Wednesday, July 15, 2026

ಕೆಂಕೆರೆ ಶೇಖರಪ್ಪ ನೇತೃತ್ವದಲ್ಲಿ ಕರುನಾಡು ರೈತ ಸಂರಕ್ಷಣಾ ಸೇನೆ

ತಾಲೂಕಿನ ರೈತರ ಏಳಿಗೆಗಾಗಿ ಕರುನಾಡ ರೈತ ಸಂರಕ್ಷಣಾ ಸೇನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ರೈತರ ಸಮಸ್ಯೆ ಹಾಗೂ ಅವರಿಗೆ ಬೇಕಾದ ಸವಲತ್ತುಗಳ ಬಗ್ಗೆ ಹೋರಾಟ ನಡೆಸುವುದಾಗಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಂಜಯ್ ಕುಮಾರ್ ಎಂಕೆ ತಿಳಿಸಿದ್ದಾರೆ.

ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದರು

ರೈತ ನಿರಂತರವಾಗಿ ತನ್ನ ಹೊಲಗದ್ದೆಗಳಲ್ಲಿ ಸಮಾಜಕ್ಕೆ ಬೇಕಾಗಿರುವ ಆಹಾರ ಉತ್ಪಾದನೆ ಮಾಡುವ ಉದ್ದೇಶದಿಂದ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾನೆ ಅಂತಹ ಸಂದರ್ಭದಲ್ಲಿ ರೈತನೆ ಮೇಲೆ ಕ್ರಿಮಿಕೀಟ ಕಾಡು ಪ್ರಾಣಿಗಳು ಸೇರಿದಂತೆ ವಿದ್ಯುತ್ ಅವಗಡಗಳು ಪ್ರತಿನಿತ್ಯ ಸಂಭವಿಸುತ್ತಿರುತ್ತದೆ ಇಂತಹ ವಿಪತ್ತಿನ ಸಮಯದಲ್ಲೂ ಕೂಡ ಈ ಜೀವಕ್ಕೆ ಬೇಕಾದ ಆಹಾರವನ್ನು ಉತ್ಪಾದನೆ ಮಾಡಿ ಕೊನೆಗೆ ತಾನು ಉತ್ಪಾದನೆಗೆ ಅವಶ್ಯಕತೆ ಇರುವಂತಹ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಸರ್ಕಾರದಿಂದ ಪಡೆಯುವ ಸವಲತ್ತುಗಳಿಗಾಗಿ ದಿನಗಟ್ಟಲೆ ಪರಿತಪಿಸಬೇಕಾದ ಪರಿಣಾಮವಿದೆ ಅದಕ್ಕೆ ರೈತರಿಗಾಗಿ ಸಂಘಟನೆ ಪ್ರಾರಂಭ ಮಾಡಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ಮಾಡುತ್ತೇವೆ ಎಂದರು

ಜಿಲ್ಲಾ ಅಧ್ಯಕ್ಷರಾದ ಆಲೆಮನೆ ರಂಗಸ್ವಾಮಿ ಮಾತನಾಡಿ ಹೊಸದಾಗಿ ಸಂಘ ಪ್ರಾರಂಭ ಮಾಡಿದ್ದೇವೆ ಹೆಚ್ಚು ಸದಸ್ಯರನ್ನು ತುಮಕೂರು ಜಿಲ್ಲೆಯ ಆದ್ಯಂತ ನೇಮಿಸಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ನಾವು ತಯಾರಿ ಮಾಡುತ್ತೇವೆ ಎಂದರು

ಕುಣಿಗಲ್ ತಾಲೂಕು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಕೆಂಕೆರೆ ಶೇಖರಪ್ಪ ಪ್ರತಿನಿತ್ಯ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಸಂಘಟನೆಯಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾವು ಸಂಘಟನೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕುಣಿಗಲ್ ಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮಕ್ಕೆ ತಯಾರಿ ಮಾಡುತ್ತೇವೆ ಎಂದರು

ಈ ಸಂದರ್ಭದಲ್ಲಿ ಚಿಕ್ಕಬಳ್ಲಾಪುರ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂದರೇಶ್ , ಉಪಾಧ್ಯಕ್ಷ ಮಂಜುನಾಥ್ , ರಾಮಪ್ಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ , ನಅಗರಾಜು ಗೌರೀಬಿದನೂರು ತಾಲ್ಲೂಕು ಅಧ್ಯಕ್ಷ , ಅಶೊಖ್ ಕುಮಾರ್ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ಪ್ರದಾನ ಕಾಯರ್ದರ್ಶಿ ಸುರೇಶ್ , ಯುವ ರಾಜ್ಯಾಧ್ಯಕ್ಷ ಹೆಬ್ಬರಿ ಮುನಿಯಪ್ಪ , ರಾಜ್ಯ ವರಿಷ್ಠ ಕೋದಂಡರಾಮು ಸೇರಿದಂತೆ ಪದಾಧಿಕಾರಿಗಳು ಇದ್ದರು .

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles