ತಾಲೂಕಿನ ಅಮೃತೂರು ಹೋಬಳಿಯ ಕೊರಠಿ ತಿರುಮಲ ಪಾಳ್ಯದಲ್ಲಿ ನಡೆಯಬೇಕಾಗಿದ್ದ ಗ್ರಾಮ ದೇವತೆ ಹಬ್ಬದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಮನಸ್ತಾಪದಿಂದ ಪೊಲೀಸರ ಬಂದೂಬಸ್ತ್ ನಲ್ಲಿ ಹಬ್ಬ ಮಾಡಿದ ಘಟನೆ ನಡೆದಿದೆ.
ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿ ಜಾತ್ರೆ ರಥೋತ್ಸವ ನಡೆಯುವ ಸಿದ್ಧತೆ ನಡೆದಿತ್ತು

ಈ ಸಂಬಂಧ ಗ್ರಾಮದ ಮುಖಂಡರೆಲ್ಲಾ ಸೇರಿ ಹಬ್ಬದ ಸಂಬಂಧ ಸಭೆ ನಡೆಸಿದ್ದರು .ಸೋಮವಾರ ನಡೆದ ಸಭೆಯಲ್ಲಿ ಗ್ರಾಮದ ಹಲವಾರು ಮುಖಂಡರು ಸೇರಿದ್ದರು ಕೂಡ ಹಬ್ಬ ನಡೆಯುವ ದಿನಾಂಕ ಗೊತ್ತು ಪಡಿಸುವಲ್ಲಿ ಗೊಂದಲಕ್ಕೆ ಉಂಟಾಗಿ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.ಮುಂದುವರಿದ ಸಭೆ ಬುಧವಾರ ಪ್ರಾರಂಭವಾಗಿ ಮುಖಂಡರು ದಿನಾಂಕವನ್ನು ನಿಗದಿ ಪಡಿಸುವಲ್ಲಿ ಹಾಗೂ ಹಲವಾರು ಬೇಡವಾದ ನಿಬಂಧನೆಗಳ ಹಾಕಿದ ಹಿನ್ನೆಲೆಯಲ್ಲಿ ಸಭೆ ಮೊಟಕುಗೊಂಡಿತು.ಹಬ್ಬದ ದಿನಾಂಕ ನಿಗದಿ ಆಗದೆ ಬೇಸರಗೊಂಡ ಗ್ರಾಮದ ಮುಖಂಡರಾದ ಶಿವಣ್ಣಪ್ಪ ಟಿ ವೆಂಕಟೇಶ್ ಪದ್ಮನಾಭ ಪುಟ್ಟಸ್ವಾಮಿ ಸತೀಶ್ ನಿಂಗೇಗೌಡ ವೆಂಕಟೇಶ್ ಸೇರಿದಂತೆ ಹಲವಾರು ಮಂದಿ ತಹಸೀಲ್ದಾರ್ ಗೆ ಹಬ್ಬ ಮಾಡುವ ಸಂಬಂಧ ಅರ್ಜಿ ನೀಡಿ ಹಬ್ಬದ ತಯಾರಿಕೆ ಮುಂದಾಗಿದ್ದರು.ಈ ಘಟನೆಯಿಂದ ಮತ್ತೊಂದು ಬಣದ ಕಾಂಗ್ರೇಸ್ಹ ಮುಖಂಡರಾದ ಹನುಮಂತೇಗೌಡ ದಿವಾಕರ್ ಗೌಡ ಲಿಂಗೇಗೌಡ ರಾಮಾಂಜನೇಯ ಎಂಬುವರು ತಾಸಿಲ್ದಾರ್ ಗೆ ಒತ್ತಡ ತಂದು ಹಬ್ಬವನ್ನು ಮಾಡದಂತೆ ಜಾತ್ರೆ ಮಾಡದಂತೆ ಅನ್ನದಾನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡದಂತೆ ಪೊಲೀಸರ ಮುಖಾಂತರ ತಡೆ ನೀಡಿದರು.ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ದೇವಾಲಯಕ್ಕೆ ಹಾಕಲಾಗಿದ್ದ ಶಾಮಿಯಾನ, ಅಡುಗೆ ಊಟದ ವ್ಯವಸ್ಥೆ, ಎಲ್ಲವನ್ನು ಅಲ್ಲಿಂದ ತೆರವುಗೊಳಿಸಿ ಕೇವಲ ಪೂಜೆ ಮಾಡುವಂತೆ ಹಬ್ಬ ಮಾಡದಂತೆ ತಾಕಿತು ಮಾಡಿ ದೇವಾಲಯಕ್ಕೆ ಪೊಲೀಸ್ ಕಾವಲು ಹಾಕಿದರು.ಆದ್ದರಿಂದ ಸಾಮಾನ್ಯವಾಗಿ ದೇವರ ವಿಗ್ರಹಕ್ಕೆ ಅಭಿಷೇಕ ಪೂಜೆ ಪುಷ್ಪಾರ್ಚನೆ ಪ್ರಸಾದ ವಿನಿಯೋಗ ನಡೆಯಿತುಗ್ರಾಮದ ಹಲವರು ವಾಸಿಗಳು ಹಾಗೂ ಬೆಂಗಳೂರು ಮಂಡ್ಯ ರಾಮನಗರ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರುಗಳು ತಮ್ಮ ನೆಚ್ಚಿನ ದೇವರಿಗೆ ಪೂಜೆ ಮಾಡಿಸಿ ಈ ರೀತಿ ವ್ಯವಸ್ಥೆ ತಂದ ಮುಖಂಡರಿಗೆ ಹಿಡಿ ಶಾಪ ಹಾಕುತ್ತಿದ್ದರು.ಸ್ಥಳಕ್ಕೆ ಕಂದಾಯ ನಿರೀಕ್ಷಕರಾದ ರವಿ ಡಿವೈಎಸ್ಪಿ ಓಂ ಪ್ರಕಾಶ್ ಸಿಪಿಐ ನವೀನ್ ಸ್ಥಳದಲ್ಲಿ ಟಿಕ್ಕಾಣಿ ಹೂಡಿ ಬಂದೂ ಬಸ್ತ್ ವ್ಯವಸ್ಥೆ

ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಪದ್ಮನಾಭ ದೇವರ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ನಾವು ಹಲವಾರು ಮನೆಯವರು ದೇವರ ಪೂಜೆ ಆರತಿ ಹಬ್ಬ ಮಾಡಲು ತಯಾರಿದ್ದೇವೆ ಆದರೆ ಕೆಲವು ಕಾಂಗ್ರೆಸ್ ಬೆಂಬಲಿತ ವ್ಯಕ್ತಿಗಳು ತಮ್ಮ ಅಧಿಕಾರ ಬಳಸಿಕೊಂಡು ಈ ರೀತಿ ಅಧಿಕಾರಿಗಳ ಮೇಲೆ ಒತ್ತಡ ತಂದು ಹಬ್ಬ ನಿಲ್ಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಇಂಥವರಿಗೆ ದೇವರು ಸರಿಯಾದ ಶಿಕ್ಷೆ ಕೊಡುತ್ತಾನೆ ಎಂದು ಹಿಡೀ ಶಾಪ ಹಾಕಿದರು

