Wednesday, May 27, 2026

ಕುಡಿಯುವ ನೀರಿಗಾಗಿ ಭಕ್ತರಹಳ್ಳಿ ಗ್ರಾಪಂ ಗೆ ಬೀಗ

ಸಮರ್ಪಕ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ನೂರಾರು ಮಹಿಳೆಯರು ಖಾಲಿ ಕೊಡದೊಂದಿಗೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಬೀಗ ಜಡಿದ ಘಟನೆ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಮುಖಂಡ ವೆಂಕಟೇಶ್ ರಾಜು ನೇತೃತ್ವದಲ್ಲಿ ಹಲವಾರು ಮಹಿಳೆಯರು ಖಾಲಿ ಕೊಡಗಳ ಸಮೇತ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತು ಹೋರಾಟಕ್ಕೆ ಮುಂದಾದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು ಹಲವಾರು ತಿಂಗಳುಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ನೋಡೆಲ್ ಅಧಿಕಾರಿಗಳು ಸೇರಿದಂತೆ ಪಿಡಿಒ ಹಾಗೂ ಇತರರು ಕೇವಲ ಹಾರಿಕೆ ಉತ್ತರ ನೀಡುತ್ತಾರೆ ನಮಗೆ ಬೇಕಾದ ಕುಡಿಯುವ ನೀರನ್ನು ನೀಡುವ ಬದಲು ಉದಾಸೀನತೆ ಎಷ್ಟು ಸರಿ ಎಂದು ಪ್ರಶ್ನಿಸಿದರು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿಲ್ಲ ಬೇರೆ ಭಾಗದಿಂದ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿವೆ ಎಂದು ವಾರಕ್ಕೆ ಒಮ್ಮೆ ಒಂದು ಎರಡು ಬಿಂದಿಗೆ ನೀರು ಕೊಟ್ಟು ಸುಮ್ಮನಾಗುತ್ತಾರೆ .

ಜನಪ್ರತಿನಿಧಿಗಳಿಗೆ ಅಧಿಕಾರ ಇಲ್ಲ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆ ಸರಿ ಇಲ್ಲ ಎಂದರು .

ಈ ಸಂದರ್ಭದಲ್ಲಿ ಚಂದ್ರಮ್ಮ, ಸಂಗೀತಮ್ಮ,ಪ್ರೇಮ,ಪದ್ಮ ,ವಸಂತ,ನಾಗರಾಜು,ಅನ್ನಪೂರ್ಣಮ್ಮ ಸೇರಿದಂತೆ ಹಲವಾರು ಮಹಿಳೆಯರು ಇದ್ದರು .

ಫೋಟೋ ಇದೆ : 18 ಕೆಜಿಎಲ್ 3 : – ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನಾ ನಿರತ ಮಹಿಳೆಯರು

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles