ನವದಹೆಲಿ: ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಕೇಂದ್ರದ ದೂರಸಂಪರ್ಕ ಸಚಿವರಾದ ಶ್ರೀ ಜ್ಯೋತಿರಾಧಿತ್ಯ ಸಿಂಧ್ಯಾ ಇವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಬಿಎಸ್ಎಸನ್ಎಿಲ್ ನೆಟ್ವರ್ಕ ಸಮಸ್ಯೆಯಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈಗಾಗಲೇ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್ ಮತ್ತು ಮಧುಗಿರಿಯಲ್ಲಿ 4ಜಿ ನೆಟ್ವ.ರ್ಕ್ ಸಂಪರ್ಕ ಕೊಡಿಸುವಂತೆ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅತಿ ಜರೂರಾಗಿ ಅವುಗಳಿಗೆ ಮಂಜೂರಾತಿ ನೀಡುವಂತೆ ಕೇಂದ್ರ ದೂರಸಂಪರ್ಕ ಸಚಿವರಲ್ಲಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ಸೋಮಣ್ಣ ಮನವಿ ಮಾಡಿದ್ದಾರೆ.
ಚಿಕ್ಕನಾಯಕನಹಳ್ಳಿಯ ಮದನಮಾಡು, ಪಂಕಜನಹಳ್ಳಿ, ತಿಪಟೂರು ತಾಲ್ಲೂಕಿನ ಮಾಯಗೊಂಡನಹಳ್ಳಿ, ತುರುವೆಕೆರೆ ತಾಲ್ಲೂಕಿನ ಕೋಲಾಳ, ಕಂಕೂರು ಮತ್ತು ಕುಣಿಗಲ್ ತಾಲ್ಲೂಕಿನ ಕಿತ್ನಮಂಗಲ ಹಳ್ಳಿಗಳಲ್ಲಿ 4ಜಿ ಸಂಪರ್ಕ ಸಾಧನದ ಕುರಿತಾದ ಪ್ರಸ್ತಾವನೆಗಳ ಕುರಿತಾಗಿಯೂ ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಸೋಮಣ್ಣ ಚರ್ಚೆ ಮಾಡಿದ್ದಾರೆ.
ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂದ್ಯಾ ಈ ಬಗ್ಗೆ ಅತೀ ಜರೂರಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

