜಿ ಸದಸಯ ಮಂಜುನಾಥ್ ಸೇರಿದಂತೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles