Saturday, August 29, 2026

ಡಿಸಿಎಂ ಹಾಗೂ ತುರುವೇಕೆರೆ ಶಾಸಕರಿಗೆ ಕಾಂಗ್ರೆಸ್ ಅಪಮಾನ -ಜೆಡಿಎಸ್ ಆರೋಪ

ಕುಣಿಗಲ್ :-

ಬರ ವೀಕ್ಷಣೆಗೆ ಬಂದ ಡಿಸಿಎಂ ಡಾ. ಜಿ ಪರಮೇಶ್ವರ್ ಮತ್ತು ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಗೆ ಸ್ಥಳೀಯ ಕಾಂಗ್ರೆಸ್ಸಿಗರು ಘೇರಾವ್ ಹಾಕುವ ಮುಖಾಂತರ ಅವರನ್ನು ಅಪಮಾನಗೊಳಿಸಿದ್ದಾರೆ ಇದು ಸರಿಯಲ್ಲ ಎಂದು ಜೆಡಿಎಸ್ ನ ಮುಖಂಡ ಬಿಎನ್ ಜಗದೀಶ್ ಆರೋಪಿಸಿದ್ದಾರೆ.

ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬರ ಅದ್ಯಯನಕ್ಕೆ ಬಂದಂತಹ ಸಚಿವರು ಅವರ ಕೆಲಸ ಮಾಡಲು ಬಿಡಲಿಲ್ಲ ಇದು ಕುಣಿಗಲ್ ಶಾಸಕ ಅವರ ಪ್ರಚಾರದ ಸಂಚು ಉಪಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯನ್ನು ತಪ್ಪಿಸಿ ಅವರನ್ನು ಕುಣಿಗಲ್ ಗೆ ಕರೆಸಿ ಅಪಮಾನಿಸಿರುವುದು ಸರಿಯಲ್ಲ.

ಕುಣಿಗಲ್ನಲ್ಲಿ ನೀರಾವರಿ ಸಮಸ್ಯೆ ಬಗೆಹರಿಸಬೇಕು ಎಂಬುದು ಅವರಿಗೆ ಉದ್ದೇಶವಿಲ್ಲ ಮಾಗಡಿ ಭಾಗಕ್ಕೆ ನೀರು ತೆಗೆದುಕೊಂಡು ಹೋಗಬೇಕೆಂಬುದು ಅವರ ಉದ್ದೇಶ ಆಗಿದೆ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗುವ ಕೆಲಸಕ್ಕೆ ನಮ್ಮ ಅಭ್ಯಂತರ ಇಲ್ಲ ಆದರೆ ಕುಣಿಗಲ್ ಪಾಲಿನ ನೀರನ್ನು ನಾವು ನೀಡಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಹಲವಾರು ಜೆಡಿಎಸ್ ಮುಖಂಡರು ಇದ್ದರು

About The Author

Related Articles

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles