Tuesday, February 24, 2026

ಡಿ ಬಾಸ್ ಅಭಿಮಾನಿಗಳಿಂದ ಬಿರಿಯಾನಿ ಹಂಚಿಕೆ

ಕುಣಿಗಲ್ : ಪಟ್ಟಣದ ಪದ್ಮಾಸ್ ಚಿತ್ರಮಂದಿರದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕುಣಿಗಲ್ ನ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ಕಂಪನಿ ವತಿಯಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪತಂಜಲಿ ನಗರದಲ್ಲಿರುವ ಪದ್ಮ ಸಿನಿಮಾ ಥಿಯೇಟರ್ ನ ಬಳಿ ಬೆಳಗ್ಗೆಯಿಂದಲೇ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಾ ಇನ್ನು ಕೆಲವು ಅಭಿಮಾನಿಗಳು ಫ್ಲೆಕ್ಸ್ ನಲ್ಲಿದ್ದ ದರ್ಶನ್ ಅವರ ಫೋಟೋಗೆ ಹಾಲಿನ ಅಭಿಷೇಕ ಮಾಡಿದರು

ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ನಟ ದರ್ಶನ್ ಅವರ ಕಟೌಟ್ ನಿಲ್ಲಿಸಿ ಆರತಿ ದೃಷ್ಟಿ ತೆಗೆದು ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ದರ್ಶನ್ ಹೆಸರಿನಲ್ಲಿ ಅಭಿಮಾನಿಗಳ ಸ್ವಂತ ಖರ್ಚಿನಿಂದ ಮಟನ್ ಬಿರಿಯಾನಿ ಮಾಡಿಸಿ ಬಂದಂತಹ ಎಲ್ಲಾ ಸಿನಿರಸಿಗರಿಗೆ ಹಾಗೂ ಅಭಿಮಾನಿಗಳಿಗೆ ಸಿನಿಮಾ ಟಾಕೀಸ್ ಮುಂಬಾಗ ಹಂಚಲಾಯಿತು.

ಕುಣಿಗಲ್ ಫೋಟೋ ಇದೆ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದ ಸಮಯ

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles