Saturday, May 30, 2026

ಡಿವೈಡರ್ ಗೆ ಕಾರು ಡಿಕ್ಕಿ ಸ್ಥಳದಲ್ಲಿ ತಾಯಿ ಮಗಳು ಸಾವು

ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಉರ್ಕೇಹಳ್ಳಿ ಬಳಿ ಶ್ರವಣಬೆಳಗೊಳಕ್ಕೆ ಹೋಗುವ ಮಾರ್ಗಮಧ್ಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ತಾಯಿ ಜಯಮಾಲ(59) ಹಾಗೂ ಮಗಳು ರಾಜಲಕ್ಷ್ಮೀ(40) ಸ್ಥಳದಲ್ಲಿ ಮೃತಪಟ್ಟಿದ್ದು , ಮಗ ಪ್ರೀತಮ್ ಹಾಗೂ ಚಾಲಕ ತಮ್ಮ ಮಹಾವೀರ ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ .ತುಮಕೂರಿನಿಂದ ಶ್ರವಣಬೆಳಗೊಳಕ್ಕೆ ಶಾಲೆಗೆ ಸೇರಿಸಲು ಮೊಮ್ಮಗ ಪ್ರೀತಮ್ ನನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕಾರು ಚಾಲಕನ ನಿಯತ್ರಣ ತಪ್ಪಿ ಈ ಘಟನೆ ನಡೆದಿದೆ

ರಸ್ತೆಯಲ್ಲಿ ಅಪಘಾತದ ರಭಸಕ್ಕೆ ದೇಹ ಮತ್ತು ಕಾರಿನ ಬಿಡಿಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಇಬ್ಬರು ಹಿಂಬದಿ ಸವಾರರಾಗಿದ್ದು ಕರು ಸಂಪೂರ್ಣ ಜಖಂಗೊಂಡಿದೆ , ಶವಗಳನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿಕೊಂಡು ಸಿಪಿಐ ಮಾಧ್ಯನಾಯಕ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ .

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles