Friday, July 4, 2025
Home Blog

ಸಗಣಿ ಪೇಂಟ್ ಅಭಿಷೇಕ ಸಿದ್ದಲಿಂಗೇಶ್ವರನ ದೇವಾಲಯಕ್ಕೆ

0
Dung paint Abhishek to the temple of Siddalingeshwar
Dung paint Abhishek to the temple of Siddalingeshwar

ತಪೋ ಕ್ಷೇತ್ರ ಕಗ್ಗೆರೆ ದೇವಾಲಯಕ್ಕೆ ಸಗಣಿ ಬಣ್ಣದ ಅಭಿಷೇಕ
ಏನಿದು ಸಗಣಿ ಬಣ್ಣದ ಅಭಿಷೇಕ ಎಂಬ ವಿಚಾರ ನಿಮ್ಮನ್ನು ಗೊಂದಲಕ್ಕೆ ಉಂಟು ಮಾಡಿರಬಹುದು

ಹೌದು ಶ್ರೀ ಸಿದ್ದಲಿಂಗೇಶ್ವರನ ಹುತ್ತದ ಮೇಲೆ ಹಾಲು ಕರೆಯುವ ಹಸುವಿನಿಂದ ಸಂಗ್ರಹಿಸಿದ ಸಗಣಿಯಿಂದ ಬಣ್ಣವನ್ನು ತಯಾರಿಸಿ ಸಿದ್ದಲಿಂಗೇಶ್ವರನ ದೇವಾಲಯಕ್ಕೆ ಪೇಂಟಿಂಗ್ ಮಾಡಲಾಗಿದೆ.


ತಪೋ ಕ್ಷೇತ್ರ ಕಗ್ಗೆರೆಯ ಗ್ರಾಮದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯನ್ನು ನೆಲಮಂಗಲದ ಬಸವಣ್ಣ ದೇವರ ಮಠದ ವತಿಯಿಂದ ನಡೆಸಲಾಗುತ್ತಿತ್ತು
ಈ ಸಂದರ್ಭದಲ್ಲಿ ದೇವಾಲಯಕ್ಕೆ ಬಣ್ಣ ಬಳಿಯುವ ಅನಿವಾರ್ಯತೆ ಇದ್ದ ಕಾರಣ ಸಿದ್ದಲಿಂಗೇಶ್ವರರು ಗೋಪ್ರಿಯರಾಗಿದ್ದರು ಎಂಬ ಕಾರಣಕ್ಕೆ ಗೋ ಉತ್ಪನ್ನವಾದ ಗೋಮಯ ಪೇಂಟಿಂಗ್ ಬಣ್ಣ ಮಾಡಿದ್ದಾರೆ
ದೇವಾಲಯದ ಕಾಮಗಾರಿ ಸಂಪೂರ್ಣ ಮುಕ್ತಾಯ ಹಂತ ತಲುಪಿದ್ದು ಫೆಬ್ರವರಿ 23ರ ಭಾನುವಾರ ಗುರುಗಳ ಪಾದಪೂಜೆ ಮತ್ತು ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ

16ರ ಬಾಲೆಯ ಸಾವಿಗೆ ಲವ್ ಜಿಹಾದ್ ಅನುಮಾನ?

0

ತಾಲೂಕಿನ ಯಡಿಯೂರು ಹೋಬಳಿಯ ನಾಗೇಗೌಡನ ಪಾಳ್ಯದ ದಲಿತ ಬಾಲಕಿಯನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಮುಸಲ್ಮಾನ್ ಯುವಕನ್ನನ ಉಪಟಳದಿಂದ ಬೇಸತ್ತು ನೇಣಿಗೆ ಶರಣಾದ ಘಟನೆ ಅಮೃತವರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ

ಯಡಿಯೂರು ಹೋಬಳಿಯ ನಾಗೇಗೌಡನ ಪಾಳ್ಯದ ಬಾಲಕಿ ಕುಣಿಗಲ್ ಪಟ್ಟಣದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು,
ಕಳೆದ ಕೆಲವು ದಿನಗಳಿಂದ ಮುಸಲ್ಮಾನ್ ಯುವಕನೊಬ್ಬ ಆಕೆಯನ್ನು ಪ್ರೀತಿಸು ಎಂದು ಪ್ರೀತಿಸುತ್ತಾ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ಮಾಡಿದ ಎನ್ನಲಾಗಿದೆ,
ಕಳೆದ ಕೆಲವು ದಿನಗಳ ಹಿಂದೆ ಕುಣಿಗಲ್ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮತ್ತು ಮಹಾತ್ಮ ಗಾಂಧಿ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದ ಈ ಘಟನೆಯಿಂದ ಮನನೊಂದ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,

ಮಗಳ ಸಾವಿನ ನಂತರ ಘಟನೆ ಪೋಷಕರಿಗೆ ತಿಳಿದು ನಂತರ ಅಮೃತೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ

16ರ ಬಾಲೆಯ ಸಾವಿಗೆ ಲವ್ ಜಿಹಾದ್ ನಂಟು

0
16-year-old boy's death linked to love jihad
16-year-old boy's death linked to love jihad

ತಾಲೂಕಿನ ಯಡಿಯೂರು ಹೋಬಳಿಯ ನಾಗೇಗೌಡನ ಪಾಳ್ಯದ ದಲಿತ ಬಾಲಕಿ ಸುಮಾ (16)ಳನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಮುಸಲ್ಮಾನ್ ಯುವಕನನ್ನ ಉಪಟಳದಿಂದ ಬೇಸತ್ತು ನೇಣಿಗೆ ಶರಣಾದ ಘಟನೆ ಅಮೃತೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ .

ಯಡಿಯೂರು ಹೋಬಳಿಯ ನಾಗೇಗೌಡನ ಪಾಳ್ಯದ ಬಾಲಕಿ ಸುಮಾ(16) ಕುಣಿಗಲ್ ಪಟ್ಟಣದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು,

ಕಳೆದ ಕೆಲವು ದಿನಗಳಿಂದ ಮುಸಲ್ಮಾನ್ ಯುವಕನೊಬ್ಬ ಆಕೆಯನ್ನು ಪ್ರೀತಿಸು ಎಂದು ಪೀಡಿಸುತ್ತಾ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ಮಾಡಿದ ಎನ್ನಲಾಗಿದೆ,


ಕಳೆದ ಕೆಲವು ದಿನಗಳ ಹಿಂದೆ ಕುಣಿಗಲ್ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮತ್ತು ಮಹಾತ್ಮ ಗಾಂಧಿ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದ ಈ ಘಟನೆಯಿಂದ ಮನನೊಂದ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,

ಮಗಳ ಸಾವಿನ ನಂತರ ಘಟನೆ ಪೋಷಕರಿಗೆ ತಿಳಿದು ನಂತರ ಅಮೃತೂರ್ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿದ್ದು ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಶಾಲಾ ಬೀಳ್ಕೊಡುಗೆಯಿಂದ ಹೊರಟು ಮಸಣ ಸೇರಿದ ವಿದ್ಯಾರ್ಥಿನಿ

0

ಕುಣಿಗಲ್ ಪಟ್ಟಣದ ಸ್ಟೇಲ್ಲಾ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಮುಗಿಸಿ ಹೊರಟ 10 ನೇ ತರಗತಿ ವಿದ್ಯಾರ್ಥಿನಿ ಇಂದುಶ್ರೀ (16) ರಸ್ತೆಯ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ

ಮೃತ ವಿದ್ಯಾರ್ಥಿ, ಕುಣಿಗಲ್ ತಾಲೂಕಿನ ಕೊತ್ತಕೆರೆ ಹೋಬಳಿಯ ಬಾಗೇನಹಳ್ಳಿ ಗ್ರಾಮದ ವಾಸಿಯಾಗಿದ್ದು ಕುಣಿಗಲ್ ಪಟ್ಟಣದ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು,

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 9ನೇ ತರಗತಿಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ತನ್ನ ಸ್ವಗ್ರಾಮಕ್ಕೆ ತೆರಳುವಾಗ ಕುಣಿಗಲ್ ಪಟ್ಟಣದ ತುಮಕೂರು ರಸ್ತೆಯ ಶನಿ ದೇವಾಲಯದ ಮುಂಭಾಗದಲ್ಲಿ ಬರುತ್ತಿದ್ದ ಟ್ಯಾಕ್ಟರ್ ಮತ್ತು ಬೈಕ್ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ,

ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವವನ್ನು ಇರಿಸಲಾಗಿತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು
ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ

ಲಸಿಕೆ ನೀಡಿದ ನಂತರ ಮಗು ಸಾವು ಆರೋಪ

0
https://vasanthavanitv.com/auto-draft/

ಕುಣಿಗಲ್ :- ತಾಲೂಕಿನ ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಪೇಠ 1 ಎಂಬ ಚುಚ್ಚುಮದ್ದು ರಾತ್ರಿ ನೀಡಿದ್ದು ಮಗು ಬೆಳಿಗ್ಗೆ ಮೃತಪಟ್ಟಿದೆ,

ಸಿಂಗೋನಹಳ್ಳಿ ಗ್ರಾಮದ ವಾಸಿಗಳಾದ ಚೈತ್ರ ಹಾಗೂ ಮುರಳಿ ಯ ದಂಪತಿಗಳಿಗೆ ಜನಿಸಿದ್ದ ಎರಡೂವರೆ ತಿಂಗಳ ಗಂಡು ಮಗು ದಕ್ಷಿತ್ ಸಾವು ಕುಟುಂಬದ ಸದಸ್ಯರಿಗೆ ತೀವ್ರ ನೋವು ಉಂಟು ಮಾಡಿದೆ,

ಕಳೆದ ಕೆಲವು ದಿನಗಳಿಂದ ಮಗುವಿಗೆ ಚುಚ್ಚುಮದ್ದು ಹಾಕಿಸಬೇಕು ಎಂದು ಸಿಬ್ಬಂದಿ ಆಸ್ಪತ್ರೆಗೆ ಕರೆಯುತ್ತಿದ್ದರು ಈ ಸಂಬಂಧ ತಾಯಿ ಚೈತ್ರ ಗುರುವಾರ ಮಗುವನ್ನ ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಮಧ್ಯಾಹ್ನ 12:30 ರಲ್ಲಿ ಹಲವಾರು ಲಸಿಕೆಗಳನ್ನು ಮಗುವಿಗೆ ನೀಡಲಾಗಿದೆ ಎಂದು ತಿಳಿಸಿದ್ದು ರಾತ್ರಿ ಮಗು ಜ್ವರ ಮತ್ತು ವಿಪರೀತ ನೋವಿನಿಂದ ನರಳುತ್ತಿದ್ದು ಬೆಳಗಿನ ಜಾವ ಮೃತ ಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ,

ಮಗುವಿನ ಸಾವು ಪೋಷಕರು ಮತ್ತು ಸಂಬಂಧಿಕರಿಗೆ ತೀವ್ರ ನೋವುಂಟು ಮಾಡಿದ್ದು ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

ಹೊಸ ವರ್ಷದ ಆಚರಣೆಗೆ ತೆರಳುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

0

ವಸಂತವಾಣಿ ವಾರ್ತೆ ಕುಣಿಗಲ್

ತಾಲೂಕಿನ ಕೊತ್ತಗೆರೆ ಹೋಬಳಿಯ ವಡ್ಡರ ಕುಪ್ಪೆ ಬಳಿ ಡಿಸೆಂಬರ್ 31ರ ರಾತ್ರಿ ತನ್ನ ಸ್ವಗ್ರಾಮಕ್ಕೆ ಹೊಸ ವರ್ಷ ಆಚರಣೆಗೆ ಕುಟುಂಬದ ಸದಸ್ಯರಿಗಾಗಿ ಬಿರಿಯಾನಿ ಸಮೇತ ತೆರಳುವಾಗ ಅಪರಿಚಿತ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ,

ಮೃತ ವ್ಯಕ್ತಿ ಮಧು 28 ಹೆಬ್ಬೂರು ಹೋಬಳಿಯ ಮಣಿಕುಪ್ಪೆ ವಾಸಿ ಆಗಿದ್ದು ಸ್ನೇಹಿತ ಹಾಗೂ ಕುಟುಂಬಸ್ಥರ ಜೊತೆ ಹೊಸ ವರ್ಷ ಆಚರಣೆ ಮಾಡುವ ಸಲುವಾಗಿ ಬಿರಿಯಾನಿ ಹಾಗೂ ಬೇಕರಿ ತಿನಿಸುಗಳನ್ನು ಖರೀದಿ ಮಾಡಿ ಮನೆಗೆ ತೆರಳುವ ಸಮಯದಲ್ಲಿ ರಾತ್ರಿ 8 ರ ಸಮಯದಲ್ಲಿ ಕುಣಿಗಲ್ ತುಮಕೂರು ರಸ್ತೆಯ ವಡ್ಡರ ಕುಪ್ಪೆ ಬಳಿ ಹಿಂಬದಿಯ ಅಪರಿಚಿತ ವಾಹನ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ,

ತುಮಕೂರಿನಿಂದ ಕುಣಿಗಲ್ಗೆ ಬರುತ್ತಿದ್ದ ಮಾಜಿ ಪುರಸಭಾ ಅಧ್ಯಕ್ಷ ಕೆ ಎಲ್ ಹರೀಶ್ ಘಟನೆಯನ್ನು ಕುಣಿಗಲ್ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಸ್ಥಳಕ್ಕೆ ಸಿಪಿಐ ನವೀನ್ ಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಶವವನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಇರಿಸಿದ್ದು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ

ನಿಮ್ಮ ಹಳೆಯ ರೇಷ್ಮೆ ಸೀರೆಗೆ ಸಿಗಲಿದೆ ಸಾವಿರಾರು ರೂಪಾಯಿ

0

ಮೂಲೆಯಲ್ಲಿ ಬಿದ್ದು ಜಿರಲೆ ಸೇರಿದಂತೆ ಹಲವಾರು ಕ್ರಿಮಿಗಳಿಗೆ ವಾಸಸ್ಥಾನ ಆಗಿರುವ ಹಳೆಯ ಸೀರೆಗಳನ್ನು ಮಾರಾಟ ಮಾಡಿ ಸಾವಿರಾರು ಹಣ ಸಂಪಾದಿಸುವ ಅವಕಾಶ ಇಲ್ಲಿದೆ,
ಕುಣಿಗಲ್ ನ ದೊಡ್ಡಪೇಟೆಯಲ್ಲಿ


ಕನ್ನಿಕಾ ಪರಮೇಶ್ವರಿ ಎಂಬ ತಾತ್ಕಾಲಿಕ ಅಂಗಡಿ ಪ್ರಾರಂಭವಾಗಿದ್ದು ಈ ಅಂಗಡಿಯಲ್ಲಿ ಹಳೆಯ ರೇಷ್ಮೆ ಸೀರೆಗಳನ್ನು ಖರೀದಿ ಮಾಡಿ ಸ್ಥಳದಲ್ಲೇ ಹಣ ನೀಡುತ್ತಾರೆ


ನಿಮ್ಮ ಮನೆಯಲ್ಲೂ ಕೂಡ ಹಳೆಯ ರೇಷ್ಮೆ ಸೀರೆಗಳಿದ್ದರೆ ತಕ್ಷಣ ಮಾರಾಟ ಮಾಡಿ ಕೈ ತುಂಬಾ ಹಣ ಸಂಪಾದಿಸಬಹುದು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ +917899285242

ಹುಲಿಯೂರುದುರ್ಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭ

0
kunigal

ಕುಣಿಗಲ್ :-ಅತೀ ಶೀಘ್ರದಲ್ಲೇ ಹುಲಿಯೂರುದುರ್ಗ ಭಾಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗುತ್ತದೆ ಎಂದು ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ತಿಳಿಸಿದ್ದಾರೆ

ಕುಣಿಗಲ್ ಪಟ್ಟಣದ ಜ್ಞಾನಭಾರತಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶಾಲಾ ಶಿಕ್ಷಣ ಸಮಿತಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,

ಆಧುನಿಕತೆ ಬೆಳೆದಂತೆ ಗ್ರಾಮೀಣ ಮಕ್ಕಳು ಕೂಡ ಅಂತರಾಷ್ಟ್ರೀಯ ಮಟ್ಟಕ್ಕೆ ಪೈಪೋಟಿ ಕೊಡುವ ಅನಿವಾರ್ಯತೆ ಉಂಟಾಗಿದೆ, ಅದಕ್ಕಾಗಿ ಪ್ರತಿ ಮಗು ತನ್ನದೇ ಆದ ತಂತ್ರಜ್ಞಾನವನ್ನ ಬಳಸಿಕೊಂಡು ಬೆಳೆಯುವ ಅನಿವಾರ್ಯತೆ ಇದೆ ಕಂಪ್ಯೂಟರು ಸಾಮಾನ್ಯ ಜ್ಞಾನ ಸಾಮಾಜಿಕ ಜಾಲತಾಣ ಇವುಗಳ ಪ್ರಭಾವ ಹೆಚ್ಚಾಗಿದ್ದು ಮನುಷ್ಯನ ಸಭಾವ ಗುಣದ ಜೊತೆಗೆ ಕೃತಕ ಬುದ್ಧಿಮತ್ತೆ ಬಳಕೆಯಿಂದ ಸ್ಪರ್ಧೆ ಬಹು ಕಷ್ಟವಾಗುತ್ತಿದೆ ಆದ್ದರಿಂದ ಪ್ರತಿ ಮಗುವಿಗೆ ಗರಿಷ್ಟ ತರಗತಿ ಮತ್ತು ಶಿಕ್ಷಣವನ್ನು ನೀಡುವ ಅನಿವಾರ್ಯತೆ ಇದೆ ಎಂದರು

,ಸಿನಿಮಾ ಗೀತ ರಚನೆಕಾರರಾದ ವಿ ನಾಗೇಂದ್ರ ಪ್ರಸಾದ್ ಮಾತನಾಡಿ ಶಿಕ್ಷಣ ಕೇವಲ ವಿಜ್ಞಾನಿಗಳು ತಂತ್ರಜ್ಞರು ವೈದ್ಯರು ಇಂಜಿನಿಯರ್ ಶಿಕ್ಷಕರು ವಕೀಲರು ಗಳಂತಹ ಹುದ್ದೆಗಳನ್ನ ನಿರ್ಮಾಣ ಮಾಡುವ ಕೆಲಸದತ್ತ ಸಾಗುತ್ತಿದೆ ಇದರ ಜೊತೆ ಜೊತೆಗೆ ವಿವಿಧ ಕ್ಷೇತ್ರಗಳಲ್ಲೂ ಕೂಡ ಆಸಕ್ತಿ ಉಳ್ಳವರನ್ನು ಬೆಳೆಸುವ ಕೆಲಸ ಶಿಕ್ಷಣದಲ್ಲಿ ಜೊತೆಜೊತೆಗೆ ನಡೆಯಬೇಕಿದೆ ಕಲೆ ಸಾಹಿತ್ಯ ಸಂಗೀತ ಇವುಗಳು ಅಂತರಾಷ್ಟ್ರೀಯ ಮಠದಲ್ಲಿ ಗುರುತಿಸಿಕೊಂಡಾಗ ದೇಶದ ಗೌರವ ಹೆಚ್ಚಾಗುತ್ತದೆ ಎಂದರು,

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರಮೂರ್ತಿ, ಕುಣಿಗಲ್ ಮಾಜಿ ಶಾಸಕ ಬಿಬಿ ರಾಮಸ್ವಾಮಿಗೌಡ, ಸಹಾಯಕ ನಿರ್ದೇಶಕರು ಗುಬ್ಬಿಗೂಡು ರಮೇಶ್, ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ, ತಾಲೂಕು ಅಧ್ಯಕ್ಷ ಕಪನಿಪಾಳ್ಯ ರಮೇಶ್ , ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಾಲ ಗುರುಮೂರ್ತಿ ಸೇರಿದಂತೆ ಹಲವಾರು ಜಿಲ್ಲೆಯ ವಿವಿಧಡೆಗಳಿಂದ ಬಂದಿದ್ದ ಹಲವಾರು ಅಧಿಕಾರಿಗಳು ಇದ್ದರು

ಆಕರ್ಷಣೆ ಮೆರವಣಿಗೆ :-

ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಸಾರ್ವಜನಿಕರನ್ನು ಆಕರ್ಷಣೆ ಮಾಡಿತು, ಹಳ್ಳಿ ಸೊಗಡನ್ನು ಬಿಂಬಿಸುವ ಮೂಲಕ ಎತ್ತಿನ ಗಾಡಿಯಲ್ಲಿ ಗಣ್ಯರನ್ನು ಕಾರ್ಯಕ್ರಮಕ್ಕೆ ಕರೆತರಲಾಯಿತು ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕನ್ನಡದ ಬಾವುಟವನ್ನು ಹಿಡಿದು ಮೆರವಣಿಗೆಗೆ ಕನ್ನಡದ ಕಂಪು ತಂದರು,

ತಾಲೂಕಿನ ಹಲವಾರು ಕ್ಷೇತ್ರದ ಪರಿಚಯ ಮಾಡುವ ವಿವಿಧ ಶಬ್ದ ಚಿತ್ರಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಬಂದಿದ್ದ ಎಲ್ಲರಿಗೂ ರಾಗಿ ಮುದ್ದೆ ಅವರೆಕಾಳು ಸಾರು ನೀಡುವ ಮುಖಾಂತರ ಹಳ್ಳಿ ಸೊಬಗಿನ ಕಾರ್ಯಕ್ರಮ ನಡೆಯಿತು

ಹೃದಯಾಘಾತಕ್ಕೆ ಪುರಸಭಾ ಸದಸ್ಯ ಬಲಿ

0
ನಿರಂತರವಾಗಿ

ಕುಣಿಗಲ್ :- ಪಟ್ಟಣದ ಪುರಸಭಾ ಸದಸ್ಯ ಹಾಗೂ ಅಂಬರೀಶ್ ಅಭಿಮಾನಿಗಳ ಬಳಗದ ಅಧ್ಯಕ್ಷ ಕೋಟೆ ನಾಗಣ್ಣ ಗುರುವಾರ ರಾತ್ರಿ ಹೃದಯಘಾತದಿಂದ ಮೃತಪಟ್ಟಿದ್ದಾರೆ,

ಗುರುವಾರ ರಾತ್ರಿ 10.30 ರ ಸಂದರ್ಭದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕುಣಿಗಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವನ್ನು ಕುಟುಂಬ ಸದಸ್ಯರು ಮಾಡಿದ್ದರೂ ಕೂಡ ಪ್ರಯೋಜನವಾಗಿಲ್ಲ,

ಕುಣಿಗಲ್ ನ ಕೋಟೆ ನಾಗಣ್ಣ ಹಲವಾರು ಸಂಘ ಸಂಸ್ಥೆಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಬಡವರ ಪರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದರು,

ನಾಗಣ್ಣ ಅವರ ಸಾವು ಕುಣಿಗಲ್ ನ ಬಹುತೇಕ ಸಾರ್ವಜನಿಕರು ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ರಾಜಕೀಯ ಮುಖಂಡರಲ್ಲಿ ನೋವು ಉಂಟು ಮಾಡಿದೆ

ಸಮಾಜದಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯ

0
kunigal

ಕುಣಿಗಲ್ :-ಸಮಾಜದ ಎಲ್ಲಾ ಸಮಸ್ಯೆಗಳಿಗೆ ಬಡವ, ಶ್ರೀಮಂತ, ಅಧಿಕಾರಿಗಳು ಎಂಬ ಭೇದಭಾವ ಇಲ್ಲದೆ ಸ್ಪಂದಿಸುವ ಪತ್ರಕರ್ತರ ಬಗ್ಗೆ ಸಮಾಜದ ಕಾಳಜಿ ಮತ್ತು ಸಹಕಾರ ಅವಶ್ಯಕತೆ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್ ತಿಳಿಸಿದ್ದಾರೆ

ಪತ್ರಕರ್ತರ ರಾಜ್ಯ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಕುಣಿಗಲ್ ಪಟ್ಟಣಕ್ಕೆ ಆಗಮಿಸಿದ ಕ್ರೀಡಾ ಜ್ಯೋತಿಯ ನೇತೃತ್ವ ವಹಿಸಿ ಮಾತನಾಡಿದರುಕಳೆದ ಬಾರಿ ರಾಜ್ಯ ಪತ್ರಕರ್ತರ ರಾಜ್ಯ ಕ್ರೀಡಾಕೂಟವನ್ನು ಮಂಗಳೂರಿನಲ್ಲಿ ಏರ್ಪಡಿಸಿದ್ದು ಉತ್ತಮ ರೀತಿ ಕ್ರೀಡೆ ನಡೆಯಿತು ಹಲವಾರು ಸಚಿವರು ಪತ್ರಕರ್ತರ ಜೊತೆಯಲ್ಲಿ ಕ್ರೀಡೆ ಆಡುವ ಮುಖಾಂತರ ಸಂತಸ ಪಟ್ಟರು,ಅದರಂತೆ ಈ ವರ್ಷ ಕಲ್ಪತರು ನಾಡು ತುಮಕೂರಿನಲ್ಲಿ ಏರ್ಪಡಿಸಲು ಸಂಘದ ತೀರ್ಮಾನ ಉತ್ತಮ ಬೆಳವಣಿಗೆ ಆಗಿದೆ ತುಮಕೂರು ಜಿಲ್ಲಾ ಕೇಂದ್ರದಿಂದ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಜ್ಯೋತಿ ಯಾತ್ರೆಯ ರಥವನ್ನು ಸ್ವತಹಚಲಿಸುವ ಮುಖಾಂತರ ಚಾಲನೆ ನೀಡಿದ್ದು, ಉತ್ತಮ ಬೆಳವಣಿಗೆ ಆಗಿದೆ ಎಂದರು,

ಕುಣಿಗಲ್ ನಲ್ಲೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿ ವರ್ಗದವರು ಶಾಲಾ ವಿದ್ಯಾರ್ಥಿಗಳು, ಸೇರಿದಂತೆ ತಾಲೂಕು ಆಡಳಿತ ಉತ್ತಮ ರೀತಿಯಲ್ಲಿ ಸ್ವಾಗತಿಸಿದೆ ಎಂದರು.ಬಿಡುವಿಲ್ಲದೆ ಹಗಲು ಇರುಳು ಸಮಾಜದ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಪತ್ರಕರ್ತರ ಮನಸ್ಸು ಮತ್ತು ದೇಹದ ಆರೋಗ್ಯದ ದೃಷ್ಟಿ ಹಿನ್ನೆಲೆಯಲ್ಲಿ ಈ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ ಜಿಲ್ಲಾಧ್ಯಕ್ಷರ ಉತ್ತಮ ಸ್ಪಂದನೆ ಸಿಕ್ಕಿರುವುದು ಅಭಿನಂದನಾ ವಿಚಾರ ಎಂದರು

ಪಟ್ಟಣದ ತುಮಕೂರು ರಸ್ತೆಯಿಂದ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿ ಮುಖ್ಯ ಬೀದಿಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತರು ಶಾಲಾ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಮೆರವಣಿಗೆ ನಡೆಸಿ ತಹಸಿಲ್ದಾರ್ ಕಚೇರಿಯ ಮುಂಭಾಗದಲ್ಲಿ ಸಂಘಟನೆಗೊಂಡರು,

ವೇದಿಕೆ ಕಾರ್ಯಕ್ರಮದ ನಂತರ ಕ್ರೀಡಾ ಜ್ಯೋತಿಯನ್ನು ತುರುವೇಕೆರೆಗೆ ಬೀಳ್ಕೊಡಲಾಯಿತು,ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ತಹಸಿಲ್ದಾರ್ ರಶ್ಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ, ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಸಿದ್ಧಲಿಂಗ ಸ್ವಾಮಿ, ಪುರಸಭಾ ಮುಖ್ಯ ಅಧಿಕಾರಿ ಮಂಜುಳಾ, ಪತ್ರಕರ್ತರ ಜಿಲ್ಲಾ ಕಾರ್ಯದರ್ಶಿ ರಘುರಾಮ್, ಕ್ರೀಡಾ ಸಂಚಾಲಕ ಸತೀಶ್, ಪದ್ಮನಾಭ. ರಾಷ್ಟ್ರೀಯ ಮಂಡಳಿಯ ಸದಸ್ಯ ಮಧುಕರ್, ಶಾಂತಕುಮಾರ್, ರವಿಕುಮಾರ್, ಸಿದ್ದೇಶ್, ಸುರೇಶ್, ಕುಣಿಗಲ್ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಂಗನಾಥ ಸೇರಿದಂತೆ ಹಲವರು ಪತ್ರಕರ್ತರು ಇದ್ದರು