Tuesday, February 24, 2026

ಕುಣಿಗಲ್ ನಲ್ಲಿ ಇದೆ ಸುತ್ತೂರು ಹಿರಿಯ ಶ್ರೀಗಳ ಗದ್ದುಗೆ

ಕುಣಿಗಲ್ ಟೌನ್ ಗೆ ಬಂದ ಜಾತ್ರಾ ರಥ

ಸಂಸ್ಥಾನ ಮಠದ ಹಿರಿಯ ಶ್ರೀಗಳಾದ ಘನಲಿಂಗ ಶಿವಯೋಗಿಗಳ ಗದ್ದಿಗೆ ತಪೋ ಕ್ಷೇತ್ರ ಕಗ್ಗರೆಯಲ್ಲಿ ಇದೆ ಹಾಗಾಗಿ ಸುತ್ತೂರು ಮತ್ತು ಕುಣಿಗಲ್ ಗೆ ಧಾರ್ಮಿಕ ಸಂಬಂಧದ ಸೇತುವೆ ಎಂದು ಕುಣಿಗಲ್ ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಸಂತ ಕುಮಾರ್ ತಿಳಿಸಿದ್ದಾರೆ

ಸುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಕುಣಿಗಲ್ ಟೌನ್ ಗೆ ಬಂದ ಜಾತ್ರಾ ರಥವನ್ನ ಸ್ವಾಗತ ಮಾಡಿ ಪೂಜೆ ಸಲ್ಲಿಸಿ ನಂತರ ಮಾತನಾಡಿದರು

ಸುತ್ತೂರು ಮಠದಲ್ಲಿ ಜನವರಿ 15 ರಿಂದ ಪ್ರಾರಂಭವಾಗುವ ಜಾತ್ರೆ ಧಾರ್ಮಿಕ ಸಾಹಿತ್ಯ ಜಾನಪದ ಕ್ರೀಡೆ ಸಂಗೀತ ಸೇರಿದಂತೆ ವೈವಾಹಿಕ ಜೀವನಗಳ ಸೇತುವೆಯಾಗಿದೆ, ಸುತ್ತೂರು ಮಠದ ಜಾತ್ರೆ ಎಂದರೆ ಕರ್ನಾಟಕದಲ್ಲಿ ವಿಶೇಷವಾದ ಸ್ಥಾನಮಾನಗಳನ್ನು ಹೊಂದಿದ್ದು ತನ್ನದೇ ಆದ ವಿಶಿಷ್ಟ ಆಚರಣೆಗಳಿಂದ ಕರ್ನಾಟಕ ರಾಜ್ಯದ ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಣೆ ಮಾಡುವ ವಿಶೇಷವಾದ ಒಂದು ಆಚರಣೆ ಪುರಾತನ ಕಾಲದಿಂದಲೂ ಕೂಡ ನಡೆದು ಬರುತ್ತಿದೆ.

ಸುತ್ತೂರು ಮಠದ ಆಚರಣೆಗಳ ಜೊತೆಗೆ ಯಡಿಯೂರು ಕ್ಷೇತ್ರದಲ್ಲಿ ಜೀವ ಸಮಾಧಿಯಾಗಿ ಕಗ್ಗೆರೆ ಕ್ಷೇತ್ರದಲ್ಲಿ ತಪಸ್ಸನ್ನು ಆಚರಿಸಿ ತಪೋ ಕ್ಷೇತ್ರವಾಗಿ ಪರಿವರ್ತನೆ ಮಾಡಿದ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ಸುತ್ತೂರು ಸಂಸ್ಥಾನದ ಹಿರಿಯ ಗುರುಗಳಾದ ಶ್ರೀ ಘನಲಿಂಗ ಶಿವಯೋಗಿಗಳ ಗದ್ದಿಗೆ ಇರುವುದರಿಂದ ಕುಣಿಗಲ್ ತಾಲೂಕು ಮತ್ತು ಸುತ್ತೂರಿನ ಉತ್ತಮವಾದ ಧಾರ್ಮಿಕ ಸೇತುವೆ ಇದೆ ಎಂದರು

ಅಂತಹ ಜಾತ್ರೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ ತಮ್ಮ ಬದುಕನ್ನ ಸಾರ್ಥಕ ಗೊಳಿಸಬೇಕೆಂದರು ಸಿದ್ದಗಂಗಾ ಮಠದಿಂದ ಆಗಮಿಸಿದ ಸುತ್ತೂರು ರಥಕ್ಕೆ ಕುಣಿಗಲ್ ಪಟ್ಟಣದ ವೀರಶೈವ ಸಮಾಜದ ಹಲವಾರು ಪದಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿ ಅಟವಿ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಸ್ವಾಗತ ಮಾಡಿದರು.ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜಪ್ಪ, ಟೌನ್ ವೀರಶೈವ ಸಮಾಜದ ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಕಗ್ಗೆರೆ ಪ್ರಸಾದ್, ಟೌನ್ ವೀರಶೈವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಚೇತನ್, ನಿರ್ದೇಶಕ ಹೋಟೆಲ್ ಆರಾಧ್ಯ, ನಟರಾಜು,ತಾಲೂಕು ವೀರಶೈವ ಸಮಾಜದ ಕಾರ್ಯದರ್ಶಿ ಇಪ್ಪಾಡಿ ಪರಮಶಿವಯ್ಯ, ಜಾತ್ರಾ ಸಮಿತಿಯ ಸಂಚಾಲಕ ಪಂಚಾಕ್ಷರಿ, ಸೇರಿದಂತೆ ಸಮಾಜದ ಮುಖಂಡರಾದ ಜಗದೀಶ್,ವಿಶ್ವನಾಥ, ಗಂಗಾಧರ ಸೇರಿದಂತೆ ಅರ್ಚಕ ಗಂಗಾಧರಪ್ಪ ಇದ್ದರು

About The Author

Related Articles

Stay Connected

0FansLike
0FollowersFollow
22,800SubscribersSubscribe
- Advertisement -spot_img

Latest Articles