ರಾಜ್ಯದಲ್ಲಿ ಅತಿಯಾದ ಬರ ಈ ಬಾರಿ ಉಂಟಾಗಲಿದೆ ಎದುರಿಸಲು ಅಧಿಕಾರಿಗಳು ಸಿದ್ದರಾಗಬೇಕು ಎಂದು ಡಿಸಿಎಂ ಡಾ. ಜಿ ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕುಣಿಗಲ್ ತಾಲೂಕಿನಲ್ಲಿ ಬರ ಅಧ್ಯಯನ ಪ್ರವಾಸ ಮುಗಿಸಿ ನಂತರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರ ಜೊತೆಗೂಡಿ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ನಾನು ಪಾವಗಡ, ಬಾಗಲಕೋಟೆ , ಕೊಪ್ಪಳ ಸೇರಿದಂತೆ ವಿವಿಧ ಭಾಗಗಳಲ್ಲಿ ಬರ ಅಧ್ಯಯನ ಮಾಡಿದ್ದೇನೆ ಇದೀಗ ಕುಣಿಗಲ್ ತಾಲೂಕಿನ ವಿವಿಧ ಭಾಗಗಳಲ್ಲಿ ಬರ ಅಧ್ಯಯನ ನಡೆಸಿದ್ದು ಇಲ್ಲಿನ ಹಲವಾರು ಅಡಿಕೆ ತೆಂಗು ಒಣಗಿವೆ ಮುಂದಿನ ದಿನಗಳಲ್ಲಿ ಅತಿಯಾದ ಬರಗಾಲ ಉಂಟಾಗಲಿದೆ ಇಂತಹ ಸಂದರ್ಭದಲ್ಲಿ ಕುಡಿಯುವ ನೀರು ಜಾನುವಾರುಗಳಿಗೆ ಮೇವಿನ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳು ಉಂಟಾಗಲಿದ್ದು ಅಧಿಕಾರಿಗಳು ತಮ್ಮ ಕೇಂದ್ರ ಸ್ಥಳದಲ್ಲಿ ಇದ್ದು ಬರವನ್ನು ಎದುರಿಸುವ ಜವಾಬ್ದಾರಿಯನ್ನ ಮಾಡಬೇಕಾಗಿದೆ ಎಂದರು,

ಬರಗಾಲದ ಹಿನ್ನೆಲೆಯಲ್ಲಿ ಜನರು ಗುಳೆ ಹೋಗುವುದು ಸಾಮಾನ್ಯ ಸಂಗತಿ ಯಾಗಿದೆ ಅದಕ್ಕಾಗಿ ಜಿ ರಾಮ್ ಜಿ ಯೋಜನೆಯಲ್ಲಿ ಹಲವಾರು ಮಾನವ ಕೂಲಿಗಳನ್ನು ಸೃಷ್ಟಿ ಮಾಡಲಾಗಿದೆ ಈಗಾಗಲೇ ಸುಮಾರು 50 ಸಾವಿರ ಮಾನವ ದಿನಗಳ ಮಂಜೂರಾತಿ ಮಾಡಲಾಗಿದ್ದು ಸ್ಥಳೀಯವಾಗಿ ಹಲವಾರು ಕಾಮಗಾರಿಗಳು ಕೆರೆ ಹೂಳು ತೆಗೆಯುವ ಕಾರ್ಯಕ್ರಮ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ರೈತರಿಗೆ ನೀಡುವ ಮುಖಾಂತರ ಜನ ಗುಳೆ ಹೋಗುವುದನ್ನು ತಡೆಯಬೇಕೆಂದರು.
ಮುಖ್ಯಮಂತ್ರಿಗಳು ಪ್ರಜಾ ಸೇವೆ ಎಂಬ ಹೊಸ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಅದರಿಂದ ಸಾಮಾಜಿಕ ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕೆಲಸ ಸುಲಭ ಆಗಲಿದೆ ಅಧಿಕಾರಿಗಳು ಅದಕ್ಕೆ ಸ್ಪಂದಿಸಬೇಕಾಗಿದೆ ಕ್ರಮ ಜರುಗಿಸಲು ಸರ್ಕಾರ ಸಿದ್ದ ಇದೆ ಎಂದರು,ರಾಜ್ಯದಲ್ಲಿ ಅತಿ ಹೆಚ್ಚು ಬಡತನ ಇದೆ ಬಹುತೇಕ ಬಡವರು ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ ಕುಡಿಯುವ ನೀರಿನ ಸಮಸ್ಯೆ ಇಂದು ಕೂಡ ಜೀವಂತವಾಗಿದೆ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸರ್ಕಾರ ನೀಡುವ ಸವಲತ್ತುಗಳನ್ನು ನೀಡುತ್ತಿದ್ದರು ಕೂಡ ಅದು ಸಮರ್ಪಕ ಆಗುತ್ತಿಲ್ಲ ರಾಜ್ಯದ 164 ತಾಲೂಕುಗಳು ಅತಿಯಾದ ಭರದ ಹಿನ್ನೆಲೆಯಲ್ಲಿ ಕಷ್ಟ ಅನುಭವಿಸುತ್ತಿವೆ ಮುಂದಿನ ದಿನಗಳಲ್ಲಿ ಅಂತಹ ತಾಲೂಕುಗಳಿಗೆ ಸರ್ಕಾರ ಬರಗಾಲ ಘೋಷಣೆ ನಂತರ ವಿವಿಧ ಸವಲತ್ತು ನೀಡುತ್ತದೆ ಎಂದರು,ಜಾನುವಾರುಗಳಿಗೆ ಮೇವಿನ ಸಮಸ್ಯೆಯನ್ನು ಬಗೆಹರಿಸುವ ಹಿನ್ನೆಲೆಯಲ್ಲಿ ಈಗಾಗಲೇ ಕೆಎಂಎಫ್ ಜೊತೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಅವರು ನೀಡುವ ಬಿತ್ತನೆ ಬೀಜಗಳನ್ನು ನೀರು ಇರುವ ರೈತರುಗಳು ಬೆಳೆಸಿ ತಮ್ಮ ಜಾನುವಾರುಗಳಿಗೆ ಮೇವಿನ ಪೂರೈಕೆ ಮಾಡಿ ಎಂದು ಮನವಿ ಮಾಡಿದರು,
ಬರಗಾಲದಲ್ಲಿ ರೈತರು ಬೆಳೆ ನಷ್ಟ ಮಾಡಿಕೊಳ್ಳುತ್ತಾರೆ ಈ ಸಂದರ್ಭದಲ್ಲಿ ರೈತರಿಂದ ವಂತಿಕೆ ಪಡೆದಂತ ವಿಮಾ ಕಂಪನಿಗಳು ಸರಿಯಾದ ರೀತಿಯಲ್ಲಿ ರೈತರಿಗೆ ನೀಡಬೇಕಾದ ಸವಲತ್ತುಗಳನ್ನು ಹಾಗೂ ಮರುಪಾವತಿಯನ್ನು ನೀಡುತ್ತಿಲ್ಲ ಈ ಬಗ್ಗೆ ಕಟ್ಟುನಿಟ್ಟು ಕ್ರಮವನ್ನು ಜರಗಿಸಬೇಕಾದ ಅವಶ್ಯಕತೆ ಇರುವುದರಿಂದ ಮುಂದಿನ ದಿನಗಳಲ್ಲಿ ವಿಮಾ ಕಂಪನಿಗಳ ಜೊತೆ ಸಭೆ ನಡೆಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಇರುವ ಬಹುತೇಕ ಮಳೆಮಾಪನ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಇದರಿಂದ ನಮಗೆ ಮಳೆಯ ಪ್ರಮಾಣ ಪೂರಕ ಪರಿಪೂರ್ಣ ಸತ್ಯಂಶ ತಿಳಿಯುವಲ್ಲಿ ತೊಂದರೆ ಆಗುತ್ತಿದೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಮಾಪನವನ್ನು ದುರಸ್ತಿ ಮಾಡುವ ಕೆಲಸವನ್ನು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್..ತುಮಕೂರು ಡಿ ಸಿ ಶುಭಕಲ್ಯಾಣ್ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಇದ್ದರು . .

