ಕಳೆದ 3 ವರ್ಷದಿಂದ ತಮ್ಮ ಸೋದರ ಸಂಬಂಧಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಹುಡುಗಿಗೆ 18 ತುಂಬಿದ ನಂತರ ಓಡಿಹೋಗುವ ಸೂಚನೆಯಿಂದ ಪೋಷಕರು ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು ,
ಈ ಸಂಬಂಧ ಪೇಸ್ ಬುಕ್ ಲೈವ್ ಮಾಡಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆತನನ್ನು ಮಾಗಡಿ ಬಳಿ ಕೊಲೆ ಮಾಡಿ ಬಿಸಾಡಿರುವ ಘಟನೆ ನಡೆದಿದೆ .ಮೃತ ಚಲುವನ ವಯಸ್ಸು36 ಅಪ್ರಾಪ್ತೆ ಬಾಲಕಿ ವಯಸ್ಸು ಕಡಿಮೆ ಇದ್ದ ಕಾರಣ ಹಾಗೂ ಆತನ ಮಧ್ಯವ್ಯಸನ ದುಶ್ಚಟಗಳಿಂದ ಬೇಸತ್ತ ಸಂಬಂಧಿಕರು ಚಲುವನ ಪ್ರೀತಿಗೆ ಅಡ್ಡ ಬಂದು ಆತನಿಗೆ ಬುದ್ದಿ ಹೇಳಿ ದೂರ ಇಟ್ಟಿದ್ದರು ,
ಬಾಲಕಿಗೆ 18 ತುಂಬಿದ ನಂತರ ಓಡಿಹೋಗುವ ಮುನ್ಸೋಚನೆಯಿಂದ ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿತ್ತು , ಪ್ರೇಯಸಿ ಕಾಣೆಯಾಧ ಸಂಬಂದ ಕೋಪಗೊಂಡ ಚಲುವ ತನ್ನ ಫೆಸ್ ಬುಕ್ ಲೈವ್ ನಲ್ಲಿನನ್ನ ಹುಡುಗಿಗೆ ಹೊಡೆದಿದ್ದೀರಾ ಆಕೆಗೆ ಹಿಂಸೆ ಕೊಟ್ಟಿದ್ದೀರಾ ಜೈಲಿನಲ್ಲಿ ನೀಡುವ ರೀತಿ ಹಿಂಸೆ ಕೊಟ್ಟಿದ್ದಿರಾ ನನ್ನ ಹುಡುಗಿಯನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ, ಅವಳಿಗೆ ಪೋನ್ ನೀಡಿ ಎಂದು ಬೆದರಿಕೆ ಹಾಕಿ ಮಾಗಡಿ ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ಇದ್ದರೂ ಬಿಡುವುದಿಲ್ಲ ಅವಳಿಗಾಗಿ ನೀವು ಎಷ್ಟು ಖರ್ಚು ಮಾಡಿದರು ಪ್ರಯೋಜನವಿಲ್ಲ ಎಂದು ಲೈವ್ ಮಾಡಿ ಬೆದರಿಕೆ ಹಾಕಿದ್ದಾನೆ
ಇದರಿಂದ ಆಕ್ರೋಶಗೊಂಡಕಾಕೆಯ ಕೆಲವು ಸಂಬಂಧಿಕರು ಮಾಗಡಿ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದು ಸ್ಥಳಲ್ಲೆ ಕುಣಿಗಲ್ ಸಿಪಿಐ ಮಾಧ್ಯನಾಯಕ್ ತಮ್ಮ ಸಿಬ್ಬಂದಿ ಜೊತೆ ಹೋಗಿ ಶವವನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.
ಕುಣಿಗಲ್ :-ಸಹಕಾರಿ ಕ್ಷೇತ್ರಕ್ಕೆ ಅಧಿಕಾರ ಹಿಡಿಯಬೇಕೆಂಬ ಆಸೆ ವಿಫಲದ ಹಿನ್ನೆಲೆಯಲ್ಲಿ ಶಾಸಕರು ಹತಾಶರಾಗಿದ್ದಾರೆ ಎಂದು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ ಆರೋಪಿಸಿದ್ದಾರೆ
ವಿಧಾನಸಭೆಯಲ್ಲಿ ಕುಣಿಗಲ್ ನ ಪಿ ಎಲ್ ಡಿ ಬ್ಯಾಂಕ್ ಬಗ್ಗೆ ಮಾತನಾಡಿದ ಕುಣಿಗಲ್ ಶಾಸಕರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ ಮಾತನಾಡಿದರು
ತಾಲೂಕಿನಲ್ಲಿ 4 ಲಕ್ಷ ಪಾಣಿ ಇದೆ ಎಂದು ಹಾಗೂ 1 ಲಕ್ಷ ರೈತರಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳಿರುತ್ತಾರೆ ಅದರಲಿ. ಒಬ್ಬರ ಹೆಸರಲ್ಲಿ ಮೂರು ಅಥವಾ ನಾಲ್ಕು ಪಾಣಿ ಇರುತ್ತದೆ ಉದಾಹರಣೆಗೆ 10 ಕುಂಟೆ 20 ಕುಂಟೆ 5 ಗುಂಟೆ 3 ಕುಂಟೆ ಹೀಗೆಲ್ಲ ಇರುತ್ತದೆ
ಬೆಳೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕು, ಗ್ರಾಮೀಣ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕುಗಳು ಉದಾಹರಣೆಗೆ ಕೆನರಾ ಬ್ಯಾಂಕು ಐಡಿಬಿಐ ಬ್ಯಾಂಕು ಕರ್ನಾಟಕ ಬ್ಯಾಂಕ್ ಕಾವೇರಿ ಗ್ರಾಮೀಣ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಹೀಗೆ ಹಲವಾರು ಬ್ಯಾಂಕ್ ಗಳು ಸಾಲ ರೈತರಿಗೆ ನೀಡುತ್ತಿದ್ದು ಎರಡು ಮೂರು ಬ್ಯಾಂಕ್ ಗಳಲ್ಲಿ ನೀಡಲು ಸಾಧ್ಯವಿಲ್ಲ ಎಂಬುದು ಶಾಸಕರಿಗೆ ತಿಳಿದಿಲ್ಲವೇ ಎಂದರು,
ಯಾವುದಾದರೂ ಒಂದು ಬ್ಯಾಂಕಲ್ಲಿ ರೈತ ಸಾಲ ತೆಗೆದುಕೊಂಡರೆ ಮತ್ತೊಂದು ಬ್ಯಾಂಕಿನಲಿ.. ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಇದಲ್ಲದೆ ತಂದೆ ತಾಯಿ ತಾತಂದಿರ ಹೆಸರಲ್ಲಿ ಪಾಣಿ ಇದ್ದು ಮರಣ ಹೊಂದಿದ್ದರು ಪಾಣಿಗಳು ಬದಲಾಯಿಸಿಕೊಂಡಿರಲ್ಲ ಇದರಿಂದ ಪಾಣಿದಾರರ ಸಂಖ್ಯೆ ಒಂದು ಮನೆಯಲ್ಲಿ ಹೆಚ್ಚು ಕಾಣುತ್ತವೆ
ನಮ್ಮ ತಾಲೂಕಿನಲ್ಲಿ ಬ್ಯಾಂಕಿನಿಂದ ಪ್ಯಾಕ್ಸ್ ಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ 10843 ರೈತರಿಗೆ 37.98 ಕೋಟಿಗಳ ಸಾಲ ನೀಡಲಾಗಿದೆ,
ನಮ್ಮ ತಾಲೂಕಿನಿಂದ 79 ರೈತರಿಗೆ ಕೃಷಿ ಅಭಿವೃದ್ಧಿಗಾಗಿ ವಾರ್ಷಿಕ 3% ಬಡ್ಡಿ ದರದಲ್ಲಿ, 4.91 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ.
ಬ್ಯಾಂಕಿಂಗ್ ನಲ್ಲಿ, ಆರ್ಥಿಕ ವರ್ಷ ಏಪ್ರಿಲ್ ನಿಂದ ಮಾರ್ಚ್ ವರೆಗೂ ಇರುತ್ತದೆ 9 ತಿಂಗಳಲ್ಲಿ. ಇಷ್ಟು ರೈತರಿಗೆ ಸಾಲ ನೀಡುತ್ತೇವೆ ಮುಂದಿನ 3 ತಿಂಗಳಲ್ಲಿ ಇನ್ನಷ್ಟು ರೈತರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂಬುದುನಮ್ಮ ತಾಲೂಕಿನಿಂದ 729 ರೈತರಿಗೆ ಪಹಣಿ ಪಡೆದು ಕಡಿಮೆ ಬಡ್ಡಿ ದರದಲ್ಲಿ.. 16 ಕೋಟಿ 59 ಲಕ್ಷ ಚಿನ್ನಾಭರಣ ಸಾಲ ನೀಡಲಾಗಿರುತ್ತದೆ.
ನಮ್ಮ ಬ್ಯಾಂಕಿನಿಂದ ಒಟ್ಟು 12,000 ರೈತರಿಗೆ ಅನುಕೂಲವಾಗಿದೆ 107 ಕೋಟಿ 17 ಲಕ್ಷ ಸಾಲ ರೈತರಲ್ಲದೆ ಬೇರೆ ಗ್ರಾಹಕರಿಗೆ ಗೃಹ ನಿರ್ಮಾಣ ವಾಹನ ಸಾಲ ಹಾಗೂ ಇನ್ನಿತರೆ ಸಾಲಗಳು ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುತ್ತೇವೆ.
ಡಿಸಿಸಿ ಬ್ಯಾಂಕ್ ನಿಂದ ಕೆಸಿಸಿ ಸಾಲ ನೀಡುವಾಗ ನಬಾರ್ಡ್ ಹಾಗೂ ಅಪೇಕ್ಸ್ ಬ್ಯಾಂಕ್ ಹೊರತುಪಡಿಸಿ ಯಾವುದೇ ಅನುದಾನ ಸರ್ಕಾರದಿಂದ ಇರುವುದಿಲ್ಲ.. ನಾವು ಡಿಪೋಸಿಟರ್ ಹಣದಿಂದಲೇ ಸಾಲ ನೀಡಬೇಕು
ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್ ಬೇಕು ಬೇರೆ ವ್ಯವಹಾರ ಮಾಡಲು ರಾಷ್ಟ್ರೀಕೃತ ಬ್ಯಾಂಕ್, ತೆರಳುತ್ತಾರೆ ಆದ್ದರಿಂದ ಎಲ್ಲರೂ ಡಿಸಿಸಿ ಬ್ಯಾಂಕ್ ನಲ್ಲಿ.. ವ್ಯವಹಾರ ನಡೆಸಿ ಮುಂದಿನ ದಿನಗಳಲ್ಲಿ.. ಇನ್ನೂ ಹೆಚ್ಚು ರೈತರಿಗೆ ಸಾಲ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ
ಸಹಕಾರ ಸಂಘಗಳಲ್ಲಿ ಮರಣ ಹೊಂದಿ ಸುಸ್ತಿಯಾಗಿರುವ ರೈತರ ಪರವಾಗಿ ಮೃತ ರೈತರ ಸಾಲ ಮನ್ನಾವನ್ನು ನಮ್ಮ ಬ್ಯಾಂಕಿನ ಸ್ವಂತ ಬಂಡವಾಳದಿಂದ ಮನ್ನಾ ಮಾಡಲಾಗುತ್ತಿದೆ ಈ ಯೋಜನೆಗಳು ತುಮಕೂರು ಡಿಸಿಸಿ ಬ್ಯಾಂಕ್ನಿಂದ ಮಾತ್ರ ಮಾಡುತ್ತಿರುತ್ತೇವೆ ಎಂದರು.ಸಂಘ ಸೂಕ್ತ ಸಮಯದಲ್ಲಿ ಚುನಾವಣಾ ನಡೆಸದೇ ಇರುವ ಕಾರಣ ಆ ಸಂಘಕ್ಕೆ ಆಡಳಿತ ಅಧಿಕಾರಿ ಹಾಕಿರುತ್ತಾರೆ.ನಮ್ಮ ಜನರು ಹಾಗೂ ರೈತರುಗಳು ಸಹಕಾರ ಸಂಘಗಳ ಮುಂದೆ ಬಿಸಿಲಿನಲ್ಲಿ ಮಳೆಯಲ್ಲಿ ಪರದಾಡಿಕೊಂಡು ರೇಷನ್ ತೆಗೆದುಕೊಳ್ಳುವುದನ್ನು ಗಮನಿಸಿ ನಿರ್ದೇಶಕರ ಮೂಲಕ ಇವರಿಗೆ ತೊಂದರೆಯಾಗದಂತೆ ಶೀಟ್ ಗಳನ್ನು ಈಗಾಗಲೇ 12 ಸಹಕಾರ ಸಂಘಗಳಿಗೆ ಅಳವಡಿಸಿ ಜನರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತಿದ್ದೇವೆ ಸಹಕಾರ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಬೇಕೆಂದು ಆಸೆಯಿಂದ ಬಂದಂತ ಶಾಸಕರು ಸೋಲು ಅನುಭವಿಸಿದರು ಇದರಿಂದ ಆತಾಶಗೊಂಡು ವಿಧಾನಸಭೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಿವೆ, ಯಾವ ರೀತಿ ಕಾರ್ಯನಿರ್ವಹಿಸುತ್ತೇವೆ ಆ ಸಮಸ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ ವ್ಯಾಪ್ತಿ ಮತ್ತು ಚಟುವಟಿಕೆ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯಲಿ ಎಂದು ಸಲಹೆ ನೀಡಿದರುಈ ಸಂದರ್ಭದಲ್ಲಿಟಿಎಪಿಎಂಎಸ್ ಉಪಾಧ್ಯಕ್ಷರಾದ ಕೆಜಿ ಶ್ರೀನಿವಾಸ್ ಹಾಗೂ ನಿರ್ದೇಶಕರಾದ ರಂಗಸ್ವಾಮಿ ಕೃಷ್ಣೇಗೌಡ , ಜೆಡಿಎಸ್ ವಕ್ತಾರ ಪ್ರಕಾಶ್ , ಗ್ರಾ.ಪಂ ಮಾಜಿ ಸದಸಯ ಮಂಜುನಾಥ್ ಸೇರಿದಂತೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು
ಕುಣಿಗಲ್ :-ತಾಲೂಕಿನ ಮಂಗಳ ಜಲಾಶಯದಲ್ಲಿ ಉಂಟಾಗಿದ್ದ ನೀರಿನ ಸೋರಿಕೆ ಅರಿವು ನಿಂತ ಬಳಿಕ ಶಾಸಕ ಡಾಕ್ಟರ್ ರಂಗನಾಥ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಂಪೂರ್ಣ ಅಭಿವೃದ್ಧಿ ಜವಾಬ್ದಾರಿಯನ್ನು ಮಾಡುತ್ತೇವೆ ಎಂದರು
ಕಳೆದ ಒಂದು ದಿನಗಳಿಂದ ನಿರಂತರವಾಗಿ ಜಲಾಶಯದಿಂದ ಹೊರ ಹೋಗುತ್ತಿದ್ದ ನೀರನ್ನು ಅಧಿಕಾರಿಗಳು ಸಂಪೂರ್ಣ ನಿಲ್ಲಿಸುವಲ್ಲಿ ಯಶಸ್ವಿ ಆಗಿದ್ದಾರೆ
ಮುಂದಿನ ದಿನಗಳಲ್ಲಿ ತಾಂತ್ರಿಕ ಅಧಿಕಾರಿಗಳ ಸಲಹೆ ಮೇರೆಗೆ ನೀರಿನ ಅರಿವು ಹಾಗೂ ತೂಬಿನ ದುರಸ್ತಿ ಮತ್ತು ಉಂಟಾಗಿರುವ ರಂದ್ರವನ್ನು ಮುಚ್ಚುವ ಸಂಬಂಧ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಡ್ಯಾಮ್ ಏರಿಯ ಅಗಲೀಕರಣ ಕ್ರಶ್ ಗೇಟ್ ಗಳ ದುರಸ್ತಿ ವಿದ್ಯುತೀಕರಣ ಹಾಗೂ ಸೇತುವೆ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಶಾಶ್ವತ ಕಾಮಗಾರಿಗಳನ್ನು ಮಾಡುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಅವರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ ತುರ್ತು ಹಿನ್ನೆಲೆಯಲ್ಲಿ ಕೆರೆಏರಿ ನಿರ್ವಹಣೆ ಮಾಡಲು ಸಂಪೂರ್ಣ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸುತ್ತಿದ್ದೇವೆ ಎಂದರುಈ ಸಂದರ್ಭದಲ್ಲಿ ಹೇಮಾವತಿ ಇಲಾಖೆಯ ಚೀಫ್ ಇಂಜಿನಿಯರ್ ಫಣಿರಾಜು ಸೂಪರ್ ಡೆಂಟ್
ಕೆ ಎಮ್ ಬಿಂದಿ, ಎ ಇ ಇ ರುದ್ರೇಶ್ ಇಂಜಿನಿಯರ್ ವೀಣಾ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು
ಅಂತ್ಯ: ಜನವರಿ 14, 2026 (ಬುಧವಾರ) ಮಕರ ಸಂಕ್ರಾಂತಿಯೊಂದಿಗೆ ಮುಕ್ತಾಯವಾಗುತ್ತದೆ.
ಸೂರ್ಯನು ಧನು ರಾಶಿಯನ್ನು ಪ್ರವೇಶಿಸಿದಾಗ ಈ ಮಾಸ ಆರಂಭವಾಗುತ್ತದೆ, ಆದ್ದರಿಂದ ಇದನ್ನು ಧನು ಸಂಕ್ರಮಣ ಎಂದೂ ಕರೆಯುತ್ತಾರೆ.
ಇದು ಭಗವಾನ್ ವಿಷ್ಣುವಿನ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ಸಮಯ.
ಈ ಮಾಸದಲ್ಲಿ ಬೆಳಗಿನ ಜಾವ (ಬ್ರಾಹ್ಮೀ ಮುಹೂರ್ತದಲ್ಲಿ) ಮಾಡುವ ಪೂಜೆಗೆ ಹೆಚ್ಚಿನ ಫಲವಿದೆ ಎಂದು ನಂಬಲಾಗಿದೆ.
ವಿಶೇಷವಾಗಿ ಮುದ್ಗಾನ್ನ (ಹುಗ್ಗಿ) ನೈವೇದ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ.
ನೆನಪಿಡಬೇಕಾದಅಂಶಗಳು
ಶುಭಕಾರ್ಯಗಳನಿಷೇಧ: ಧನುರ್ಮಾಸವನ್ನು ‘ಶೂನ್ಯ ಮಾಸ’ ಅಥವಾ ‘ಖಾರ್ಮಾಸ’ ಎಂದು ಕರೆಯಲಾಗುವುದರಿಂದ ಮದುವೆ, ಗೃಹಪ್ರವೇಶ, ಮುಂಡನ ಮತ್ತು ಹೊಸ ಆಸ್ತಿ ಖರೀದಿಗಳಂತಹ ಶುಭ ಕಾರ್ಯಗಳನ್ನು ಈ ಸಮಯದಲ್ಲಿ ಮಾಡಲಾಗುವುದಿಲ್ಲ.
ಪ್ರಮುಖದಿನ: ಈ ಬಾರಿಯ ಧನುರ್ಮಾಸದಲ್ಲಿ ವೈಕುಂಠಏಕಾದಶಿಯು ಡಿಸೆಂಬರ್ 30, 2025ರಂದು ಬರುತ್ತದೆ.
ಧನುರ್ಮಾಸದ ಮಹತ್ವ
ಧನುರ್ಮಾಸವು ಪ್ರತೀ ವರ್ಷ ಡಿಸೆಂಬರ್ ಮತ್ತು ಜನವರಿಯಲ್ಲಿ ಬರುತ್ತದೆ. ಧರ್ಮಗ್ರಂಥಗಳ ಪ್ರಕಾರ, ಸೂರ್ಯ ದೇವನು ಧನು ರಾಶಿಯನ್ನು ಪ್ರವೇಶಿಸಿದ ದಿನದಿಂದ ಒಂದು ತಿಂಗಳು ಧನುರ್ಮಾಸವಿರುತ್ತದೆ. ಈ ಸಮಯದಲ್ಲಿ ಮದುವೆ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿರುತ್ತದೆ. ಧನುರ್ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿದ್ದರೂ ಇನ್ನು ಕೆಲವೊಂದು ಕೆಲಸಗಳನ್ನು ಮಾಡುವುದು ಶುಭವಾಗಿರುತ್ತದೆ. ಇದು ನಮ್ಮ ಜೀವನವನ್ನು ಸುಧಾರಣೆಗೆ ತಂದು ಸಕಾರಾತ್ಮಕ ಬದಲಾವಣೆಯನ್ನು ತರುವುದು. ಮಾಡುವುದರಿಂದ ಜೀವನಕ್ಕೆ ಅಪಾರ ಸಂತೋಷ, ಸಮೃದ್ಧಿ ಮತ್ತು ಶಾಂತಿ ಸಿಗಬಹುದು. ಅದೇ ರೀತಿ ಧನುರ್ಮಾಸದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ಕೂಡ ನಿಷಿದ್ಧವಾಗಿರುತ್ತದೆ
ಧನುರ್ಮಾಸವು ಪವಿತ್ರವಾದ ಮಾಸವಾದ್ದರಿಂದ ಈ ಮಾಸದಲ್ಲಿ ಮಾಡುವಂತಹ ಎಲ್ಲಾ ಧಾರ್ಮಿಕ ಕ್ರಿಯೆಗಳು ನಮ್ಮನ್ನು ದೇವರಿಗೆ ಹತ್ತಿರವಾಗುವಂತೆ ಮಾಡುತ್ತದೆ. ಧನುರ್ಮಾಸದಲ್ಲಿ ನಮ್ಮ ಧಾರ್ಮಿಕ ಗ್ರಂಥಗಳನ್ನು ಪಠಿಸುವುದು ತುಂಬಾನೇ ಒಳ್ಳೆಯದು. ಈ ಸಮಯದಲ್ಲಿ ನಮ್ಮ ಧಾರ್ಮಿಕ ಗ್ರಂಥಗಳಾದ ಭಗವದ್ಗೀತೆಯನ್ನು, ರಾಮಾಯಣವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಗ್ರಂಥಗಳನ್ನು ಪಠಿಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ ಮತ್ತು ಜೀವನದಲ್ಲಿ ಶಾಂತಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.
ಖಾರ್ಮಾಸದ ಸಮಯ ತೊಡಗಿಸಿಕೊಳ್ಳುವುದು ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಈ ಮಾಸದಲ್ಲಿ ಉಪವಾಸ ವ್ರತವನ್ನು ಆಚರಿಸುವುದು ಅಷ್ಟೇ ಪ್ರಯೋಜನಕಾರಿಯಾಗಿದೆ. ಖಾರ್ಮಾಸದಲ್ಲಿ ಉಪವಾಸವನ್ನು ಮಾಡಬೇಕೆಂದರೆ, ಸಂಪೂರ್ಣ ತಿಂಗಳು ನಾವು ಉಪವಾಸದಲ್ಲಿರುವುದಲ್ಲ, ಬದಲಾಗಿ ಖಾರ್ಮಾಸದಲ್ಲಿ ಬರುವಂತಹ ವಿಶೇಷ ದಿನಗಳಲ್ಲಿ ಅಥವಾ ವಿಷ್ಣು ದೇವನಿಗೆ ಸಮರ್ಪಿತವಾದ ದಿನಗಳಲ್ಲಿ ಉಪವಾಸವನ್ನು ಆಚರಿಸಬೇಕು. ಅದರಲ್ಲೂ, ಗುರುವಾರ, ಸೋಮವಾರ ಉಪವಾಸ ಮಾಡಬಹುದು. ಇದು ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧಗೊಳಿಸುತ್ತದೆ.
ಗೋವುಗಳು ಮೂಕ ಪ್ರಾಣಿಯಾದರೂ ನಾವು ಅವುಗಳಿಗೆ ದೇವರ ಸ್ಥಾನವನ್ನು, ತಾಯಿಯ ಸ್ಥಾನವನ್ನು ನೀಡಿದ್ದೇವೆ. ಅವುಗಳಿಗೆ ಆಹಾರವನ್ನು ನೀಡುವುದು ಪುಣ್ಯ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಖಾರ್ಮಾಸದಲ್ಲಿ ಗೋವುಗಳಿಗೆ ಆಹಾರವನ್ನು ನೀಡುವುದು ಪುಣ್ಯ ಕಾರ್ಯವಾಗಿದೆ. ಈ ಮಾಸದಲ್ಲಿ ಹಸುಗಳ ಸೇವೆಯನ್ನು ಮಾಡುವ ವ್ಯಕ್ತಿಯು ತನ್ನ ಜೀವನದಲ್ಲಿ ಸಮೃದ್ಧಿಯನ್ನು ಮತ್ತು ಸಂತೋಷವನ್ನು ಪಡೆದುಕೊಳ್ಳುತ್ತಾನೆ.
ಧನುರ್ಮಾಸದಲ್ಲಿ ನಾವು ಧ್ಯಾನವನ್ನು ಮಾಡಬೇಕು ಮತ್ತು ಆಧ್ಯಾತ್ಮಿಕ ಅಭ್ಯಾಸಗಳನ್ನು ನಮ್ಮಲ್ಲಿ ರೂಢಿಸಿಕೊಳ್ಳಬೇಕು. ಧನುರ್ಮಾಸದಲ್ಲಿ ಮಾಡುವಂತಹ ಧ್ಯಾನ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಮಾನಸಿಕ ಶಾಂತಿಯನ್ನು ಪಡೆಯಲು ಮತ್ತು ಸ್ವಯಂ ಸಾಕ್ಷಾತ್ಕಾರವನ್ನು ಸಾಧಿಸಲು ಸಹಾಯ ಮಾಡುವುದು. ಈ ಒಂದು ತಿಂಗಳ ಸಮಯವು ಧ್ಯಾನ, ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಸೂಕ್ತವಾದ ಸಮಯವಾಗಿದೆ. ಈ ಸಮಯದಲ್ಲಿ, ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕ ಆಲೋಚನೆಗಳ ಮೇಲೆ ಕೇಂದ್ರೀಕರಿಸಿ
ಧನು ಸಂಕ್ರಾಂತಿಯ ದಿನದಂದು ಸೂರ್ಯ ದೇವನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾಗಿ, ಈ ದಿನವನ್ನು ಧನು ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಈ ದಿನವು ಪಿತೃಗಳ ಆರಾಧನೆಗೆ ಪ್ರಶಸ್ಥವಾದ ದಿನವಾಗಿದೆ. ಈ ದಿನದಂದು ಪಿತೃಗಳಿಗೆ ತರ್ಪಣವನ್ನು ಅರ್ಪಿಸುವುದು, ಪಿತೃಗಳ ಪ್ರಾರ್ಥನೆಯನ್ನು ಸಲ್ಲಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಈ ದಿನ ಮಾಡುವ ತರ್ಪಣ, ಪಿತೃ ಪೂಜೆಯಿಂದ ಪಡೆದುಕೊಳ್ಳುತ್ತದೆ. ಧನು ಸಂಕ್ರಾಂತಿಯ ದಿನದಂದು ನಾವು ಈ ವಸ್ತುಗಳನ್ನು ದಾನ ಮಾಡುವುದರಿಂದ ಪಿತೃಗಳು ನಮ್ಮಿಂದ ಸಂತುಷ್ಟರಾಗುತ್ತಾರೆ. ಜೀವನಕ್ಕೆ ಸಂತೋಷ ಮತ್ತು ಶಾಂತಿಯನ್ನು ಕರುಣಿಸುತ್ತಾರೆ.
ತಾಲೂಕಿನ ಮಂಗಳ ಜಲಾಶಯದಲ್ಲಿ ಮಂಗಳವಾರ ತಡರಾತ್ರಿ ಏರಿಯಲ್ಲಿ ನೀರಿನ ಸೋರಿಕೆ ಉಂಟಾಗಿ 1 ಕ್ಯೂಸೆಕ್ಸ್ ನೀರು ಪೋಲಾಗಿದ್ದು ಅಧಿಕಾರಿಗಳು ಜಾಗರೂಕತೆಯಿಂದ ಡ್ಯಾಂ ಸುರಕ್ಷತೆಯಾಗಿದ್ದು ಸ್ಥಳಕ್ಕೆ ಶಾಸಕ ಡಾ.ರಂಗನಾಥ್ ಸೇರಿದಂತೆ ಹಲವಾರು ಅದಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು.
ನಾಗಿನಿ ನದಿಗೆ ಅಡ್ಡಲಾಗಿ 1961 ರಲ್ಲಿ ಜಲಾಶಯ ನಿರ್ಮಾಣ ಮಾಡಲು ಅಂದಾಜು 60 ಲಕ್ಷದಲ್ಲಿ 14.44 ಮೀಟರ್ ಎತ್ತರ ಮಣ್ಣಿನ ಏರಿ ನಿರ್ಮಾಣ ಮಾಡಿ
ಕಾವೇರಿ ಬೇಸಿನ್ ನಲ್ಲಿ ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿಯ ತಿಗಳರಪಾಳ್ಯದ ಬಳಿ ನಿರ್ಮಿಸಿದ ಡ್ಯಾಂ ನೀರಿನ ಶೇಖರಣಾ ಸಾಮರ್ಥ್ಯ 540 ಎಂಸಿಎಫ್ ಟಿ ಆಗಿದ್ದು 940ಎಕ್ಟೇರ್ ಪ್ರದೇಶದ ಅಚ್ಚುಕಟ್ಟು ಪ್ರದೇಶದಲ್ಲಿ 19 ಹಳ್ಳಿಗಳ ರೈತರ ವ್ಯವಸಾಯಕ್ಕೆ ನೀರು ಒದಗಿಸುವ ಯೋಜನೆ 1969 ರಲ್ಲಿ ಮುಕ್ತಾಯವಾಗಿತ್ತು .
ಕಳೆದ 56 ವರ್ಷದಲ್ಲಿ ಮಂಗಳ ಡ್ಯಾಂ 24 ಸಲ ಮಾತ್ರ ತುಂಬಿದೆ ಕಳೆದ 20 ವರ್ಷದಲ್ಲಿ 4 ಬಾರಿ ಮಾತ್ರ ತುಂಬಿದೆ
ಜಲಾಶಯದ ವಿವರ
ಜಲಾಶಯದಲ್ಲಿನ ತೂಬಿನ ಪಕ್ಕದಲ್ಲಿನ ಕಲ್ಲು ತುಂಡಾದ ಹಿನ್ನೆಲೆಯಲ್ಲಿ ನೀರಿನ ರಭಸಕ್ಕೆ ತೂಬಿನ ಬೇರೆ ಭಾಗದಿಂದ ಹರಿ್ದು ಕಾಲುವೆಗೆ ಸಂಪರ್ಕಗೊಂಡು ಹರಿಯುತ್ತಿ್ತ್ತು ರಾತ್ರಿ ತೋಟದಲ್ಲಿ ಪಂಪ್ ಸೆಟ್ ನಿರ್ವಹಣೆಗೆಂದು ಹೋಗುತ್ತಿದ್ದ ರೈತರು ಅಂದಾಜು 1 ಗಂಟೆಯ ಸಮಯದಲ್ಲಿ ನೀರಿನ ಅರಿವು ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ತಕ್ಷಣ 2 ಗಂಟೆ ವೇಳೇಗೆ ಅದಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ .3 ಗಂಟೆ ಸಮಯಕ್ಕೆ ಹಲವಾರು ಅಧಿಕಾರಿಗಳು ಮತ್ತು ಜೆಸಿಬಿ ಯಂತ್ರದಿಂದ ಕಾರ್ಯಾಚರಣೆ ಆರಂಭಿಸಿದರು .
ನೀರಿನ ಒತ್ತಡವನ್ನು ತಡೆಯಲು ಮಂಗಳ ಡ್ಯಾಂಗೆ ಅಳವಡಿಸಲಾಗಿರುವ ಕೋಡಿಯ ಕ್ರಷರ್ ಗೇಟ್ ಗಳನ್ನು ಎತ್ತುವುದು ಸುಲಭದ ಮಾತಾಗಿರಲಿಲ್ಲ , ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೇ ಇದ್ದ ಕಾರಣದಿಂದ ಹಾಗೂ ವಿದ್ಯುತ್ ಸಂಪರ್ಕ ಹಾಳಾಗಿದ್ದ ಯಂತ್ರಗಳ ದುರಸ್ಥಿ ಸಮಸ್ಯೆಯಿಂದ ನೀರಾವರಿ ಇಲಾಖಾ ಸಿಬ್ಬಂದಿಗಳು ರಾತ್ರಿಯಿಡೀ ಕ್ರಷರ್ ಗೇಟ್ ತೆರೆಯಲು ಹರಸಾಹಸ ಪಡಬೇಕಾಯಿತು .
ಕೋಡಿಯಲ್ಲಿ ಉಂಟಾದ ನೀರಿನ ಸೋರಿಕೆಯ ಸುಳಿವನ್ನು ಪತ್ತೆ ಹಚ್ಚಿದ ಅಧಿಕಾರಿಗಳು ನೂರಾರು ಟ್ರ್ಯಾಕ್ಟರ್ ಗಳನ್ನು ಮಣ್ನು ತಂದು ಸುರಿದು ನೀರನ್ನು ನಿಯಂತ್ರಿಸುವಲ್ಲಿ ಹರ ಸಾಹಸಪಟ್ಟರು ,
ಮದ್ಯಾಹ್ನ 2 ಗಂಟೆ ವೇಳೆದ ಮೈಸೂರಿನ ಕೆಆರ್ ಎಸ್ ಡ್ಯಾಂನಿಂದ ಬಂದ ಹಲವಾರು ನುರಿತ ನೀರಾವರಿ ತಜ್ಞರಾದ ಮಹೇಶ ತಂಡ ಜೇಡಿ ಮಣ್ಣು ಟಾರ್ಪಲ್ ಮರಳು ಮೂಟೆ ಗಳ ಸಹಾಯದಿಂದ ನೀರನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರೂ ಕೂಡ ಡ್ಯಾಂನಿಂದ 1ಕ್ಯೂಸೆಕ್ಸ್ ನೀರು ಹರಿದು ಹೋಗಿತ್ತು ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಬೆಳೆ ನಷ್ಟ ಆಗಿಲ್ಲ ಎಂದು ತಿಳಿದುಬಂದಿದೆ .
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಡಿ ನಾಗರಾಜಯ್ಯ ಮಾತಾಡಿ ಜಲಾಶಯದ ಕೋಡಿಯನ್ನು ಮೇಲ್ದರ್ಜೆಗೆಏರಿಸಿದಸಂದರ್ಭದಲ್ಲಿ ಏರಿಯ ಅಗಲೀಕರಣ ಮತ್ತು ತೂಬಿನ ದುರಸ್ಥಿ ಮಾಡಬೇಕೆಂಬ ಪ್ರಸ್ಥಾವನೆ ಇತ್ತು ಅಧಿಖಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಆಗಲಿಲ್ಲ , ಇತ್ತೀಚೆಗೆ ಹೇಮಾವತಿ ಇಲಾಖೆಯಲ್ಲಿ ಸಾವಿರಾರು ಕೋಟಿ ಅನುದಾನ ಬರುತ್ತಿದೆ ಆ ಹಣವನ್ನು ನಾಲೆ , ತೂಬು , ಸೇರಿದಂತೆ ಡ್ಯಾಂಗಾಗಿ ಬಳಸದೇ ಹಳ್ಳಿಗಳಲ್ಲಿ ರಸ್ತೆಗಳ ನಿರ್ಮಾಣ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸರಿಯಾದ ರೀತಿ ಸದ್ಬಳಕೆ ಮಾಡದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಕಿಡಿಕಾರಿ್ದರು..
ನೀರಿನ ಸುರಕ್ಷತೆ ಹಾಗು ರೈತರ ಬೆಳೆಗಳನ್ನು ಗಮನದಲ್ಲಿಟ್ಟು ತಾಂತ್ರಿಕ ಅಧಿಕಾರಿಗಳ ಸಲಹೆ ಪಡೆದು ಹಾಳಾಗಿರುವ ತೂಬುಗಳ ಉನ್ನತೀಕರಣ ಮಾಡುವಂತೆ ಸೂಚಿಸಿದರು .
ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಮಾತನಾಡಿ ಈ ಹಿಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು ಕೂಡ ರೈತರ ಪಾಲಿನ ನೀರು ಬೀದಿ ಪಾಲಾಗಿದೆ ಅಧಿಕಾರಿಗಳು ತಕ್ಷಣ ಕಾಗಾರಿಯನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ದಿ ಪಡಿಸಬೇಕೆಂದರು .
ಈ ಸಂದರ್ಭದಲ್ಲಿ ಹೇಮಾವತಿ ಚೀಪ್ ಇಂಜಿನಿಯರ್ ಫಣಿರಾಜ್ , ಸೂಪರ್ ಡೆಂಟ್ ಕೆ ಎಂ ಬಿಂದಿ , ಎಇಇ ರುದ್ರೇಶ್ ವೀಣಾ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು .
ನಿರ್ಮಾಣ ಹಂತದ ಹೊಸ ಮನೆಯ ಮುಂದಿನ ದಾರಿಯ ಮುಂದೆ ಮಣ್ಣು ಸುರಿದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದು ಕೊನೆಗೆ ಪ್ರಖರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ .
ತಾಲೂಕಿನ ಯಲಿಯೂರು ಗ್ರಾಮದ ಕೋಗಟ್ಟ ರಸ್ತೆಯಲ್ಲಿ. ಸರ್ವೆ ನಂ 10/6 ರಿಂದ ಖರೀದಿಸಿದ್ದ ಬದಲಾದ ಸರ್ವೆ ನಂ 10/15/7 ಕ್ಕೆ ಬದಲಾಗಿ ಗಂಗಮ್ಮ ಹೊನ್ನೇಗೌಡ ಎಂಬುವರು ಮನೆ ನಿರ್ಮಿಸುತ್ತಿದ್ದು ಪಕ್ಕದ ಭೂಮಾಲೀಕ ಸುರೇಶನು ಖರೀದಿಸಿದ್ದಕ್ಕಿಂತ ಮೊದಲು ಖರೀದಿಸಿದ ಮನೆ ಮಾಲೀಕ ಹೊನ್ನೇಗೌಡ ತನ್ನ ಖರೀದಿ ಪತ್ರದಲ್ಲಿ ಓಡಾಡಲು ರಸ್ತೆ ಎಂದು ಬರೆಸಿ ನೊಂದಣಿ ಮಾಡಿಸಿಕೊಂಡಿದ್ದ.
ನಂತರ ರಸ್ತೆಯ ಮೂಲ ಮಾಲೀಕನಿಂದ ಸುರೇಶ ಎಂಬಾತ ಖರೀದಿಸಿದ್ದಾನೆ ನಂತರ ಇಬ್ಬರು ಖರೀದಿದಾರರ ನಡುವೆ ಇದ್ದ ರಸ್ತೆ ವಿವಾದದ ಪ್ರಕರಣದ ನ್ಯಾಯಾಲಯದಲ್ಲಿ ದಾಖಲಾಗಿ ದಾರಿ ಯಾವುದು ಇಲ್ಲ ಎಂಬ ವಾದ ನಡೆಯುತ್ತಿದೆ .
ಈ ಸಂಬಂಧ ಕಳೆದ ಕೆಲ ದಿನಗಳ ಹಿಂದೆ ಎರಡು ಕುಟುಂಬಗಳ ನಡುವೆ ಗಲಾಟೆ ಸಂಭವಿಸಿ ಸುರೇಶ ಹಾಗೂ ಆತನ ಕುಟುಂಬದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿ ಆತ ನ್ಯಾಯಾಲಯದಿಂದ ಬೇಲ್ಪಡೆದು ವಾಪಸ್ ಬಂದಿದ್ದಾನೆ.
ಹೊನ್ನೇಗೌಡ ಎಂಬುವರು ಹೊಸಮನೆ ನಿರ್ಮಿಸಿ ಮಕ್ಕಳ ಮದುವೆ ಮಾಡಬೇಕು ರಸ್ತೆ ದುರಸ್ತಿ ಮಾಡಲು ಹೋದಾಗ ಎರಡು ಕುಟುಂಬಗಳ ನಡುವೆ ಸಾರ್ವಜನಿಕವಾಗಿ ಪೊಲೀಸ್ ಠಾಣೆ ಹಾಗೂ ಅವಾಚ್ಯ ಶಬ್ದಗಳ ನಿಂದನೆ ಆಯಿತು ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶ ನೀಡಿ ಎರಡು ತಂಡದವರನ್ನು ಕುಣಿಗಲ್ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಖರಣ ದಾಖಲಿಸಿದ್ದಾರೆ.
ರಾಗಿ ಖರೀದಿ ಕೇಂದ್ರದಲ್ಲಿ ದಳ್ಳಾಳಿಗಳ ದರ್ಬಾರು ರೈತರ ಪ್ರತಿಭಟನೆ
ಕುಣಿಗಲ್ :-
ರಾಗಿ ಖರೀದಿಯ ನೋಂದಣಿ ದಿನಾಂಕ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ನೋಂದಣಿ ಸಿಬ್ಬಂದಿಯನ್ನು ಕೂಡಿ ಹಾಕಿ ಪ್ರತಿಭಟನೆ ನಡೆಸಿದರು .
ಡಿಸೆಂಬರ್ 15ರ ಸೋಮವಾರ ರಾಗಿ ಖರೀದಿ ಕೇಂದ್ರದ ನೊಂದಣಿ ಪ್ರಕ್ರಿಯೆ ಅಂತ್ಯವಾಗುತ್ತದೆ ಎಂದು ಖರೀದಿ ಕೇಂದ್ರದ ಮುಂದೆ ನಾಮಫಲಕವನ್ನು ಹಾಕಲಾಗಿತ್ತು ಆದರೆ ಖರೀದಿ ಪ್ರಕ್ರಿಯೆ ಮಧ್ಯಾಹ್ನದ ಅಂತ್ಯಕ್ಕೆ ಬಂದ ಆದ ಹಿನ್ನೆಲೆಯಲ್ಲಿ ನೂರಾರು ರೈತರು ಅಧಿಕಾರಿಗಳ ಮೇಲೆ ಮಾತಿನ ಸಮರಕ್ಕೆ ಹೇಳಿದರು ಈ ಸಂದರ್ಭದಲ್ಲಿ ಖರೀದಿ ಕೇಂದ್ರದ ಅಧಿಕಾರಿಗಳು ಸಂಬಂಧಪಟ್ಟ ರೈತರಿಂದ ಪಹಣಿ ಅಥವಾ ಆಧಾರ್ ಕಾರ್ಡ್ ನಕಲು ಪಡೆದು ರೈತರನ್ನು ವಾಪಸ್ ಕಳಿಸುವ ಕೆಲಸ ಆರಂಭಿಸಿದರು ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ಗೋಡೌನ್ ಒಳಗೆ ಕೂಡಿಹಾಕಿ ಬಾಗಿಲು ಮುಚ್ಚಿ ಪ್ರತಿಭಟನೆಗೆ ಮುಂದಾದರು.
ವಿಷಯ ತಿಳಿದ ತಹಸೀಲ್ದಾರ್ ರಶ್ಮಿ ಯು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಯನ್ನು ಆಲಿಸಿದರು ಈ ಸಂದರ್ಭದಲ್ಲಿ ರೈತರು ಅಕ್ರಮವಾಗಿ ರಾಗಿ ಸಂಗ್ರಹ ಮಾಡಿರುವ ದಳ್ಳಾಳಿಗಳು ಹೆಚ್ಚು ನೋಂದಣಿ ಮಾಡಿಸಿಕೊಂಡಿದ್ದಾರೆ ಆದರೆ ನಾವು ರೈತರು ಇದುವರೆಗೂ ಕೂಡ ರಾಗಿ ಖರೀದಿ ಕೇಂದ್ರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ನಮ್ಮ ಹೊಲಗಳಲ್ಲಿ ರಾಗಿ ಕಟಾವು ಮಾಡುವ ಒಕ್ಕಣೆ ಮಾಡುವ ಕೆಲಸದಲ್ಲಿ ತಲ್ಲೀನರಾಗಿದ್ದೇವೆ ಇಂತಹ ಸಂದರ್ಭದಲ್ಲಿ ಈ ಕೆಲಸ ಮಾಡಿದರೆ ಎಷ್ಟು ಸುರಕ್ಷತೆ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಕದ ಬೆಂಗಳೂರಿನಲ್ಲಿ ರಾಗಿ ಉಳಿಕೆಯನ್ನು ಹಲವರು ಕಾಳಸಂತೆಕೋರರು ನಕಲಿ ಕಾರ್ಡ್ ಗಳು ಅಥವಾ ನ್ಯಾಯ ಬೆಲೆ ಅಂಗಡಿಗಳಿಂದ ಖರೀದಿಸಿ ಪುನಃ ನಕಲಿ ರೈತರು ಅಥವಾ ರಾಗಿ ಬೆಳೆದಿರದ ತೆಂಗು ಅಥವಾ ಅಡಿಕೆ ಹೊಂದಿರುವ ರೈತರ ದಾಖಲಾತಿಗಳನ್ನು ರಾಗಿ ಎಂದು ತಿದ್ದುಪಡಿ ಮಾಡುವ ಮುಖಾಂತರ ಸರ್ಕಾರಕ್ಕೆ ದ್ರೋಹ ಮಾಡುತ್ತಿದ್ದಾರೆ ಅಂತಹ ದೊಡ್ಡ ಜಾಲವನ್ನು ತಕ್ಷಣ ಪತ್ತೆ ಹಚ್ಚಿ ತನಿಖೆ ನಡೆಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಸಿಲ್ದಾರ್ ರಶ್ಮಿ ಯು ಮುಂದಿನ ದಿನಗಳಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಮತ್ತು ರಾಗಿ ಖರೀದಿ ಕೇಂದ್ರದ ಸಮಯವನ್ನು ವಿಸ್ತಾರ ಮಾಡಲು ಅವಕಾಶ ಕೋರುವಂತೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿ ರೈತರಿಗೆ ಅನುಕೂಲ ಮಾಡುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಹಲವಾರು ರೈತರು ಹಾಜರಿದ್ದರು
ಕುಣಿಗಲ್ : ಪಟ್ಟಣದ ಪದ್ಮಾಸ್ ಚಿತ್ರಮಂದಿರದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕುಣಿಗಲ್ ನ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ಕಂಪನಿ ವತಿಯಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪತಂಜಲಿ ನಗರದಲ್ಲಿರುವ ಪದ್ಮ ಸಿನಿಮಾ ಥಿಯೇಟರ್ ನ ಬಳಿ ಬೆಳಗ್ಗೆಯಿಂದಲೇ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಾ ಇನ್ನು ಕೆಲವು ಅಭಿಮಾನಿಗಳು ಫ್ಲೆಕ್ಸ್ ನಲ್ಲಿದ್ದ ದರ್ಶನ್ ಅವರ ಫೋಟೋಗೆ ಹಾಲಿನ ಅಭಿಷೇಕ ಮಾಡಿದರು
ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ನಟ ದರ್ಶನ್ ಅವರ ಕಟೌಟ್ ನಿಲ್ಲಿಸಿ ಆರತಿ ದೃಷ್ಟಿ ತೆಗೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ದರ್ಶನ್ ಹೆಸರಿನಲ್ಲಿ ಅಭಿಮಾನಿಗಳ ಸ್ವಂತ ಖರ್ಚಿನಿಂದ ಮಟನ್ ಬಿರಿಯಾನಿ ಮಾಡಿಸಿ ಬಂದಂತಹ ಎಲ್ಲಾ ಸಿನಿರಸಿಗರಿಗೆ ಹಾಗೂ ಅಭಿಮಾನಿಗಳಿಗೆ ಸಿನಿಮಾ ಟಾಕೀಸ್ ಮುಂಬಾಗ ಹಂಚಲಾಯಿತು.
ಕುಣಿಗಲ್ ಫೋಟೋ ಇದೆ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದ ಸಮಯ
ನವದಹೆಲಿ: ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಕೇಂದ್ರದ ದೂರಸಂಪರ್ಕ ಸಚಿವರಾದ ಶ್ರೀ ಜ್ಯೋತಿರಾಧಿತ್ಯ ಸಿಂಧ್ಯಾ ಇವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಬಿಎಸ್ಎಸನ್ಎಿಲ್ ನೆಟ್ವರ್ಕ ಸಮಸ್ಯೆಯಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈಗಾಗಲೇ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್ ಮತ್ತು ಮಧುಗಿರಿಯಲ್ಲಿ 4ಜಿ ನೆಟ್ವ.ರ್ಕ್ ಸಂಪರ್ಕ ಕೊಡಿಸುವಂತೆ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅತಿ ಜರೂರಾಗಿ ಅವುಗಳಿಗೆ ಮಂಜೂರಾತಿ ನೀಡುವಂತೆ ಕೇಂದ್ರ ದೂರಸಂಪರ್ಕ ಸಚಿವರಲ್ಲಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ಸೋಮಣ್ಣ ಮನವಿ ಮಾಡಿದ್ದಾರೆ.
ಚಿಕ್ಕನಾಯಕನಹಳ್ಳಿಯ ಮದನಮಾಡು, ಪಂಕಜನಹಳ್ಳಿ, ತಿಪಟೂರು ತಾಲ್ಲೂಕಿನ ಮಾಯಗೊಂಡನಹಳ್ಳಿ, ತುರುವೆಕೆರೆ ತಾಲ್ಲೂಕಿನ ಕೋಲಾಳ, ಕಂಕೂರು ಮತ್ತು ಕುಣಿಗಲ್ ತಾಲ್ಲೂಕಿನ ಕಿತ್ನಮಂಗಲ ಹಳ್ಳಿಗಳಲ್ಲಿ 4ಜಿ ಸಂಪರ್ಕ ಸಾಧನದ ಕುರಿತಾದ ಪ್ರಸ್ತಾವನೆಗಳ ಕುರಿತಾಗಿಯೂ ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಸೋಮಣ್ಣ ಚರ್ಚೆ ಮಾಡಿದ್ದಾರೆ.
ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂದ್ಯಾ ಈ ಬಗ್ಗೆ ಅತೀ ಜರೂರಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
Dung paint Abhishek to the temple of Siddalingeshwar
ತಪೋ ಕ್ಷೇತ್ರ ಕಗ್ಗೆರೆ ದೇವಾಲಯಕ್ಕೆ ಸಗಣಿ ಬಣ್ಣದ ಅಭಿಷೇಕ ಏನಿದು ಸಗಣಿ ಬಣ್ಣದ ಅಭಿಷೇಕ ಎಂಬ ವಿಚಾರ ನಿಮ್ಮನ್ನು ಗೊಂದಲಕ್ಕೆ ಉಂಟು ಮಾಡಿರಬಹುದು
ಹೌದು ಶ್ರೀ ಸಿದ್ದಲಿಂಗೇಶ್ವರನ ಹುತ್ತದ ಮೇಲೆ ಹಾಲು ಕರೆಯುವ ಹಸುವಿನಿಂದ ಸಂಗ್ರಹಿಸಿದ ಸಗಣಿಯಿಂದ ಬಣ್ಣವನ್ನು ತಯಾರಿಸಿ ಸಿದ್ದಲಿಂಗೇಶ್ವರನ ದೇವಾಲಯಕ್ಕೆ ಪೇಂಟಿಂಗ್ ಮಾಡಲಾಗಿದೆ.
ತಪೋ ಕ್ಷೇತ್ರ ಕಗ್ಗೆರೆಯ ಗ್ರಾಮದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯನ್ನು ನೆಲಮಂಗಲದ ಬಸವಣ್ಣ ದೇವರ ಮಠದ ವತಿಯಿಂದ ನಡೆಸಲಾಗುತ್ತಿತ್ತು ಈ ಸಂದರ್ಭದಲ್ಲಿ ದೇವಾಲಯಕ್ಕೆ ಬಣ್ಣ ಬಳಿಯುವ ಅನಿವಾರ್ಯತೆ ಇದ್ದ ಕಾರಣ ಸಿದ್ದಲಿಂಗೇಶ್ವರರು ಗೋಪ್ರಿಯರಾಗಿದ್ದರು ಎಂಬ ಕಾರಣಕ್ಕೆ ಗೋ ಉತ್ಪನ್ನವಾದ ಗೋಮಯ ಪೇಂಟಿಂಗ್ ಬಣ್ಣ ಮಾಡಿದ್ದಾರೆ ದೇವಾಲಯದ ಕಾಮಗಾರಿ ಸಂಪೂರ್ಣ ಮುಕ್ತಾಯ ಹಂತ ತಲುಪಿದ್ದು ಫೆಬ್ರವರಿ 23ರ ಭಾನುವಾರ ಗುರುಗಳ ಪಾದಪೂಜೆ ಮತ್ತು ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ