Friday, July 4, 2025
Home Blog Page 2

ಲಾರಿ ಡಿಕ್ಕಿ ಬೈಕ್ ಸವಾರ ಸಾವು

0
ಹುಲಿಯೂರುದುರ್ಗಕ್ಕೆ ಸಂಬಂಧ
Bike rider killed in lorry collision

ಕುಣಿಗಲ್ ತಾಲೂಕಿನ ಗವಿಮಠದ ಬಳಿ ನಡೆದ ಘಟನೆ,
ಮೃತ ದುರ್ದೈವಿ ಕುಣಿಗಲ್ ಪಟ್ಟಣದ ವಾಸಿ ದಿವಂಗತ ಸತ್ಯನಾರಾಯಣ ಶೆಟ್ಟಿ ಯ ಎರಡನೇ ಮಗ ತೀರ್ಥ ಕುಮಾರ್ ಮೃತಪಟ್ಟವ,

ಕುಣಿಗಲ್ ಪಟ್ಟಣದಿಂದ ಹುಲಿಯೂರುದುರ್ಗಕ್ಕೆ ತೆರಳುವ ಮಾರ್ಗ ಮಧ್ಯ ಗವಿಮಠದ ಬಳಿ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ,


ಸ್ಥಳಕ್ಕೆ ಭೇಟಿ ನೀಡಿದ ಕುಣಿಗಲ್ ಪೊಲೀಸರು ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ,
ಮೃತ ವ್ಯಕ್ತಿ ಪತ್ನಿ ಮಗಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

ಕುಣಿಗಲ್ ತಟ್ಟೆ ಇಡ್ಲಿ ಮೂಲ ಹೋಟೆಲ್ ಭೇಟಿ ನೀಡಿದ ಸಿಹಿ ಕಹಿ ಚಂದ್ರು

0

ಕುಣಿಗಲ್ ;- ಪಟ್ಟಣದ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಭೂತಯ್ಯನ ಹೋಟೆಲ್ ಗೆ ಚಿತ್ರನಟ ಸಿಹಿ ಕಹಿ ಚಂದ್ರು ಭೇಟಿ ನೀಡಿ ಅಲ್ಲಿನ ತಿಂಡಿಗಳನ್ನು ತಿಂದು ಮೆಚ್ಚುಗೆ ವ್ಯಕ್ತಪಡಿಸಿ ಪ್ರಮಾಣ ಪತ್ರ ನೀಡಿದ್ದಾರೆ

ಬೆಳಿಗ್ಗೆ 9:30ಕ್ಕೆ ಭೇಟಿ ನೀಡಿದ ಸಿಹಿಕಹಿ ಚಂದ್ರು ಅವರ ತಂಡ ಹೋಟೆಲ್ ನ ಸ್ವಚ್ಛತೆ ಮತ್ತು ಅಲ್ಲಿನ ತಿಂಡಿಗಳ ರುಚಿ ಸ್ವಾದಿಷ್ಟ ಸೇರಿದಂತೆ ಹಲವಾರು ವಿಧಗಳಿಂದ ತಿಂಡಿಯ ವಿಧಾನಗಳನ್ನು ವೀಕ್ಷಿಸಿದರು

ನಂತರ ಕೂಡ ಅವರು ಕುಣಿಗಲ್ ತಟ್ಟೆ ಇಡ್ಲಿ, ಪೂರಿ, ಪಲಾವು ಹಾಗೂ ಕಾಫಿಯನ್ನು ಸವಿದು ಮೆಚ್ಚುಗೆಯ ಮಾತುಗಳನಾಡಿದರು ಹಲವಾರು ದಶಕಗಳ ಹಿಂದೆ ಮಹಾದೇವಪ್ಪ ಪ್ರಾರಂಭ ಮಾಡಿದ ಪೆಟ್ಟಿ ಅಂಗಡಿಯ ಹೋಟೆಲ್ಗೆ ಸಾರ್ವಜನಿಕರು ಭೂತಯ್ಯನ ಅಂಗಡಿಯೆಂದು ಕರೆಯುವ ಮುಖಾಂತರ ಜಾನಪದವಾಗಿ ಬೂತಯ್ಯನ ಹೋಟೆಲ್ ಅಥವಾ ಭೂತಯ್ಯನ ಟೀ ಸ್ಟಾಲ್ ಆಗಿ ಹೋಗಿದ್ದೆ

ಹಾಲಿ ಬೂತಯ್ಯನ ಮಗ ಶಿವಕುಮಾರ್ ಹೋಟೆಲ್ ನಡೆಸುತ್ತಿದ್ದು ಇಲ್ಲಿಗೆ ಕೇಂದ್ರ ಸಚಿವ ವಿ ಸೋಮಣ್ಣ ಸೇರಿದಂತೆ ಹಲವಾರು ರಾಜಕೀಯ ಪ್ರಮುಖರು ಸಿನಿಮಾ ನಟ ನಟಿಯರು ಹಲವಾರು ಬಾರಿ ಭೇಟಿ ನೀಡಿ ಈ ಈ ಹೋಟೆಲ್ನಲ್ಲಿ ತಿಂಡಿ ತಿಂದಿದ್ದಾರೆ ಎಂಬ ಮಾಹಿತಿಯನ್ನು ಕೂಡ ಅವರು ಪಡೆದರು,


ಚಿತ್ರನಟ ಸಿಹಿಕಹಿ ಚಂದ್ರು ಆಗಮನದಿಂದ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು ನಂತರ ಸಾರ್ವಜನಿಕರೊಂದಿಗೆ ಮಾತನಾಡಿ ತಿಂಡಿ ರುಚಿ ವಿಚಾರಗಳನ್ನು ಪಡೆದರು ನಂತರ ಹೋಟೆಲ್ ಮಾಲೀಕರ ಶಿವಕುಮಾರ್ ಅವರಿಗೆ ಪ್ರಮಾಣ ಪತ್ರ ನೀಡುವ ಮೂಲಕ ಶುಭ ಹಾರೈಸಿದರು

ದಯಾಭವನ್ ನಲ್ಲಿ ನಡೆದ ಕಲರವ

0

ಕುಣಿಗಲ್ –

ರಾಜ್ಯದ ಎಲ್ಲಾ ಮಕ್ಕಳನ್ನು ಒಟ್ಟಾಗಿ ಸೇರಿಸಿ ರಾಜ್ಯಮಟ್ಟದ ಕಲರವ ಆಚರಿಸುವ ಕಾರ್ಯಕ್ರಮ ಆಗಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಚೇತನ್ ತಿಳಿಸಿದ್ದಾರ,

ತಾಲೂಕಿನ ದಯ ಭವನ ಶಿಕ್ಷಣ ಸಮೂಹ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ಸರ್ಕಾರ ಮಕ್ಕಳಿಗಾಗಿ ಹಲವಾರು ರೀತಿಯ ಸೌಲಭ್ಯಗಳು ಅನುದಾನವನ್ನು ನೀಡುತ್ತಿದೆ ಸರಿಯಾದ ರೀತಿ ಬಳಸಿಕೊಂಡು ಸಮಾಜದ ಮುಖ್ಯ ವಾಣಿಗೆ ಮಕ್ಕಳನ್ನು ಕರೆತರುವ ಕೆಲಸ ಮಾಡಬೇಕೆಂದರು,

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀ ದಿನೇಶ್ ಮಾತನಾಡಿ ಮಕ್ಕಳಲ್ಲಿರುವ ಹಲವಾರು ಪ್ರತಿಭಗಳನ್ನು ಹೊರ ತರುವ ಕೆಲಸ ಇಂತಹ ಕಾರ್ಯಕ್ರಮಗಳಲ್ಲೇ ನಡೆಯುತ್ತವೆ ಅದಕ್ಕಾಗಿ ಅವರಿಗಾಗಿ ಮಹರಂಜನೆ ಕಾರ್ಯಕ್ರಮ ರೂಪಿಸಿ ಎಂದರು,

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಧರ್ಮಗುರು ಅಬ್ರಹಾಮ್ ರಂಭಾನ್ ಮಕ್ಕಳು ದೇವರಂತೆ ಅವರಿಂದ ಉತ್ತಮವಾದ ಪ್ರತಿಫಲ ನಾವು ನಿರೀಕ್ಷೆ ಮಾಡದೆ ಉತ್ತಮ ಸೇವೆ ಸಲ್ಲಿಸಬೇಕೆಂದರು,

ಶಿಶು ಅಭಿವೃದ್ಧಿಗಳಾದ ನಾಗರಾಜು, ವೆಂಕಟರಮಣಪ್ಪ Shak ದಯಬಾರ ಸಂಸ್ಥೆಯ ವೈದ್ಯರಾದ ಡಾ.ಲಿಶಿ, ಸಂಸ್ಥೆಯ ಖಜಾಂಚಿಯಾದ ಸತ್ಯಂ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು

ಶಾಸಕ ಮುನಿರತ್ನ ಬಂಧನ

0

ಆಂಧ್ರಪ್ರದೇಶದ ಚಿತ್ತೂರಿಗೆ ಪಲಾಯಾನ‌ ಮಾಡುವ ವೇಳೆ ಮುನಿರತ್ನರನ್ನು ನುಂಗಲಿ ಬಳಿ ವಶಕ್ಕೆ ಪಡೆಯಲಾಗಿದೆ ಗುತ್ತಿಗೆದಾರ ಚೆಲುವರಾಜು ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಕೊಟ್ಟ ಒಂದೇ ಗಂಟೆಯಲ್ಲಿ ಪೊಲೀಸರು ಮುನಿರತ್ನರನ್ನು ವಶಕ್ಕೆ ಪಡೆದಿದ್ದಾರೆ,

ಬೆಂಗಳೂರಿನ BBMP ಗುತ್ತಿಗೆದಾರನಿಗೆ ಲಂಚ ಕೇಳಿದ್ದಲ್ಲದೆ ಜಾತಿ ನಿಂದನೆ ಹಾಗೂ ಜೀವಬೆದರಿಕೆ ಹಾಕಿದ್ದ ಆರ್,ಆರ್, ನಗರ ಶಾಸಕ ಮುನಿರತ್ನ ವಿರುದ್ಧ ದೂರು ದಾಖಲಾಗಿತ್ತು ಇತ್ತ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನರನ್ನು ಕೋಲಾರ ಜಿಲ್ಲೆಯ ಬಳಿ ಶನಿವಾರ ಸಂಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ,

ಕೋಲಾರ ಪೊಲೀಸರ ನೆರವಿನೊಂದಿಗೆ ಮುಳಬಾಗಲು ತಾಲ್ಲೂಕಿನ ನಂಗಲಿ ಬಳಿ ಬೆಂಗಳೂರಿನ ಪೊಲೀಸರು ಶಾಸಕ ಮುನಿರತ್ನನನ್ನು ವಶಕ್ಕೆ ಪಡೆಯಲಾಗಿದೆ ಕೋಲಾರ ಜಿಲ್ಲೆಯ ಮುಳಬಾಗಿಲು ಮಾರ್ಗವಾಗಿ ಆಂದ್ರಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ

ಉಗಿಬಂಡಿ ಹೋಟೆಲ್ ಉದ್ಘಾಟಿಸಲಿರುವ ನಟ ದಿಗಂತ್

0
Actor Diganth Kunigal prepares to inaugurate Hotel Ugibandi of Highway Indian Railway Model

ಕುಣಿಗಲ್ :- ಚಿತ್ರನಟ ದಿಗಂತ್ ಕುಣಿಗಲ್ ಹೈವೆ ಯಲ್ಲಿ ರೈಲ್ವೆ ಮಾದರಿ ಯ ಉಗಿಬಂಡಿ ಹೋಟೆಲ್ ಉದ್ಘಾಟಿಸಲಿದ್ದಾರೆ

ಇತ್ತೀಚಿಗೆ ಹೋಟೆಲ್ ಉದ್ಯಮದಲ್ಲಿ ಬಹು ದೊಡ್ಡ ಬದಲಾವಣೆ ಆಗುತ್ತಿದೆ,

ನದಿಯ ಒಳಭಾಗದಲ್ಲಿ ಸಮುದ್ರದ ಮೇಲ್ಭಾಗದಲ್ಲಿ, ಬೆಟ್ಟದ ಮೇಲೆ,ಮರದ ಮೇಲೆ ,ರಸ್ತೆ ಬೆಟ್ಟ -ಗುಡ್ಡ ಸೇರಿದಂತೆ ವಿವಿಧತೆಗಳಲ್ಲಿ ವಿಶೇಷವಾದ ಹೋಟೆಲ್ ಗಳನ್ನು ನಿರ್ಮಾಣ ಮಾಡುವ ಮತ್ತು ಗ್ರಾಹಕರಿಗೆ ಬೇಕಾದ ವಿಶೇಷ ರೀತಿಯಲ್ಲಿ ತಿನಿಸು ಮತ್ತು ಊಟ ಹಾಗೂ ಪಾನೀಯಗಳನ್ನು ನೀಡುವ ವ್ಯಾಪಾರೀಕರಣ ಉತ್ತಮವಾಗಿ ಅಭಿವೃದ್ಧಿ ಆಗುತ್ತಿದೆ,

ಬೆಂಗಳೂರು ಮಂಗಳೂರು ಹೆದ್ದಾರಿಯ ಗೊಟ್ಟಿಕೆರೆ ಬಳಿ ವಿಶೇಷವಾದ ರೈಲು ಮಾದರಿಯಲ್ಲಿ ಹೋಟೆಲ್ ಒಂದನ್ನು ಧನಂಜಯ ಎಂಬ ಯುವಕ ಸ್ಥಾಪಿಸಿದ್ದಾರೆ,

ಹೋಟೆಲ್ ಮುಂಬಾಗದಲ್ಲಿ ರೈಲು ಇಂಜಿನ್ ಮಾದರಿಯಲ್ಲಿ ಇದ್ದು ಪ್ರತಿಯೊಬ್ಬರೂ ಕೂಡ ಇದರ ಒಳಗೆ ಪ್ರವೇಶ ಮಾಡಬೇಕಿದೆ,
ಈ ಹೋಟೆಲ್ ನಲ್ಲಿ ಎಸಿ ಕೋಚ್, ಜನರಲ್ ಕೋಚ್ ಹಳ್ಳಿ ವಾತಾವರಣ ಸೇರಿದಂತೆ ವಿಶೇಷ ಆಕರ್ಷಣೆಯ ಕಲಾಕೃತಿ ಮತ್ತು ಹೊರಾಂಗಣ ಮತ್ತು ಒಳಾಂಗಣವನ್ನ ನಿರ್ಮಾಣ ಮಾಡಿದ್ದಾರೆ,

ಸೆಪ್ಟೆಂಬರ್ 8 ರ ಭಾನುವಾರ ಚಲನಚಿತ್ರ ನಟ ದಿಗಂತ್, ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್, ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿ ಎನ್ ಮಂಜುನಾಥ್, ಬಿದನಗೆರೆ ಸತ್ಯ ಶನೇಶ್ವರ ದೇವಾಲಯದ ಧರ್ಮದರ್ಶಿ ಧನಂಜಯ ಗುರೂಜಿ ಸೇರಿದಂತೆ ಹಲವಾರು ಗಣ್ಯರು ಅಧಿಕಾರಿಗಳು ರಾಜಕೀಯ ಮುಖಂಡರು ಮತ್ತು ವಿವಿಧ ಚಲನಚಿತ್ರ ನಟರು ಭಾಗವಹಿಸಲಿದ್ದಾರೆ.


ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಇಲ್ಲಿಗೆ ಬರುವ ಎಲ್ಲಾ ಗ್ರಾಹಕರಿಗೆ ಚಲನ ಚಿತ್ರ ಅಭಿಮಾನಿಗಳಿಗೆ ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆಯನ್ನು ಕೂಡ ಏರ್ಪಡಿಸಲಾಗಿದೆ

ನೀವು ಕೂಡ ಬಿಡುವಿನಲ್ಲಿ ಮತ್ತು ಹೆದ್ದಾರಿಯಲ್ಲಿ ಪ್ರವೇಶ ಮಾಡುವಾಗ ಅವಶ್ಯಕತೆ ಇದ್ದಾಗ ವಿಶೇಷವಾದ ಹೋಟೆಲ್ ಗೆ ಭೇಟಿ ನೀಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

ತೃತೀಯ ಲಿಂಗಿ ಪ್ರೇಮ ತಿರಸ್ಕಾರದಿಂದ ಇರಿದ ಪ್ರೇಮಿ

0

ಕುಣಿಗಲ್: ಮದುವೆಯಾಗಲು ನಿರಾಕರಿಸಿದ ಮಂಗಳಮುಖಿಗೆ ಭಗ್ನ ಪ್ರೇಮಿಯೋರ್ವ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ಗ್ರಾಮದೇವತೆ ಸರ್ಕಲ್ ಬಳಿ ಬುಧವಾರ ಸಂಜೆ ನಡೆದಿದೆ.


ಪಟ್ಟಣದ ಕೋಟೆ ಪ್ರದೇಶದ ಮಹಮದ್ ಆಲೀಸಾ ಖಾದ್ರಿ ಅಲಿಯಾಸ್ ಹನೀಶಾ (21) ಚಾಕು ಇರಿತಕ್ಕೆ ಒಳಗಾದ ಪ್ರೇಯಸಿ, ಮಂಡ್ಯ ಮೂಲದ ಆದೀಲ್ (23) ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪ್ರಿಯಕರನಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.


ಫೇಸ್‌ಬುಕ್ ಸ್ನೇಹ : ಕಳೆದ ಆರು, ಏಳು ತಿಂಗಳ ಹಿಂದೆ ಹನೀಶಾ ಹಾಗೂ ಆದೀಲ್ ಅವರ ಸ್ನೇಹ ಫೇಸ್ ಬುಕ್‌ನಲ್ಲಿ ಪರಿಚಯವಾದರೂ ಬಳಿಕ ಆದೀಲ್ ಹನೀಶಾ ಅವರ ಮನೆ ಕುಣಿಗಲ್‌ನ ಕೋಟೆಗೆ ಬಂದು ನನಗೆ ತಂದೆ, ತಾಯಿ ಯಾರು ಇಲ್ಲ, ನಾನು ಒಬ್ಬ ಅನಾಥ ಎಂದು ಹೇಳಿಕೊಂಡು ಹನೀಶಾ ಅವರ ಮನೆಯಲ್ಲಿ ಕಳೆದ ನಾಲ್ಕು ಐದು ತಿಂಗಳಿನಿಂದ ವಾಸವಾಗಿದ್ದ, ಮನೆಯ ಕುಟುಂಬ ನಿರ್ವಹಣೆಯನ್ನು ಆತನೇ ಮಾಡುತ್ತಿದ್ದ ಎನ್ನಲಾಗಿದೆ,

ಈ ನಡುವೆ ಹನೀಶಾ ಹಾಗೂ ಆದೀಲ್ ಇಬ್ಬರು ಒಬ್ಬರನ್ನೋಬ್ಬರು ಪ್ರೀತಿಸಿ ಮದುವೆಯಾಗಲು ತಿರ್ಮಾನಿಸಿದ್ದರು ಎನ್ನಲಾಗಿದೆ, ಆದರೆ ಕೆಲ ವಿಚಾರವಾಗಿ ಹನೀಶಾ ಹಾಗೂ ಆದೀಲ್ ನಡುವೆ ವೈಮನಸ್ಸು ಉಂಟಾಗಿ ಗಲಾಟೆಯಾಗಿ, ಆದೀಲ್, ಹನೀಶಾಳನ್ನು ಎಲ್ಲೂ ಕೆಲಸಕ್ಕೆ ಹೋಗಬಾರದೆಂದು ತಡೆದಿದ್ದನ್ನು, ಈ ವಿಚಾರಕ್ಕೆ ಹನೀಶಾ ಮೇಲೆ ಆದೀಲ್ ಹಲ್ಲೆ ಸಹ ನಡೆಸಿ ಆತನ ಊರು ಮಂಡ್ಯಗೆ ಹೋಗಿದ್ದ ಎನ್ನಲಾಗಿದೆ,
ಮಾತನಾಡಲು ಕರೆಸಿ ಚಾಕು ಇರಿತ : 

ಆದೀಲ್ ಬುಧವಾರ ಕುಣಿಗಲ್‌ಗೆ ಬಂದು ದೂರವಾಣಿ ಮೂಲಕ ಹನೀಶಾಳಿಗೆ ಕರೆ ಮಾಡಿ ಮಾತನಾಡೋಣ ಬಾ ಎಂದು ಗ್ರಾಮ ದೇವತೆ ಸರ್ಕಲ್ ಬಳಿ ಹನೀಶಾಳಿಗೆ ಕರೆಸಿಕೊಂಡಿದ್ದಾನೆ, ಈ ವೇಳೆ ಹನೀಶಾ ಬಳಿ ಪೋನ್ ಕೊಡು ಎಂದು ಕೇಳಿದ್ದಾನೆ, ಪೋನ್ ಏಕೆ ಕೊಡಬೇಕು ಎಂದು ಹನೀಶಾ ಹೇಳಿದಾಗ ಕುಪಿತಗೊಂಡ ಆದೀಲ್ ಏಕಾ ಏಕಿ ಚಾಕುವಿನಿಂದ ಹನೀಶಾಳ ಹೊಟ್ಟೆಗೆ ಇರಿದಿದ್ದಾನೆ ಈ ವೇಳೆ ಆಕೆ ಕಿರುಚಿದ್ದಾಳೆ ಇದರಿಂದ ಗಾಬರಿಗೊಂಡ ಆದೀಲ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ ಆತನನ್ನು ಹಿಂಬಾಲಿಸಿದ ಪುರಸಭಾ ಸದಸ್ಯ ರಂಗಸ್ವಾಮಿ ಮತ್ತು ಅವರ ಸ್ನೇಹಿತರು ಆರೋಪಿಯನ್ನು ದೊಡ್ಡಪೇಟೆ ರಸ್ತೆ ಬಳಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ,

ಸ್ವಾತಂತ್ರ್ಯ ಆಚರಣೆಯ ಸಂದರ್ಭದಲ್ಲಿ ಪ್ಯಾಲೆಸ್ಟೈನ್ ಬಾವುಟ ಹಾರಿಸುವ ಪ್ರಯತ್ನ

0

ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಒಂದು ಕೋಮಿನ ಯುವಕರ ಗುಂಪು ಪ್ಯಾಲೈ ಸ್ತಾನ್ ಬಾವುಟವನ್ನು ಹಾರಿಸುವ ಪ್ರಯತ್ನ ಮಾಡಿದ್ದಾರೆ,

ಇನ್ನೊಂದು ಕೋಮುವಿನ ಯುವಕರು ಬಾವುಟ ಹಾರಿಸುವ ಪ್ರಯತ್ನಕ್ಕೆ ತಡೆ ಒಡ್ಡಿದ್ದಾರೆ ನಂತರ ಪೊಲೀಸರ ವಶಕ್ಕೆ ನೀಡಿದ್ದು ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ,ವೇದಿಕೆಯ ಮುಂಬಾಗದಲ್ಲಿ ಹಲವಾರು ದೇಶಪರವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು ಮತ್ತೊಂದೆಡೆ ವೇದಿಕೆ ಹಿಂಭಾಗದಲ್ಲಿ ಒಂದು ಕೋಮುವಿನ ಯುವಕರು ಪ್ಯಾಲೈ ಸ್ಥಾನ್ ಬಾವುಟವನ್ನು ಹಾರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು,

ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಕುಣಿಗಲ್ ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್ ಭಾರತ ದೇಶದಲ್ಲಿ ಈ ನೆಲದ ಕಾನೂನು ರಾಷ್ಟ್ರಧ್ವಜ ರಾಷ್ಟ್ರಗೀತೆ ಸೇರಿದಂತೆ ರಾಷ್ಟ್ರಭಕ್ತಿಯ ವಿಚಾರದಲ್ಲಿ ಬಲಿಷ್ಠವಾಗಿದೆ ಇಂತಹ ಸಂದರ್ಭದಲ್ಲಿ ಕುಣಿಗಲ್ ನಂತಹ ನಗರದಲ್ಲಿ ಪ್ಯಾಲೆಸ್ಥಾನ್ ಬಾವುಟವನ್ನು ಹಾರಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೆಲಸ ಎಂದರು,

ಇಂತಹ ದುಷ್ಟ ಶಕ್ತಿಗಳನ್ನು ದಮನ ಮಾಡುವ ಪ್ರಯತ್ನವನ್ನು ಪೊಲೀಸರು ಮತ್ತು ಸರ್ಕಾರ ತಕ್ಷಣ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಪರಿಷತ್ ಮತ್ತು ಬಜರಂಗದಳದ ಪ್ರಮುಖರಾದ ಗಿರೀಶ್ ಮಾತನಾಡಿ ದೇಶ ಅಭಿಮಾನ ಬಿತ್ತಬೇಕಾದವರು ಧರ್ಮದ ಬೀಜವನ್ನು ಬಿತ್ತುತ್ತಿದ್ದಾರೆ ಇದರಿಂದ ವಿದೇಶದ ಬಾವುಟವನ್ನು ಭಾರತದ ಸ್ವಾತಂತ್ರ್ಯ ಸಂದರ್ಭದಲ್ಲಿ ಈ ಕೃತ್ಯ ಮಾಡಿದ ವ್ಯಕ್ತಿಗಳನ್ನ ಯಾವುದೇ ಮುಲಾಜಿಗೆ ಒಳಪಡದೆ ಕಾನೂನಿಗೆ ಗುರಿ ಪಡಿಸಬೇಕೆಂದರು

ಶೆಡ್ ಗೆ ಹೋದ ಸ್ನೇಹಿತರ ಕಥೆ ಕುಣಿಗಲ್ ಏನಾಗಿದೆ ನೋಡಿ ?

0

ಶೆಡ್ ಗೆ ಹೋಗೋಣ ಬಾ ಎಂದು ಗೆಳೆಯನನ್ನು ಕರೆದು ಕೊಲೆ ಮಾಡಿ ಆಸಾಮಿ ನಾಪತ್ತೆ ಆಗಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ

ಕೊಲೆಯಾದ ವ್ಯಕ್ತಿ ರವಿ (40) ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗರಹಳ್ಳಿ ಗ್ರಾಮದ ವಾಸಿಯಾಗಿದ್ದು ಕೆಲವು ದಿನಗಳಿಂದ ತನ್ನ ನಿತ್ಯದ ಗಾರೆ ಕೆಲಸ ಮುಗಿಸಿ ಸ್ನೇಹಿತನ ಜೊತೆ ಶೆಡ್ನಲ್ಲಿ ಮಲಗುತ್ತಿದ್ದ

ಸೋಮವಾರ ಶೆಡ್ ನಲ್ಲಿ ಕೊಲೆ ಆಗಿರುವುದಕ್ಕೆ ಪೊಲೀಸರಿಗೆ ಮಾಹಿತಿ ಬಂದಿದೆ ಮೃತಪಟ್ಟ ವ್ಯಕ್ತಿ ಪತ್ನಿ ಭಾಗ್ಯ ಹಾಗೂ ಮಗಳು ಸಂಧ್ಯಾ ಮತ್ತು ಮಗ ಹರ್ಷನನ್ನು ಅಗಲಿದ್ದಾರೆ,

ಜೊತೆಯಲ್ಲಿದ್ದ ಸ್ನೇಹಿತ ಶಿವಕುಮಾರ ಈತನನ್ನ ಕೊಲೆ ಮಾಡಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು ಆತನ ಫೋನ್ ಸ್ವಿಚ್ ಆಫ್ ಆಗಿದೆ 😂ತಲೆಮರಿಸಿಕೊಂಡಿರುವ ವ್ಯಕ್ತಿಯ ಶೋಧ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ,


ಗಾರೆ ಕೆಲಸಗಾರನಾಗಿದ್ದ ರವಿ ತನ್ನ ಸ್ನೇಹಿತ ಶೆಡ್ಡಿಗೆ ಹೋಗಿದ್ದಾಗ ಕೊಲೆಯಾಗಿದ್ದಾನೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಿವಕುಮಾರ್ ಹಾಗೂ ರವಿ ಸ್ನೇಹಿತರಾಗಿದ್ದರು. ಸ್ನೇಹಿತ ಶಿವಕುಮಾರ್ ಕರೆದ ಎಂದು ರವಿ ಭಾನುವಾರ ಶೆಡ್ಡಿಗೆ ತೆರಳಿದ್ದ.
ಶಿವಕುಮಾರ್ ಹಾಗೂ ರವಿ ನಡುವೆ ಶೆಡ್‌ನಲ್ಲಿ ಗಲಾಟೆ ನಡೆದಿರುವ ಶಂಕೆ ಇದೆ. ಇಬ್ಬರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿ ರವಿಯ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ತಲೆಯ ಮೇಲೆ ಹಾಲೋಬ್ರಿಕ್ಸ್ ಇಟ್ಟಿಗೆ ಎತ್ತಿ ಹಾಕಿ ಕೊಲೆ‌ ಮಾಡಲಾಗಿದೆ.


ಸ್ಥಳಕ್ಕೆ ತುಮಕೂರು ಎಎಸ್ಪಿ ಮರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕ ಯಾರೆಂದು ತಿಳಿಯಲು ತನಿಖೆಯನ್ನು ಮುಂದುವರಿಸಿದ್ದಾರೆ.

ಕುಣಿಗಲ್ ಅಮ್ಮ ದೇವಾಲಯದ ಬಾವಿ ತುಂಬ ಚಿನ್ನ ಬೆಳ್ಳಿ ತುಂಬಿರುವುದು ನಿಜಾನಾ??

0

ಬಹುತೇಕ ಕುಣಿಗಲ್ ವಾಸಿಗಳಿಗೆ ಸೇರಿದಂತೆ ರಾಜ್ಯಕ್ಕೆ ಕುಣಿಗಲ್ ಅಮ್ಮ ಪರಿಚಯ ಇಲ್ಲ
ವಿಶೇಷ ಏನು ಎಂದರೆ ಆ ಜಾಗದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಚಿನ್ನ ಬೆಳ್ಳಿ ವಜ್ರಗಳನ್ನ ಒಂದು ಬಾವಿಯಲ್ಲಿ ಹಾಕಿ ಮುಚ್ಚಿದ್ದರು ಎಂಬ ದಂತಕಥೆ ಇದೆ

ಸಾವಿರಾರು ವರ್ಷಗಳ ಹಿಂದೆ ಮರಾಠಿ ದೊರೆ ಒಬ್ಬ ಒಂದು ಹುಡುಗಿಯನ್ನು ಮೋಹಿಸಿದ ಎಂಬ ಕಾರಣಕ್ಕೆ ಆಕೆ ಮನನೊಂದು ಬೆಂಕಿಗೆ ಅಹುತಿ ಆಗಿ ನಂತರ ಕುಣಿಗಲ್ ಅಮ್ಮ ಆಗಿ ಬದಲಾವಣೆ ಆದ ಕಥೆ ಇದು
ಕುಣಿಗಲ್ ಗೆ ಅಧಿದೇವತೆ ಆಗಿರುವ ಈ ದೇವಾಲಯ ಶಿಥಿಲ ಅವಸ್ಥೆ ತಲುಪಿದೆ ರಾಜಕಾರಣಿಗಳು ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಕುಣಿಗಲ್ ಜನರು ಈ ದೇವಾಲಯವನ್ನು ಕಡೆಗಣಿಸಿದ್ದಾರೆ ಎಂಬ ನೋವಿದೆ
ಕುಣಿಗಲ್ ನಿಂದ ತುಮಕೂರಿಗೆ ಹೋಗುವ ಮಾರ್ಗ ಮಧ್ಯ ಚಿಕ್ಕ ಮಳಲವಾಡಿ ಎಂಬ ಗ್ರಾಮದಲ್ಲಿ ಇರುವ ರೇಷ್ಮೆ ಇಲಾಖೆ ಕಟ್ಟಡದ ಹಿಂಭಾಗದಲ್ಲಿ ಈ ದೇವಾಲಯ ಇದೆ,

ದೇವಾಲಯದ ಸುತ್ತ ಹತ್ತು ಹದಿನೈದು ಹುತ್ತಗಳಿದ್ದು ಈ ದೇವರು ಕೂಡ ಒಂದು ಹುತ್ತದಲ್ಲಿ ನೆಲೆಸಿದ್ದಾರೆ ಎಂಬುದು ವಿಶೇಷ ರಾಜ್ಯ ಸೇರಿದಂತೆ ಹೊರಭಾಗದಿಂದ ಆಯ್ದ ಭಕ್ತರು ಈ ದೇವಿಗೆ ನಡೆದುಕೊಳ್ಳುತ್ತಿದ್ದಾರೆ,
ಬೇಡಿ ಬರುವ ಭಕ್ತರಿಗೆ ಆಶೀರ್ವಾದ ಮಾಡುವ ಈ ಕುಣಿಗಲ್ ಅಮ್ಮ ನೇಮ ನಿಯಮಗಳು ಬಹಳ ಕಟ್ಟುನಿಟ್ಟಾಗಿವೆ,

ನೀವು ಕೂಡ ಈ ಭಾಗಕ್ಕೆ ಹೋದಾಗ ತಪ್ಪದೆ ಕುಣಿಗಲ್ ಅಮ್ಮ ದೇವಾಲಯಕ್ಕೆ ಭೇಟಿ ನೀಡಿ

ಕಾಲೇಜು ವಿದ್ಯಾರ್ಥಿಗಳ ಮುಂದೆ ಕಣ್ಣೀರು ಹಾಕಿದ ಮಂಡ್ಯ ಅಪರ ಜಿಲ್ಲಾಧಿಕಾರಿ

0

ತೆಂಗಿನ ಸಸಿ ನೆಡುವ ಗುಂಡಿ ತೆಗೆಯುವ ಕೂಲಿ ಮಾಡಿ ನಾಲ್ಕು ಸಾವಿರ ಸಂಪಾದಿಸಿ ಗುರಿ ಸಾಧಿಸಿದ್ದು ಅಂದು ತಾಯಿ ತೋರಿದ ಅಭಿಮಾನ ಬಡತನದ ನೋವು ನನ್ನನ್ನು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ ಆಗುವಂತೆ ಪ್ರೇರೇಪಣೆ ಮಾಡಿದೆ ಎಂದು ಡಾ. ಎಚ್ ಎಲ್ ನಾಗರಾಜು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ,

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ,,ಕ್ರೀಡೆ, ಎನ್ಎಸ್ಎಸ್, ರೋವರ್ ಮತ್ತು ರೆಂಜರ್ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಚಟುವಟಿಕೆ ಸಮಾರಂಭ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,

ತಾಲೂಕಿನ ಕೊತ್ತಕೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಜನಿಸಿ ಪ್ರತಿ ದಿನ ಹೊಲಗದ್ದೆಯಲ್ಲಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಪಡೆಯಲು ಬೇರೆಯವರ ಮನೆಯ ತೆಂಗಿನ ತೋಟದಲ್ಲಿ ಗುಂಡಿ ತೆಗೆಯುವ ಕೆಲಸ ಮಾಡಿ ಮೂರು ರೂಪಾಯಿ ಸಂಬಳ ಸಂಪಾದಿಸುತ್ತಿದ್ದೆ ಶಿಕ್ಷಣಕ್ಕೆ ಬೇಕಾದ ಅಗತ್ಯತೆಗಳನ್ನು ಈ ಕೂಲಿಯಿಂದಲೇ ಪೂರೈಸಿಕೊಂಡು ನಾನು ಬದುಕುತ್ತಿದ್ದೆ ಇಂತಹ ಸಂದರ್ಭದಲ್ಲಿ ಆಯಾಸದಿಂದ ಪ್ರಜ್ಞಹೀನನಾಗಿದ್ದಾಗ ತಾಯಿ ಮಗ ಸತ್ತನೆಂದು ಕಣ್ಣೀರು ಹಾಕಿದ ಘಟನೆಯನ್ನು ನೆನಪಿಸಿಕೊಂಡು ವೇದಿಕೆ ಮೇಲೆ ಕಣ್ಣೀರಿಟ್ಟರು,

ಈ ಘಟನೆಯಿಂದ ವೇದಿಕೆಯ ಮೇಲಿದ್ದ ಗಣ್ಯರು ಸೇರಿದಂತೆ ವಿದ್ಯಾರ್ಥಿಗಳ ಕಣ್ಣಲ್ಲಿ ನೀರುಜಿನುಗಲು ಆರಂಭಿಸಿತ್ತು,ತಾವು ಅನುಭವಿಸಿದ್ದ ಬಡತನ ಹಾಗೂ ಛಲದಿಂದ ಶಿಕ್ಷಣ ಕಲಿತ ಹಲವಾರು ಘಟನೆಗಳನ್ನು ವಿವರವಾಗಿ ವಿದ್ಯಾರ್ಥಿಗಳಿಗೆ ಹೇಳುವ ಮುಖಾಂತರ ಅವರ ಮನಸ್ಸಿನಲ್ಲಿ ಹಲವಾರು ಚೈತನ್ಯದ ಶಕ್ತಿ ತುಂಬುವ ಪ್ರಯತ್ನ ಮಾಡಿದರು,ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ ಜೀವನದಲ್ಲಿ ಕಾಲೇಜು ಜೀವನ ಉತ್ತಮ ಸುಖಕರ ಆಗಬಾರದು ಶ್ರಮ ಶ್ರದ್ಧೆ ನಿಷ್ಠೆ ಸಾಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮುಂದಿನ ನಿಮ್ಮ ಬದುಕು ಸುಖಕರ ಆಗುತ್ತದೆ ಎಂದರು,

ಕಾಲೇಜು ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾಕ್ಟರ್ ಗೋವಿಂದರಾಯ ಮಾತನಾಡಿ ಕಾಲೇಜಿನಲ್ಲಿ ಕಲಿಯುವ ವಿದ್ಯಾಭ್ಯಾಸ ನಿಮ್ಮ ಶಿಕ್ಷಣದ ಗುಣಮಟ್ಟ ಮತ್ತು ಅಂಕವನ್ನು ಬದಲಿಸುತ್ತದೆ ಜೊತೆ ಜೊತೆಯಲ್ಲಿ ತಂದೆ ತಾಯಿ ಗುರು ಹಿರಿಯರು ಸಮಾಜ ಸ್ನೇಹಿತರು ಇವರುಗಳಿಂದ ಕಳೆಯುವ ಶಿಕ್ಷಣ ನಿಮ್ಮ ಸಂಸ್ಕಾರದ ಜೊತೆಗೆ ಉತ್ತಮ ಬಾಂಧವ್ಯವನ್ನು ಸಮಾಜದಲ್ಲಿ ಬೆಳೆಸುತ್ತದೆ ಎಂದರು,ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಯಬೇಕೆಂದು ಸಲಹೆ ನೀಡಿದರು ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಅಭಿನಂದಿಸಲಾಯಿತು,ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಪ್ರೊ ಮಾಯಾ ಸಾರಂಗಪಾಣಿ,ಪ್ರೊ ರಾಮಾ ನಂಜಪ್ಪ, ಡಾ. ಶಿವಕುಮಾರ್, ಡಾ. ರವೀಶ್ ಜಿಎಸ್, ಪ್ರೊ ಹನುಮಂತಪ್ಪ ಪ್ರೊ ನಾರಾಯಣದಾಸ್ ಪ್ರೊ ಶ್ರೀನಿವಾಸ ಪ್ರಭು ಪ್ರೊ ನಾಗಮ್ಮ ಪ್ರೋ ಸುರೇಶ್ ಪ್ರೊ ರುಕ್ಮಿಣಿ ಸೇರಿದಂತೆ ಹಲವಾರು ಕಾಲೇಜು ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರೂ